-
Ena bedalo ninna
Composer : Shri Vyasarajaru ಜಾರರ ಸಂಗದಿಂದ ಬಂದ ಪಾತಕಗೆಗೋಪಿ ಜಾರನೆಂದರೆ ಸಾಲದೆ ? ಚೋರರ ಸಂಗದಿಂದ ಬಂದ ಪಾತಕಗೆನವನೀತ ಚೋರ ಎಂದರೆ ಸಾಲದೆ ? ಹಿಂಸಕರ ಸಂಗದಿಂದ ಬಂದ ಪಾತಕಗೆಕಂಸ ಹಿಂಸಕನೆಂದರೆ ಸಾಲದೆ ? ಜಾರನೆಂದು ಚೋರನೇಂದು ಹಿಂಸಕಾರನೆಂದುನಾ ನೆನೆಯಲು ನಮೋ ನಮೋ ನಮೋ ಸಿರಿ ಕೃಷ್ಣ || ಏನ ಬೇಡಲೊ ನಿನ್ನ ದೇವಾಧಿ ದೇವ [ಪ]ಏನಹುದೊ ನಿನ್ನೊಳಗೆ ಮಹಾನುಭಾವ [ಅ.ಪ] ಮನೆಯ ಬೇಡಲೆ ವನಧಿ ಹಾಸಿಗೆಯು ವಟಪತ್ರವನಿತೆಯರ ಬೇಡಲೆ ಬ್ರಹ್ಮಚಾರಿಘನ ಸಖ್ಯವನು ಬಯಸೆ ನೆನೆಯುವರ…
-
Kolalanooduva
Composer : Shri Vyasarajaru ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯತಳಿರಂದದಿ ತಾ ಪೊಳೆವ ಕರದಿ ಪಿಡಿದು ||ಪ|| ನಾದದಿ ತುಂಬಿತು ಗೋವರ್ಧನಗಿರಿಯಾದವಕುಲ ಘನ ತೊರೆದಿತು ಖಗಕುಲಸಾಧಿಸಿ ನೋಡಲು ಕೃಷ್ಣನು ಈಗಲುಸಾಧ್ಯವೆನೆ ಬೃಂದಾವನದೊಳು ||೧|| ಮೇವು ಮರೆತವು ಗೋವುಗಳೆಲ್ಲವುಸಾವಧಾನದಿ ಹರಿದಳು ಯಮುನೆಆವು ಕಾವುತಲಿ ಗೋವಳನೆಲ್ಲರಹಾವ ಭಾವದಲಿ ಬೃಂದಾವನದೊಳು ||೨|| ಸುರರು ಸುರಿದರಾಕಾಶದಿ ಸುಮಗಳಸರಿದು ಪೋಗಿ ನೋಡೆ ಬೃಂದಾವನದೊಳು |ಸಾರಿ ಸಾರಿ ಶ್ರೀ ಕೃಷ್ಣನು ಈಗಲುತುರಗಳ ತಾ ಕಾಯ್ವ ಕದಂಬ ವನದೊಳು ||೩|| koLalanUduva caduranyAre pELammayyataLiraMdadi tA poLeva karadi…
-
Entu pogaLalo ninna
Composer : Shri Vyasarajaru ಎಂತು ಪೊಗಳಲೊ ನಿನ್ನ ಯತಿಕುಲ ಶಿರೋರನ್ನ |ಪ|ಶಾಂತ ಮಧ್ವಾಚಾರ್ಯ ಸಂತ ಕುಲವರ್ಯ |ಅ.ಪ| ಪ್ರಥಮಾವತಾರದಲಿ ವ್ರತದಿ ರಾಮನ ಭಜಿಸಿಅತಿ ಪಂಥದಿಂದ ಶರಧಿಯನು ದಾಟಿಕ್ಷಿತಿಜೆಗಂಕಿತವಿತ್ತು ಪೂದೋಟವನು ಕಿತ್ತೆಪ್ರತಿಗಾಣೆ ನಿನಗೆ ಅಪ್ರತಿ ಪರಾಕ್ರಮಿಯೆ |೧| ದ್ವಿತಿಯಾವತಾರದಲಿ ದೇವಕೀಜನ ಕಂಡುಸತಿಗೆ ಕಾಮಿಸಿದವನ ಸಾಹಸದಿ ಸದೆದೆಪ್ರತಿಯಾದ ಮಾಗಧನ ಪೃತನದಲಿ ನೀ ಕೊಂದೆಪ್ರತಿಯ ಕಾಣೆನೊ ನಿನಗೆ ಮೂರ್ಜಗದೊಳಗೆ |೨| ತೃತಿಯಾವತಾರದಲಿ ತ್ರಿಜಗನುತಿಸಲು ಬಂದುಯತಿಯಾಗಿ ಮಹಾ ಮಹಿಮನನು ಭಜಿಸಿದೆಕ್ಷಿತಿಗಧಿಕ ಉಡುಪಿಯಲಿ ಕೃಷ್ಣನ್ನ ನಿಲಿಸಿಪ್ರತಿಮತ ಮತವ ಮುರಿದೆ ಪೂರ್ಣಪ್ರಜ್ಞ ಮುನಿವರನೆ |೩|…
