Author: Daasa

  • Ondu Baari smarane salade

    Composer : Shri Vadirajaru ಒಂದು ಬಾರಿ ಸ್ಮರಣೆ ಸಾಲದೆ ಆ-ನಂದ ತೀರ್ಥರ ಪೂರ್ಣಪ್ರಜ್ಞರಸರ್ವಜ್ಞರಾಯರ ಮಧ್ವರಾಯರ ||ಪ|| ಪ್ರಕೃತಿ ಬಂಧದಲಿ ಸಿಲುಕಿಸಕಲ ವಿಷಯಗಳಲಿ ನೊಂದುಅಕಳಂಕ ಚರಿತ ಹರಿಯ ಪಾದಸೇರ ಬೇಕೆಂಬುವರಿಗೆ ||೧|| ಘೋರ ಸಂಸಾರಾಂಬುಧಿಗೆಪರಮಜ್ಞಾನವೆಂಬ ವಾಡೆಏರಿ ಮೆಲ್ಲನೆ ಹರಿಯ ಪಾದಸೇರ ಬೇಕು ಎಂಬುವರಿಗೆ ||೨|| ಹಿಂದನೇಕ ಜನ್ಮಗಳಲಿನೊಂದು ಯೋನಿಯಲ್ಲಿ ಬಂದುಇಂದಿರೇಶನ ಪಾದವನ್ನುಹೊಂದ ಬೇಕೆಂಬುವರಿಗೆ ||೩|| ಆರುಮಂದಿ ವೈರಿಗಳನುಸೇರದಂತೆ ಜರಿದುಧೀರನಾಗಿ ಹರಿಯ ಪಾದಸೇರ ಬೇಕೆಂಬುವರಿಗೆ ||೪|| ಹೀನ ಬುದ್ಧಿಯಿಂದ ಶ್ರೀಹಯವದನನ ಜರಿದುತಾನು ಬದುಕಲಾರದಿರಲುತೋರಿಕೊಟ್ಟ ಮಧ್ವಮುನಿಯ ||೫|| oMdu bAri…

  • Adavi Nilaya

    Composer : Shri Shyamasundara dasaru ಅಡವಿನಿಲಯ ನಿನ್ನಡಿಗೆರಗುವೆಕರ ಪಿಡಿದು ಪಾಲಿಸಯ್ಯ ||ಪ||ಮೃಡನುತ ಭಾರತಿ ಒಡೆಯನೆ ಪ್ರಾರ್ಥಿಪೆ |ಬಿಡಿಸು ಭವದ ಮಾಯಾ ||ಅ.ಪ|| ನಿನ್ನ ದರುಶನದಿ | ಎನ್ನ ಜನುಮಪಾವನ್ನ ವಾಯಿತಯ್ಯ |ನಿನ್ನನುಗ್ರಹವನ್ನು ಪಡೆದಸಂಪನ್ನರೊಳಿಡು ಜೀಯಾ ||೧|| ತರುಚರ ನರ ದ್ವಿಜ ವರರೂಪತ್ರಯಧರಿಸಿದಂತ ದೇವ ||ದುರುಳ ದೈತ್ಯ ಪರಿವಾರ ಗರ್ವಹರಶರಣರ ಸಂಜೀವ ||೨|| ಸೃಷ್ಟಿಯೊಳಗೆ ಅತಿ ಶ್ರೇಷ್ಠವೆಂದೆನಿಸಿದಕುಷ್ಟಗಿ ಪುರವಾಸಧಿಟ್ಟ ಮೂರುತಿ ಶಾಮಸುಂದರವಿಠ್ಠಲ ಪ್ರಿಯದಾಸ ||೩|| aDavinilaya ninnaDigeraguvekara piDidu pAlisayya ||pa||mRuDanuta bhArati oDeyane prArthipe |biDisu…

  • Madhwaraya guru madhwaraya

    Composer : Shri Purandara dasaru ಮಧ್ವರಾಯ ಗುರು ಮಧ್ವರಾಯ ಗುರುಮಧ್ವರಾಯ ಗುರು ಮಧ್ವರಾಯ |ಪ| ರಾಮಾವತಾರದೊಳೊಮ್ಮೆ ಮಧ್ವರಾಯನೀ ಮಹಾ ಹನುಮನಾದ್ಯೋ ಮಧ್ವರಾಯಕಾಮಿತಾರ್ಥ ಸುರರಿಗಿತ್ಯೋ ಮಧ್ವರಾಯಮುಷ್ಟಿಯಿಂದ ರಾವಣನ ಗೆದ್ಯೋ ಮಧ್ವರಾಯ ||೧|| ಕೃಷ್ಣಾವತಾರದೊಳೊಮ್ಮೆ ಮಧ್ವರಾಯನೀ ದಿಟ್ಟ ಕಲಿ ಭೀಮನಾದ್ಯೋ ಮಧ್ವರಾಯಕುಟ್ಟಿದ್ಯೋ ಕೌರವನೆಲ್ಲ ಮಧ್ವರಾಯ ಶ್ರೀಕೃಷ್ಣನ ಹಿತವ ಪಡೆದ್ಯೋ ಮಧ್ವರಾಯ ||೨|| ಧರಣಿಯೊಳು ಯತಿಯಾಗಿ ಮಧ್ವರಾಯದುರುಳ ಮಾಯಿ ಮದವ ಮುರಿದ್ಯೋ ಮಧ್ವರಾಯಗುರು ವ್ಯಾಸರ ಹಿತವ ಪಡೆದ್ಯೋ ಮಧ್ವರಾಯಪುರಂದರ ವಿಠ್ಠಲನ ದಾಸನಾದ್ಯೋ ಮಧ್ವರಾಯ ||೩|| madhvarAya guru madhvarAya gurumadhvarAya…

error: Content is protected !!