-
Aparadhi Nanalla
Composer: Shri Purandara dasaru ಅಪರಾಧಿ ನಾನಲ್ಲ ಅಪರಾಧವೆನಗಿಲ್ಲಕಪಟ ನಾಟಕ ಸೂತ್ರಧಾರಿ ನೀನೇ ||ಪ|| ನೀನೇ ಆಡಿಸದಿರಲು ಜಡ ಒನಕೆಯ ಬೊಂಬೆಏನು ಮಾಡಲು ಬಲ್ಲುದು ತಾನೆ ಬೇರೆನೀನಿಟ್ಟ ಸೂತ್ರದಿಂ ಚಲಿಪವು ಕೈಕಾಲುಗಳುನೀನೇ ಮುಗ್ಗಿಸಲು ಮುಗ್ಗುವ ದೇಹದವನು || ಒಂದೆಂಟು ಬಾಗಿಲ ಪಟ್ಟಣಕ್ಕೆ ತನ್ನ-ದೆಂದು ಇಪ್ಪತ್ತಾರು ಮನೆಯಾಳ್ಗಳತಂದು ಕಾವಲ ನಿಲಿಸಿ ಎನ್ನ ನೀ ಒಳಗಿಟ್ಟಮುಂದೆ ಭವದಲಿ ಭವಣಿಪುದನ್ಯಾಯ || ಯಂತ್ರ ವಾಹಕ ನೀನೇ ಒಳಗಿದ್ದು ಎನ್ನ ಸ್ವ-ತಂತ್ರನೆಂದೆನಿಸಿ ಕೊಲಿಸುವರೆ ಹೇಳೊಕಂತು ಪಿತ ಲಕ್ಷ್ಮೀಶ ಎಂತಾದಡಂತಹುದಾ-ನಂತ ಮೂರುತಿ ನಮ್ಮ ಪುರಂದರ…
-
Ambiga Naa Ninna
Composer: Shri Purandara dasaru ಅಂಬಿಗ ನಾ ನಿನ್ನ ನಂಬಿದೆಜಗದಂಬಾರಮಣ ನಿನ್ನ ನಂಬಿದೆ [ಪ] ತುಂಬಿದ ಹರಿಗೋಲಂಬಿಗಅದಕೊಂಬತ್ತು ಛಿದ್ರ ನೋಡಂಬಿಗಸಂಬ್ರಮದಿಂದ ನೀನಂಬಿಗಅದರಿಂಬು ನೋಡಿ ನಡೆಸಂಬಿಗ [೧] ಹೊಳೇಯ ಭರವ ನೋಡಂಬಿಗಅದಕೆ ಸೆಳೆವು ಘನವಯ್ಯ ಅಂಬಿಗಸುಳಿಯೊಳು ಮುಳುಗಿದೆ ಅಂಬಿಗಎನ್ನ ಸೆಳೆದು ಕೊಂಡೊಯ್ಯೋ ನೀನಂಬಿಗ [೨] ಆರು ತೆರೆಯ ನೋಡಂಬಿಗಅದುಮೀರಿ ಬರುತಲಿದೆ ಅಂಬಿಗಯಾರಿಂದ ಲಾಗದು ಅಂಬಿಗಅದ ನಿವಾರಿಸಿ ಧಾಟಿಸೋ ಅಂಬಿಗ [೩] ಸತ್ಯ ವೆಂಬುದೆ ಹುಟ್ಟಂಬಿಗಸದಾ ಭಕ್ತಿ ಎಂಬುದೆ ಪಥವಂಬಿಗಯುಕ್ತಿದಾಯಕ ನಮ್ಮ ಪುರಂದರ ವಿಠಲ,ಮುಕ್ತಿ ಮಂಟಪಕೊಯ್ಯೋ ಅಂಬಿಗ [೪] aMbiga…
-
Ajnanigala Kooda adhika
Composer: Shri Purandara dasaru ಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತಸುಜ್ಞಾನಿಗಳ ಕೂಡ ಜಗಳವೆ ಲೇಸು [ಪ] ಉಂಬುಡುವುದಕ್ಕಿರುವ ಅರಸನೋಲಗಕ್ಕಿಂತತುಂಬಿದೂರೊಳಗೆ ತಿರಿದುಂಬುವುದೆ ಲೇಸುಹಂಬಲಿಸಿ ಹಾಳು ಹರಟೆ ಹೊಡೆಯುವುದಕಿಂತನಂಬಿ ಹರಿದಾಸರೊಳ್-ಆಡುವುದೆ ಲೇಸು [೧] ಒಡನೆ ಹಂಗಿಸುವವನ ಪಾಲೋಗರಕ್ಕಿಂತಕುಡಿ ನೀರ ಕುಡಿದು ಕೊಂಡಿರುವುದೆ ಲೇಸುಬಿಡದೆ ಕಡಿದಾಡುವವರ ನೆರೆಯಲ್ ಇಹುದಕಿಂತಅಡವಿಯೊಳಗ್ ಅಜ್ಞಾತವಾಸವೇ ಲೇಸು [೨] ಮಸೆದು ಮತ್ಸರಿಪ ಸತಿಯೊಡನೆ ಸಂಸಾರಕ್ಕಿಂತಹಸನಾದಾ ಹಾಳು ಗುಡಿಗಳೆ ಲೇಸುಭಿಸಜಾಕ್ಷ ಪುರಂದರ ವಿಠ್ಠಲನ ನೆನೆನೆನೆದುವಸುಧೆಯೋಳು ಚಿರಕಾಲ ಇರುವುದೆ ಲೇಸು [೩] aj~jAnigaLa kUDa adhika snEhakkiMtasuj~jAnigaLa kUDa jagaLave…
