-
Bindu madhava
Composer : Shri Vadirajaru ಬಿಂದುಮಾಧವ ಮಾಡದಿರೆನಗೆ ತಂದೆ ಭೇದವಕಂದುಗೊರಳಾಧೀಶ ಕಾಶಿಯ ಪುರವಾಸಕಂದನ್ನ ತಡೆಯದೆ ಕಾಯನುದ್ಧರಿಸೊ [ಪ] ಮೋಕ್ಷದಾಯಕ ರಕ್ಷಿಸೊ ಎನ್ನ ಲಕ್ಷ್ಮೀ ನಾಯಕಕುಕ್ಷಿಯೀರೇಳು ಭುವನವ ತಾಳ್ವನಭಿಕ್ಷಾಪಾತ್ರ ಶಿವನ ಧ್ಯಾನದೊಳಿರಿಸೊ (೧) ಪಾಪನಾಶನ ಪಾಲಿಸೊ ಎನ್ನ ಸರ್ಪ ಭೂಷಣತಾತನೆಂದೆನಿಸಿ ತವ-ನಾಮ ಸ್ಮರಣೆಯಪಾರ್ವತೀಪತಿ ಯತಿ ಧ್ಯಾನದೊಳಿರಿಸೊ (೨) ಆದಿಮೂರುತಿ ವಿಶ್ವೇಶ ವಿಷ್ಣು-ಪಾದವೆ ಗತಿವೀರನೆಂದೆನಿಸುವ ಸೋದೆಯ ಪುರವಾಸವಾದಿರಾಜ ವರದ ವಂದೇ ಹಯವದನ (೩) biMdumAdhava mADadirenage taMde BEdavakaMdugoraLAdhISa kASiya puravAsakaMdanna taDeyade kAyanuddhariso [pa] mOkShadAyaka rakShiso enna…
-
Naliva Benneyanu meluva
Composer : Shri Vadirajaru ನಲಿವ ಬೆಣ್ಣೆಯನು ಮೆಲುವ ಕೃಷ್ಣನಮ-ಗೊಲಿವ ಖಳರನ್ನೆ ಕೊಲುವ [ಪ.] ನಗವ ಕರದಿಂದ ನೆಗೆವ ಅದರೊಳಗೆಪೋಗುವ ನರರ ಕಂಡು ನಗುವ (೧) ಕಡೆವ ಕೋಲನ್ನು ಪಿಡಿವ ಭೂಷಣವತೊಡುವ ಪಟ್ಟೆಗಳನುಡುವ (೨) ಬಡವರಭೀಷ್ಟಗಳ ಕೊಡುವದುರಿತಗಳ ಜಡಿವ ದೈತ್ಯರನು ಬಡಿವ (೩) ಶರಣ ನಾಯಕನ ಚರಣ ದ್ವಯಕೆಪುರಹರನ ಮಸ್ತಕಾಭರಣ (೪) ಶರಣ ಜನರ ಹಿತಕರಣ ಹಯವದನಸ್ಮರಣ ಭವಕೆ ಸಂಹರಣ (೫) naliva beNNeyanu meluva kRuShNanama-goliva KaLaranne koluva [pa.] nagava karadiMda negeva adaroLagepOguva…
-
Mannisenna Madhusudhana
Composer : Shri Vadirajaru ಮನ್ನಿಸೆನ್ನ ಮಧುಸೂದನ ||ಪ||ಮದನನಯ್ಯ ಮೋಹನ ಕಾಯಉನ್ನತ ಗುಣ ನಿಲಯಉಡುಪಿನ ಕೃಷ್ಣರಾಯ ||ಅ.ಪ|| ಶ್ರುತಿಗಳ ತಂದೆ ಮುನ್ನ ಸುರಮುನಿಗಳಮನ-ಕತಿ ಹರುಷವ ಕೊಟ್ಟೆ ಅಗಣಿತ ಗುಣರನ್ನಯತಿಗಳ ಪಾಲಿಸಿದೆ ಮುಂದುವರಿವ ದಿತಿಜರ ಸೋಲಿಸಿದೆಈ ಮಹಿಯೊಳು ಮತಿವಂತರ ಪೊರೆದೆ, ಮಹಿಮೆಯಿಂದ ಮೆರೆದೆ [೧] ಅಚ್ಚ ಹಾರ ಶೋಭಿತ ಕಂಠ ಆಶ್ರಿತರಿಗೆ ನೀ ನೆಂಟಮೆಚ್ಚಿದ ಪಾರ್ಥನ ಮಿತ್ರನೆನಿಸಿದೆ ಸುಚರಿತ್ರಮೆಚ್ಚಿದ ನಿನ್ನಯ ವೈಕುಂಠದ ಮುಚ್ಚಳ ತೆಗೆಸಲು ಶಕ್ತಅಚ್ಯುತ ನಿನ್ನ ಅರ್ಚಿಸಿದವ ಕೃತಾರ್ಥ, ಅವನೆ ಸರ್ವಸಮರ್ಥ [೨] ಎಂದೆಂದು ನಿನ್ನವರೊಳು ಎನ್ನ…
