-
Shri Tulasiya sevisi
Composer : Shri Vijayadasaru ಶ್ರೀ ತುಳಸಿಯ ಸೇವಿಸಿ || ಪ ||ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆಗಾತರದ ಮಲವಳಿದು ಮಾತೆಯೆಂಬನಿತರೊಳುಪಾತಕ ಪರಿಹರಿಸಿ ಪುನೀತರನು ಮಾಡುವಳುಯಾತಕನುಮಾನವಯ್ಯ || ಅ.ಪ || ಸುಧೆಗಡಲ ಮಥಿಸುವ ಸಮಯದಲಿ ವೈದ್ಯನಾಗಿಪದುಮನಾಭನು ತಾನು ಉದುಭವಿಸಿ ಬರಲಂದುಉದುರಿದುವು ಕಣ್ಣಿಂದ ಉದಕ ಉತ್ಸಹದಿಂದಲದೆ ತುಳಸಿ ನಾಮನಾಗೆ ||ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರುಒದಗಿ ಸುಜನರು ತಮ್ಮ ಸದನದಲಿ ನಿತ್ಯ ಸ –ತ್ಪದವಿಗೆ ಸಿದ್ಧವೆಂದು ಮುದದಿಂದ ತಿಳಿದುವೃಂದಾವನ ರಚಿಸಿದರೈಯ || ೧ || ಮೂಲದಲಿ ಸರ್ವ ತೀರ್ಥಗಳುಂಟು ತನ್ಮಧ್ಯೆಕಾಲ ಮೀರದೆ…
-
Shri Tulasi mahimeyanu – Dirgha kriti
Composer : Shri Prasannavenkata dasaru ಶ್ರೀ ತುಳಸಿ ಮಹಿಮೆಯನು ಪೊಗಳಲಳವಲ್ಲ ಶ್ರೀನಾಥ ನಾರಾಯಣನ ಅರ್ಚನೆಗೆ ಸರ್ವದಾಪ್ರೀತಿಕರಳಾಗಿ ರಾಜಿಪಳು ಕಲಿಯುಗದಲ್ಲಿನೋಂತವರ ಭಾಗ್ಯವೆಂತೊ ||ಪ|| ಶ್ರೀಮದಾರ್ಜಿತ ಕ್ಷೀರವಾರಿಧಿಯ ಮಥಿಸುತಿರೆಆ ಮಹಾವಿಷ್ಣುವಿನ ನೇತ್ರದಿಂದಲಿ ಹೊರಟಪ್ರೇಮಜಲದುದ್ಭವಿಸಿ ನಳನಳಿಸಿದಿವ್ಯ ಆಮೋದ ಪೂರ್ಣಳಾಗಿಭೂಮಿ ಪಾವನವ ಮಾಡುತಲಿ ಭೂನಿರ್ಜರರಧಾಮ ಧಾಮಗಳಲ್ಲಿ ವೃಂದಾವನದಿ ನೆಲಸಿಕಾಮಿತ ಫಲವನೀವ ಕಲ್ಯಾಣಿ ಕೃಷ್ಣನಿಗೆನೇಮದಿಂ ಪ್ರಿಯಳಾದ (೧) ಈ ಮನುಜ ದೇಹದಲಿ ದಾವ ಪ್ರಾಣಿಯು ಪಿತೃಸ್ತೋಮವನ್ನ್-ಉದ್ಧರಿಪೆನೆಂದರೆ ಸುಲಭ ಸಾಧ್ಯಕೋಮಲ ದಳವನೊಂದು ತಂದು ಮಾಧವನಚರಣ ತಾಮರಸ-ಕರ್ಪಿಸುವದುತಾ ಮುನ್ನ ಮಾಡಿದಘ ಪಂಚಕಗಳೋಡಿದವುಸಾಮಾನ್ಯವಲ್ಲ ತುಳಸಿಯ ವನವ ಸೋಂಕಿ…
-
Vrundavanave mandiravagihe
Composer : Shri Purandara dasaru ವೃಂದಾವನವೇ ಮಂದಿರವಾಗಿಹೆಇಂದಿರೆ ಶ್ರೀ ತುಳಸಿ ||ನಂದನಂದನ ಮುಕುಂದಗೆ ಪ್ರಿಯಳಾದ |ಚಂದದ ಶ್ರೀ ತುಳಸಿ ||ಪ|| ತುಳಸಿಯ ದಳದಲಿ ಹರಿಯಿಹನೆಂಬುದು |ಶ್ರುತಿ ಸಾರುತಲಿದೆ ಕೇಳಿ |ತುಳಸೀ ದರ್ಶನದಿಂದ ದುರಿತಗಳೆಲ್ಲಹರಿದು ಪೋಗೊದು ಕೇಳಿ ||ತುಳಸೀ ಸ್ಪರ್ಶನದಿಂದ ದೇಹ ಪಾವನವೆಂದುನೀವೆಲ್ಲ ತಿಳಿದು ಕೇಳಿ |ತುಳಸೀ ಸ್ಮರಣೆ ಮಾಡಿ ಸಕಲೇಷ್ಟಗಳ ಪಡೆದುಸುಖದಲಿ ನೀವು ಬಾಳಿ [೧] ಮೂಲಮೃತ್ತಿಕೆಯನು ಧರಿಸಿದ ಮಾತ್ರದಿಮೂರುಲೋಕ ವಶವಗುವುದು |ಮಾಲೆಗಳನೆ ಕೊರಳಲಿಟ್ಟ ಮನುಜಗೆ ಮುಕ್ತಿಮಾರ್ಗವ ನೀವುದು ||ಕಾಲಕಾಲಗಳಲಿ ಮಾಡಿದ ದುಷ್ಕರ್ಮತಡೆದು ಬಿಸುಟು ಪೋಪುದು…
