Hari

  • Samsaravembantha bhagyavirali

    Composer : Shri Purandara dasaru ಸಂಸಾರವೆಂಬಂಥ ಭಾಗ್ಯವಿರಲಿ ||ಪ||ಕಂಸಾರಿ ನೆನವೆಂಬ ಸೌಭಾಗ್ಯವಿರಲಿ ||ಅ|| ತಂದೆ ನೀನೇ ಕೃಷ್ಣ, ತಾಯಿ ಇಂದಿರೆ ದೇವಿ,ಪೊಂದಿದ ಅಣ್ಣನು ವನಜ ಸಂಭವನು,ಇಂದುಮುಖಿ ಸರಸ್ವತೀ ದೇವಿಯೆ ಅತ್ತಿಗೆಯು,ಎಂದಿಂದಿಗೂ ವಾಯು ದೇವರೆ ಗುರುವು |೧| ಭಾರತೀ ದೇವಿಯೆ ಗುರು ಪತ್ನಿ ಎನಗೆ,ಗರುಡ ಶೇಷಾದಿಗಳೆ ಗುರು ಪುತ್ರರು,ಹರಿದಾಸ-ನೆಂಬುವರೆ ಇಷ್ಟ ಬಾಂಧವರೆನಗೆ,ಹರಿ ಭಜನೆ ನಡೆಯುತಿಹ ಸ್ಥಳವೆ ಮಂದಿರವು |೨| ಸರುವಾಭಿಮಾನವನು ತ್ಯಜಿಸುವುದೆ ಸುಸ್ನಾನ,ಹರಿಯ ನಾಮವೆ ಇನ್ನು ಅಮೃತಪಾನ,ವರದ ಪುರಂದರ ವಿಠ್ಠಲ ನಿನ್ನ ಪಾದ ಧ್ಯಾನ,ಕರುಣಿಸಿ ಅನವರತ ಕರಪಿಡಿದು…

  • Varada Kanchi varada

    Composer : Shri Gurugopaladasaru ವರದಾ ಕಂಚಿ ವರದಾ |ವರದಾ ನೀ ಪೊರೆಯೆಂದು ಕರೆಯಲಾಕ್ಷಣ ಬಂದುನೆರೆವೆ,ಬಂದು ನೆರೆವೆ ಅಭೀಷ್ಟವ ಗರೆವೆ | ಪ | ನಿರುತ ನಿನ್ನಯ ಚರಣ ಶರಣರಪೊರೆವ ಕಾರ್ಯ ಧುರಂಧರನೆ ಸಿರಿ | ಅ ಪ | ಮಡುವಿನೊಳ್ ಮಕರಿ ಕಾಲ್ ಪಿಡಿದು ಸೆಳೆಯೆ ಜನ-ಸರಿಯೆ,ಜನ ಸರಿಯೆ ತುತಿಸಿ ನಿನ್ನ ಕರೆಯೆ,ಮಡದಿಯೊಡನುಡಿ-ಯದಲೆ ಸಂಗಡ-ಎಡ ಬಲದವರ ಕಡೆಗೆ ನೋಡದೆ,ತಡೆಯದಲೆ ತಡಿಗೊದಗಿ ಕರಿಯತೊಡರ ಬಿಡಿಸಿದೆ ಕಡು ದಯಾನಿಧೆ | ೧ | ತೊಡೆಯಿಂದ ನಡೆಯೆಂದು ನುಡಿದು ಕೆಡಹೆ…

  • Dayavirali dayavirali damodara

    Composer : Shri Gopaladasaru ದಯವಿರಲಿ ದಯವಿರಲಿ ದಾಮೋದರಾ ||ಪ||ಸಯವಾಗಿ ಬಿಡದೆನ್ನಾ ಸಾಕುವ ಶ್ರೀಕೃಷ್ಣಾ ||ಅ.ಪ|| ಹೋಗುವಾ ಹಾದಿಯಲಿ ಹೋದ ಹಾಂಗೆಲ್ಲ ನಾಸಾಗುವವ ನಾನಲ್ಲ ನಿನ್ನ ಸ್ಮರಣೆಯ ಬಿಟ್ಟುತೂಗುವ ತೊಟ್ಟಿಲು ಕೊನೆಗೆ ಸ್ಥಳದಲ್ಲೇ ನಿಲುವಂತೆಹ್ಯಾಂಗೆ ನಡೆಸುವಿ ಹಾಂಗೆ ನಡಕೊಂಬೆ ಸ್ವಾಮಿ ||೧|| ಬಂದೆನೊ ನಾನಿಲ್ಲಿ ಬಹು ಜನ್ಮದಾ ಸುಕೃತ-ದಿಂದನಿನ್ನ ಬಳಿಗೆ ಇಂದಿರೇಶಾಒಂದು ಮಾತ್ರವು ಬಿಟ್ಟು ಸಕಲವು ಅರ್ಪಿಸಿದೆಬಂಧನವ ಕಡಿವ ಜ್ಞಾನ ಭಕುತಿ ಕೊಡೊ ಸ್ವಾಮಿ ||೨|| ಎನಗ್ಯಾವುದೂ ಒಲ್ಲೆ ಎಲ್ಲೆಲ್ಲಿ ಹೋದರೂಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನ…

error: Content is protected !!