Lakshmi

  • Baare kamalakshiye

    Composer : Shri Narasimha vittala ಬಾರೆ ಕಮಲಾಕ್ಷಿಯೇ ಪ್ರೀಯಳೆ [ಪ]ಚಿನ್ನದ ಮಂಟಪ ಉನ್ನತ ಮೇಲ್-ಕಟ್ಟುಚೆನ್ನಗಿ ಅಲಂಕಾರ ಮಾಡುತಲಿರುವರು [ಅ.ಪ] ಅರಿಶಿನ ಕುಂಕುಮ ಇರಿಸುತಲಿರುವರುಪರಿ ಪರಿ ವಿಧದಿಂದ ಪಾಡುತಲಿರುವರು [೧] ವರಸಖಿಯರೆಲ್ಲ ಚೆನ್ನಗಿ ನಿಂತಿರೋರುನಮ್ಮ ನರಸಿಂಹವಿಠಲನ ಪಾಡುತಲಿರುವರು [೨] baare kamalAkShiyE prIyaLe [pa]chinnada maMTapa unnata mEl-kaTTuchennagi alaMkAra mADutaliruvaru [a.pa] arishina kuMkuma irisutaliruvarupari pari vidhadiMda pADutaliruvaru [1] varasakhiyarella chennagi niMtirOrunamma narasiMhaviThalana pADutaliruvaru [2]

  • Lakshmi Shobhane

    Composer : Shri Vadirajaru Lyrics acc to paata audios of Shri Vishwapriya Tirtharu – Adamaru MaTha. ಶೋಭಾನವೆನ್ನಿರೆ ಸುರರೊಳು ಸುಭಗನಿಗೆಶೋಭಾನವೆನ್ನಿ ಸುಗುಣನಿಗೆಶೋಭಾನವೆನ್ನಿರೆ ತ್ರಿವಿಕ್ರಮರಾಯಗೆಶೋಭಾನವೆನ್ನಿ ಸುರಪ್ರಿಯಗೆ ಶೋಭಾನೆ ||ಪ|| ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆಪಕ್ಷಿವಾಹನ್ನಗೆರಗುವೆಪಕ್ಷಿವಾಹನ್ನಗೆರಗುವೆ ಅನುದಿನರಕ್ಷಿಸಲಿ ನಮ್ಮ ವಧೂವರರ ||೧|| ಪಾಲಸಾಗರವನ್ನು ಲೀಲೆಯಲಿ ಕಡೆಯಲುಬಾಲೆ ಮಹಾಲಕ್ಷುಮಿ ಉದಿಸಿದಳುಬಾಲೆ ಮಹಾಲಕ್ಷುಮಿ ಉದಿಸಿದಳಾ ದೇವಿಪಾಲಿಸಲಿ ನಮ್ಮ ವಧುವರರ ||೨|| ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿಸುಮ್ಮನೆಯಾಗಿ ಮಲಗಿಪ್ಪನಮ್ಮ ನಾರಾಯಣಗು ಈ ರಮ್ಮೆಗಡಿಗಡಿಗುಜನ್ಮವೆಂಬುವುದು ಅವತಾರ ||೩|| ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರಅಂಬುಜವೆರಡು…

  • Seeteya bhumi

    Composer : Shri Vijaya dasaru ಸೀತೆಯ ಭೂಮಿಜಾತೆಯ ಜಗ-|ನ್ಮಾತೆಯ ಸ್ಮರಿಸಿ ವಿಖ್ಯಾತೆಯ ||ಪ|| ಕ್ಷೀರ ವಾರಿಧಿಯ ಕುಮಾರಿಯ ತನ್ನ |ಸೇರಿದವರ ಭಯಹಾರಿಯ ||ತೋರುವಳು ಮುಕ್ತಿಹಾರಿಯ ಸರ್ವ |ಸಾರ ಸುಂದರ ಶ್ರೀನಾರಿಯ ||೧|| ಈಶಕೋಟಿಯೊಳ್ ಗಣನೆಯ ಸ್ವಪ್ರ-|ಕಾಶವಾದ ಗುಣಶ್ರೇಣಿಯ ||ಈಶಾದ್ಯರ ಪೆತ್ತ ಕರುಣಿಯ ನಿ-|ರ್ದೋಷ ವಾರಿಧಿ ಕಲ್ಯಾಣಿಯ||೨|| ವಿಜಯವಿಠ್ಠಲನ್ನ ರಾಣಿಯ ಪಂ-|ಕಜಮಾಲೆ ಪಿಡಿದ ಪಾಣಿಯ ||ವಿಜಯಲಕ್ಷ್ಮಿ ಗಜಗಮನೆಯ ನಿತ್ಯ |ಸುಜನ ವಂದಿತೆ ಅಹಿವೇಣಿಯ ||೩|| sIteya BUmijAteya jaga-|nmAteya smarisi viKyAteya ||pa|| kShIra vAridhiya kumAriya…

error: Content is protected !!