-
Adidanokuliya
Composer : Shri Purandara dasaru ಆಡಿದನೋಕುಳಿಯ ನಮ್ಮ ರಂಗಆಡಿದನೋಕುಳಿಯ |ಪ|ರಂಬಿಸಿ ಕರೆದು ಚುಂಬಿಸಿ ಒಗೆದನುರಂಭೇರಿಗೋಕುಳಿಯ |ಅ| ಕದಂಬ ಕಸ್ತೂರಿಯ ಅಳಿಗಂಧದ ಓಕುಳಿಯಬಂದರು ಹೊರಗಿನ್ ನಾರೇರಾಡುತತಂದ ಚೆಂದದಿ ಓಕುಳಿಯ |೧| ಪಟ್ಟೆ ಮಂಚದ ಮೇಲೆ ನಮ್ಮರಂಗ ಇಟ್ಟ ಮುತ್ತಿನ ಹಾರಬಟ್ಟ ಕುಚಕ್ಕೆ ಕಣ್ಣಿಟ್ಟುಒಗೆದನು ಕುಟ್ಟಿದನೋಕುಳಿಯ |೨| ಆರ್ಹತ್ತು ಸಾವಿರ ಗೋಪಸ್ತ್ರೀಯರೆಲ್ಲರ ಕೂಡೆಮಾರನಯ್ಯ ಶ್ರೀ ಪುರಂದರವಿಠಲಹಾರಿಸಿ ಓಕುಳಿಯ |೩| ADidanOkuLiya namma raMgaADidanOkuLiya |pa|raMbisi karedu cuMbisi ogedanuraMBErigOkuLiya |a| kadaMba kastUriya aLigaMdhada OkuLiyabaMdaru horagin nArErADutataMda…
-
Krishna Krishna Krishna endu
Composer : Shri Vyasarajaru ಕೃಷ್ಣ ಕೃಷ್ಣ ಕೃಷ್ಣ ಎಂದುಮೂರು ಬಾರಿ ನೆನೆಯಿರೊ [ಪ]ಸಂತುಷ್ಟನಾಗಿ ಮುಕುತಿ ಕೊಟ್ಟುಮಿಕ್ಕ ಭಾರ ಹೊರುವನೊ |ಅ.ಪ| ಸಕಲ ವೆದಾ ಶಾಸ್ತ್ರ ಪಠಿಸಿಸಾರವನ್ನು ತಿಳಿದರೇನುಮಕರ ಕುಂಡಲ ಧರನನಾಮಕೆ ಸರಿಯಿಲ್ಲವೊಕೃಷ್ಣ ಕೃಷ್ಣ ಕೃಷ್ಣ ||೧|| ಕಮಲನಾಭನ ಚಿನ್ನೆಯನುಧರಿಸಿ ಕೊಂಡು ಮೆರೆಯಿರೋಯಮನ ಭಟರು ಅಂಜಿಓಡಿ ಅಡವಿ ಪೋಗುವರೊ ||೨|| ಜನ್ಮ ವೆತ್ತಿ ಮಧ್ವ ಮತವಅನುಸರಿಸಿ ನೆಡೆಯಿರೋಸುಮ್ಮಾನದಿ ಶ್ರೀ ಕೃಷ್ಣತನ್ನ ಲೋಕ ಕೊಡುವನೋ ||೩|| kRuShNa kRuShNa kRuShNa eMdumooru bAri neneyiro [pa]saMtuShTanAgi mukuti koTTumikka…
-
Aratiyanettidare – Keshava pancharatna
Composer : Shri Vadirajaru ಆರತಿಯನೆತ್ತಿದರೆ ಕೇಶವ ನಾರಾಯಣಗೆ ||ಪ||ಶಾಶ್ವತವೀವ ಮಾಧವವಾಸವವಂದ್ಯ ಗೋವಿಂದಗೆ ||ಅ.ಪ|| ದ್ವಾಪರ ರಹಿತ ಶ್ರೀವಿಷ್ಣುವಿಗೆಅಪಾರ ಮಧುಸೂದನಗೆಪಾಪರಹಿತ ತ್ರಿವಿಕ್ರಮಗೆಆರತಿಯನೆತ್ತಿದರೆ |೧| ಸಾಧುಸೇವಿತ ವಾಮನಗೆಶ್ರೀಧರ ಹೃಷೀಕೇಶನಿಗೆಆದಿಮೂರುತಿ ಪದ್ಮನಾಭಗೆಆರತಿಯನೆತ್ತಿದರೆ |೨| ದಾಮ-ಉದರದಾಲುಳ್ಳವಗೆಪ್ರೇಮದಿ ಸಂಕರುಷಣಗೆಕಾಮಿತಾರ್ಥವನೀವ ವಾಸುದೇವಗೆಆರತಿಯನೆತ್ತಿದರೆ |೩| ಘನಮಹಿಮ ಪ್ರದ್ಯುಮ್ನನಿಗೆಅನಿರುದ್ಧ ಪುರುಷೋತ್ತಮಗೆವಿನಯದಿಂದಲಿ ಅಧೋಕ್ಷಜಗೆಆರತಿಯನೆತ್ತಿದರೆ |೪| ನರಸಿಂಹರೂಪನಾದವಗೆವರದ ಮೂರುತಿ ಅಚ್ಯುತಗೆಅರಿಭಯಂಕರ ಜನಾರ್ದನಗೆಆರತಿಯನೆತ್ತಿದರೆ |೫| ಉಪೇಂದ್ರನೆಂದೆನಿಸಿಕೊಂಡವಗೆಅಪಾರಮಹಿಮ ಶ್ರೀಹರಿಗೆಗೋಪಾಲಮೂರುತಿ ಶ್ರೀಕೃಷ್ಣಗೆಆರತಿಯನೆತ್ತಿದರೆ |೬| ಚತುರವಿಂಶತಿ ಮೂರುತಿಗಳಾಅತಿಶಯ ಧವಳವ ಪಾಡೆಚತುರ ಪುರುಷರಿಷ್ಟಾರ್ಥವ,ಈವನು ಸಿರಿ ಹಯವದನ |೭| Aratiyanettidare kEshava nArAyaNage ||pa||shAshvatavIva mAdhavavAsavavaMdya gOviMdage ||a.pa||…
