Author: Daasa

  • Hanumanta nee balavanta

    Composer : Shri Purandara dasaru ಹನುಮಂತ ನೀ ಬಲವಂತ ಜಯವಂತನಯ್ಯಾ |ಅನುಮಾನವಿಲ್ಲ ಆನಂದತೀರ್ಥ ರಾಯಾ || ಪ || ರಾಮ ಸೇವಕನಾಗಿರಾವಣನ ಪುರವ |ನಿರ್ಧೂಮವನುಮಾಡಿದಿ ಮುಷದೊಳಗೆ |ಭೂಮಿ ಪುತ್ರಿಗೆಮುದ್ರಿ ಉಂಗುರವಿತ್ತು |ಪ್ರೇಮ ಕುಲವನು ಶ್ರೀ ರಾಮಪದಗರ್ಪಿಸಿದೆ || ೧ || ಕೃಷ್ಣಾವತಾರದಲಿ ಭೀಮನಾಗ್ ಅವತರಿಸಿ |ದುಷ್ಟ ದೈತ್ಯರನೆಲ್ಲಸಂಹರಿಸೀದೀ |ದುಷ್ಟ ಹೀನರಧೃತರಾಷ್ಟ್ರ ವಂಶವನ್ನು |ಕಷ್ಟವಿಲ್ಲದೆ ಕೊಂದು ಶ್ರೀ ಕೃಷ್ಣ ಪದಗರ್ಪಿಸಿದೆ || ೨ || ಪತಿತ ಸಂಕರ ಹುಟ್ಟಿ ಮತವೆಲ್ಲ ಕೆಡಿಸಾಲು |ಮತಿಹೀನರಾದ ಸಜ್ಜನರಿಗೆಲ್ಲಾ |ಅತಿ ವೇಗದಲಿ…

  • Neneyiro neneyiro hoonoora

    Composer : Shri Prasannavenkata dasaru [on Hunoora Hanuma] ನೆನೆಯಿರೊ ನೆನಯಿರೊ ಹೂನೂರ ಹನುಮನ್ನ |ಅನುವಾಗಿ ವಲಿವಾ ಶ್ರೀ ರಾಮದೂತನ್ನ [ಪ] ವನದಿಯ ಲಂಘಿಸಿ ವನವನವ ಶೋಧಿಸಿ |ವನಜಾಕ್ಷಿ ಪದಕೆರಗಿ ವನಜನಾಭನಂಕಿತದಿ |ದನುಜನಾ ಸಭೆಯೊಳಗೆ ದಲ್ಲಣ ಮೂಡಿಸಿದಾ |ಘನ ಭಕುತಿ ವೈರಾಗ್ಯ ನಿಧಿಯೆನಿಸಿ ಮೆರೆವಾ [೧] ಕುಂತಿಯ ಗರ್ಭದಿ ಅಂತುಜನಿಸಿ ರಕ್ಕಸರ |ಅಂತ್ಯಗೈದು ಶ್ರೀಕಾಂತಗೆ ಪರಮಾಪ್ತನೆನಿಸಿದ ||ಪಂಥವಾಡಿ ದಾಯಾದಿ ಹಂತಕ ಬಲವಂತಾ |ಕಂತುಪಿತನ ಸೇವೆಗೆ ನಿಂತ ಹೂನೂರ ಕಾಂತಾ [೨] ಪಂಚಭೇದ ಪ್ರಪಂಚ ಸತ್ಯವೆಂದೆನ್ನುತಾ |ಮುಂಚಿನ…

  • Turchigiriyallondu roopadi

    Composer : Shri Prasannavenkata dasaru [on Tulasigeri Bheema] ತುರ್ಚಿಗಿರಿಯಲ್ಲೊಂದು ರೂಪದಿ ನಿಂದಾ |ಅಚ್ಯುತನ್ನ ಪರಮಾಪ್ತಾ ಹನುಮಂತಾ [ಪ] ಸ್ವೋಚಿತ ಕರ್ಮಗಳಾಚರಿಪಜ್ಞಗೆ |ಯೋಚಿತ ಫಲವನು ಬಾಚಿ ಕೊಡುತಲಿ [ಅ.ಪ] ದ್ವಂದ್ವಾತೀತಾನಂದಿತ ಸುಂದರ |ಸಿಂಧು ಬಂಧನನ ಬಂಧುರ ಭಕುತಾ |ಚೆಂದದಿ ಸುಂದರಿಗಾನಂದನ ಮನ |ಸಂದೇಶವನೆ ನೀಡಿ ಬಂದ ಧರನ [೧] ದ್ಯುಮಣಿತೇಜ ಭೂಮಂಡಲಕಸಮ |ಭೀಮನಾಗಿ ದಮನಿತರನು ಮಣಿಸಿದಕಾಮಿಸಿ ಭಾಮೆಯನಾಮಂತ್ರಿಸಿದಾ |ಕುಮತಿ ಕೀಚಕನ ಅಸುವ ದಮಿಸಿ ಈ [೨] ಕಲಿಬಲದಿಂ ಕಂಗಾಲಾಗುತ ನೆಲೆ |ಯಿಲ್ಲದಲೆಯುತಿಹ ವಲ್ಲರಿ ವರ್ಗವ |ಲಲಿತ…

error: Content is protected !!