Author: Daasa

  • Mangala mukhyaprananige

    Composer : Shri Vyasarajaru ಮಂಗಳ ಮುಖ್ಯ ಪ್ರಾಣನಿಗೆ [ಪ]ಜಯ ಮಂಗಳ ವಾಯುಕುಮಾರನಿಗೆ [ಅ.ಪ] ಅಂಜನಾದೇವಿಯ ಕಂದಗೆ ಮಂಗಳಕಂಜಾಕ್ಷ ಹನುಮಂತಗೆ ಮಂಗಳಸಂಜೀವನ ತಂದಾತಗೆ ಮಂಗಳಸಜ್ಜನ ಪರಿಪಾಲಗೆ ಮಂಗಳ [೧] ಅತಿ ಬಲವಂತ ಶ್ರೀಭೀಮಗೆ ಮಂಗಳಪ್ರತಿಮಲ್ಲರ ಗೆಲಿದವಗೆ ಮಂಗಳಸತಿಯ ಸೀರೆಯ ಸೆಳೆಯ ಬಂದವನಪೃಥ್ವಿ ಮ್ಯಾಲೆ ಕೆಡಹಿದಾತಗೆ ಮಂಗಳ [೨] ಸರಸ ಸುಶಾಸ್ತ್ರವ ಪೇಳ್ದವಗೆ ಮಂಗಳನಿರುತ ಶ್ರೀರಾಮರ ಭಂಟಗೆ ಮಂಗಳದೊರೆ ಶ್ರೀ ಕೃಷ್ಣನ ಪೂಜೆಯ ಮಾಡುವಗುರು ಮಧ್ವ ಮುನಿರಾಯರಿಗೆ ಮಂಗಳ [೩] maMgaLa muKya prANanige [pa]jaya maMgaLa vAyukumAranige…

  • Govinda govinda krishna

    Composer : Shri Vyasarajaru ಗೋವಿಂದ ಗೋವಿಂದ ಕೃಷ್ಣ ಹರಿ [ಪ]ಗೋವಿಂದ ಮುಕುಂದ ಗೋಪಾಲಕೃಷ್ಣ [ಅ.ಪ] ಕಡೆಗಣ್ಣಿಲಿಂದೊಮ್ಮೆ ನೋಡೋನಿ-ನ್ನಡಿಗೆರಗುವೆನೋ ನೀ ದಯಮಾಡೋಬಿಡದೆನ್ನ ನಿನ್ನವರೊಳು ಕೂಡೋಎ-ನ್ನೊಡೆಯ ನಿತ್ಯಾನಂದ ನೀ ನಲಿದಾಡೋ [೧] ಮಕ್ಕಳಿಗೊಡೆಯ ನೀನಾಗಿಹಸುಮಕ್ಕಳ ಕೂಡೆ ನೀನಾಡ ಹೋಗಿಸಿಕ್ಕದೆ ಬಹು ದಿನಕಾಗಿ ದಿಂಧಿ-ಮಿಕ್ಕೆಂದು ಕುಣಿಸುವೆ ಬಾ ಚೆನ್ನಾಗಿ [೨] ಹೃದಯ ಕಮಲದೊಳಗೆನ್ನನಿನ್ನ ಪದಕಮಲವ ನೀ ದಯಗೈಯೊ ಮುನ್ನಚದುರ ಕುಣಿಯೊ ಚೆಲ್ವರನ್ನ ವಿ-ಬುಧರೊಡೆಯನೆ ನಿತ್ಯಾನಂದ ಶ್ರೀ ಕೃಷ್ಣ [೩] gOviMda gOviMda kRuShNa hari [pa]gOviMda mukuMda gOpAlakRuShNa [a.pa]…

  • Enna bimba murutiya

    Composer : Shri Vyasarajaru ಎನ್ನ ಬಿಂಬಮೂರುತಿಯ ಪೂಜಿಪೆ ನಾನುಮನಮುಟ್ಟಿ ಅನುದಿನ ಮರೆಯದೆ ಮರೆಯದೆ ||ಪ|| ಗಾತ್ರವೆ ಮಂದಿರ ಹೃದಯವೆ ಮಂಟಪನೇತ್ರವೆ ಮಹದೀಪ ಹಸ್ತ ಚಾಮರವುಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರಶಾಸ್ತ್ರ ಮಾತುಗಳೆಲ್ಲ ಮಂತ್ರಂಗಳು ||೧|| ನುಡಿವ ಶಬ್ದಗಳೆಲ್ಲ ಹೂವುಗಳಾಯಿತುನಡೆವುದೆಲ್ಲವು ಬಹು ನಾಟ್ಯಂಗಳುಉಡುವ ಹೊದಿಕೆಯೆಲ್ಲ ಉಚಿತವಾದ ವಸ್ತ್ರಕೊಡುವ ಭೂಷಣವೆಲ್ಲ ದಿವ್ಯಾಭರಣ ||೨|| ಧರಿಸಿದ ಗಂಧವೆ ಚರಣಕ್ಕೆ ಗಂಧವುಶಿರದಲ್ಲಿ ಮುಡಿಯುವ ಪುಷ್ಪವೆ ಮಾಲೆಸ್ಥಿರವಾಗಿ ಕೂಡಿದ ಬುದ್ಧಿಯೆ ಆರುತಿಅರಿತೊಡಲಿಗೆ ಉಂಬನ್ನವೆ ನೈವೇದ್ಯ ||೩|| ಎನ್ನ ಸ್ವರೂಪವೆಂಬುದೆ ರನ್ನಗನ್ನಡಿಎನ್ನ ಮನೋವೃತ್ತಿ ಎಂಬುದೆ ಛತ್ರಇನ್ನು…

error: Content is protected !!