Hari

  • Intha prabhuva kaneno

    Composer : Shri Vijayadasaru ಇಂಥಾ ಪ್ರಭುವ ಕಾಣೆನೋ ಈಜಗದೊಳ-ಗಿಂಥಾ ಪ್ರಭುವ ಕಾಣೆನೋ ||ಪ|| ಇಂಥಾ ಪ್ರಭುವ ಕಾಣೆ ಶಾಂತ ಮೂರುತಿ ಜಗ-ದಂತರಂಗನು ಲಕ್ಷ್ಮೀಕಾಂತ ಸರ್ವಾಂತರ್ಯಾಮಿ ||ಅ.ಪ|| ಬೇಡಿದಿಷ್ಟವ ಕೊಡುವ-ಭಕ್ತರ ತಪ್ಪುನೋಡದೆ ಬಂದು ಪೊರೆವಗಾಡಿಕಾರನು ಗರುಡಾರೂಢ್ಯ ಗುಣವಂತ ಮಹಾಪ್ರೌಢ ಪ್ರತಾಪಿ ಜಗದಿಗೂಢದಿಂ ಸಂಚರಿಪಪಾಡಿ ಪೊಗಳಿ ಕೊಂಡಾಡುವವರ ಮುಂ-ದಾಡುತಲಿಪ್ಪನು ನಾಡೊಳಗಿದ್ದರುಕೇಡಿಗನೇ ನಾಡಾಡಿಗಳಂದದಿಈಡುಂಟೇನೋ ಈ ವೆಂಕಟಗೆ ||೧|| ನಿಗಮ ತತಿಗಳರಿಯದ- ನೀರಜಭವಾ-ದ್ಯಗಣಿತ ಸುರರು ಕಾಣದಜಗದೊಡೆಯನು ಭಕ್ತ-ರುಗಳಿಗೊಲಿದು ತ್ರಿಸ್ಥಾ-ನಗಳತ್ಯಜಿಸಿ ಕಲಿಯುಗದಿ ಭೂಮಿಗೆ ಬಂದಅಗಣಿತ ಸುಗುಣಾರ್ಣವ- ಶ್ರೀ ಹರಿಯೇಜಗದೊಳು ಸೇವಾದಿಗಳನು ಕೊಳುತಿಹಅಘಹರ ಮೋಕ್ಷಾದಿಗಳನೆ…

  • Shreesha uddhariso

    Composer : Shri Tande Shripati vittala ಶ್ರೀಶ ಉದ್ಧರಿಸೋ ಅಶೇಷ ಪಾಲಕಕರುಣಾ ಸಮುದ್ರನೆ ಶ್ರೀನಿವಾಸ | ಶ್ರೀಶ || ಪ || ದೋಷ ದೂರನೇ ನಿಜ ದಾಸರ ಸನ್ಮನ ಪೋಷಕ |ಕಲಿಕೃತ ದೋಷ ನಾಶಕ |ಸದ್ಗುಣ ಸುಮನನಿಧೇ |ವೀಶ ಗಮನ ಫಣೀಶ ಶಯನಸುರೇಶ ಮುಖ ತ್ರಿದಿವೇಶನುತ |ದಾಸ ಜನ ಸಹವಾಸ ಕೊಡು ಮಹಿದಾಸಈ ಭವ ಕ್ಲೇಶ ಕಳೆದು ||ಅ.ಪ|| ಕಮಲಜ ರಮಣ ಹೃತ್ ಕಮಲಸ್ಥತವಪಾದ ಕಮಲ ನಂಬಿದೆ ಎನ್ನ ಕುಮಲವ ಕಳೆಯೋ |ಕಮಲಜ ಪಿತ ನಿನ್ನ…

  • Bhaktajana Palaka

    Composer : Shri Vijayadasaru ಭಕ್ತಜನ ಪಾಲಕಾ, ಭಕ್ತಿ ಸುಖ ದಾಯಕಾ,ಮುಕ್ತೇಶ ದೀನಬಂಧೋ, ಕೃಷ್ಣಾ |ಯುಕ್ತಿಯಲಿ ನಿನ್ನಂಥ ದೇವರನು ನಾ ಕಾಣೇ,ಸತ್ಯವತೀ ಸುತನೇ ಕಾಯೋ, ಕೃಷ್ಣಾ || ಕೆಟ್ಟ ಜನರ ಸಂಗ ಇಷ್ಟು ದಿನವೂ ಮಾಡಿ,ಭ್ರಷ್ಟನಾಗಿ ಪೋದೇನೋ, ಕೃಷ್ಣಾ |ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ,ಇಷ್ಟಗಳ ಎಮಗೆ ಕೊಡಿಸೋ, ಕೃಷ್ಣಾ [೧] ಆನಂದತೀರ್ಥ ಮುನಿಯ ಧ್ಯಾನಿಪರ ಸಂಗ,ಆನಂದದಲಿ ನಿಲ್ಲಿಸೋ, ಕೃಷ್ಣಾ|ದೀನಜನ ಮಂದಾರ ನೀನೆಂದು ನಂಬಿದೆನೋ,ಸಾನುರಾಗದಲಿ ಕಾಯೋ, ಕೃಷ್ಣಾ [೨] ಅಜ ಜನಕ ಗಜ ವರದಾ, ಭುಜಗಶಯನನೇ ನಿನ್ನ,ಭಜಿಪ…

error: Content is protected !!