-
Karuniso Ranga
Composer: Shri Purandara dasaru ಕರುಣಿಸೋ ರಂಗ ಕರುಣಿಸೋಕೃಷ್ಣ ಕರುಣಿಸೋ ರಂಗ ಕರುಣಿಸೋ |ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ||ಪ|| ರುಕುಮಾಂಗದನಂತೆ ವ್ರತವ ನಾನರಿಯೆ |ಶುಕಮುನಿಯಂತೆ ಸ್ತುತಿಸಲು ಅರಿಯೆ |ಬಕವೈರಿಯಂತೆ ಧ್ಯಾನವ ಮಾಡಲರಿಯೇ|ದೇವಕಿಯಂತೆ ಮುದ್ದಿಸಲೂ ಅರಿಯೆನೋ ||೧|| ಗರುಡನಂದದಿ ಪೊತ್ತು ತಿರುಗಲು ಅರಿಯೆ |ಕರಿಯಲು ಅರಿಯೆ ಕರಿರಾಜ ನಂತೆ |ವರಕಪಿಯಂತೆ ದಾಸ್ಯವ ಮಾಡಲರಿಯೇ |ಸಿರಿಯಂತೆ ನೆರೆದು ಮೋಹಿಸಲು ಅರಿಯೆನೋ ||೨|| ಬಲಿಯಂತೆ ದಾನವ ಕೊಡಲು ಅರಿಯೆ |ಭಕ್ತಿ ಛಲವನು ಅರಿಯೇ ಪ್ರಹ್ಲಾದನಂತೆ |ವರಿಸಲು ಅರಿಯೆ ಅರ್ಜುನನಂತೆ…
-
Kandena Na Kanasinali
Composer: Shri Purandara dasaru ಕಂಡೆ ನಾ ಕನಸಿನಲಿ ಗೋವಿಂದನ|| ಪ. ||ಕಂಡೆ ನಾ ಕನಸಿನಲಿ ಕನಕರತ್ನದ ಮಣಿಮಯ |ನಂದನ ಕಂದ ಮುಕುಂದನ ಚರಣವ || ಅ. ಪ. || ಅಂದುಗೆ ಕಿರುಗೆಜ್ಜೆ ಘಲಿರೆಂಬ ವಾದ್ಯದಿಬಂದು ಕಾಳಿಂಗನ ಹೆಡೆಯನೇರಿ ||ಧಿಂ ಧಿಮಿ ಧಿಮಿಕೆಂದು ತಾಳಗಳಿಂದಾ –ನಂದದಿ ಕುಣಿವ ಮುಕುಂದನ ಚರಣವ || 1 || ಉಟ್ಟ ಪೀತಾಂಬರ ಉಡಿಯ ಕಾಂಚನದಾಮತೊಟ್ಟ ಮುತ್ತಿನ ಹಾರ ಕೌಸ್ತುಭವು ||ಕಟ್ಟಿದ ವೈಜಯಂತಿ ತುಲಸಿ ವನಮಾಲೆಇಟ್ಟ ದ್ವಾದಶನಾಮ ನಿಗಮಗೋಚರನ || 2 ||…
-
Krishna Kaaliya kaayda
Composer : Shri Vadirajaru ಕೃಷ್ಣ ಕಾಲಿಯ ಕಾಯ್ದ ಕರುಣಿ ಜಿಷ್ಣು ಸಖನೆ ಕೃಷ್ಣನೆ [ಪ] ಕೃಷ್ಣ ಪೊರೆಯೊ ಎನ್ನ ವಿಷಯ ತೃಷ್ಣೆಯಿಂ ಸಾಯಲೆ ದಮ್ಮಯ್ಯ [ಅ.ಪ] ಹಿಂದೆ ಮಾಡಿದ ಕರ್ಮದಡವಿಯೊಂದಿಗೆ ಸವರುವೆನೊ,ಗೋ-ವಿಂದ ನಿನ್ನ ಕರುಣಸುಧೆ ಇನ್ನೆಂದು ಪಡೆದುಸುಖಿಪೆನೊ,ಇಂದು ಮಾಡಿದ ಅಘಗಳು ಬಲು ದಂದುಗಕೊಳಗಾದೆನೀನು, ಕುಂದು ಕುಜನದೂರ ನಿನ್ನ ಕಂದನೆಂದುಸಲಹೊ ತಂದೆ [೧] ಕಾಮವೆನ್ನ ಕಮಲನಾಭ ಸೀಮೆಗಾಣಲಿಯ್ಯದೊ ನಿಸ್ಸೀಮಮಹಿಮ ಕ್ರೋಧ ಎನ್ನ ಸಾಮವ ನಡುಗಿಸುತಿದೆ,ಭ್ರಮಿತನಾದೆ ಬಲು ಪ್ರೇಮವ ತಪ್ಪಿಸಿ ಸುರಕ್ತಾನು ಹೆ,ದೈವ ಎನ್ನ ಆ ಮಹಾಭಯವ ನಿವಾರಿಸೊ…
