Nambi necchadirelo

Composer : Shri Vijayadasaru

ನಂಬಿ ನೆಚ್ಚದಿರೆಲೋ ನರಲೋಕ ಸ್ಥಿರವೆಂಬೋ
ಅಂಬಲಿ ಪರಮಾನ್ನ |ಪ|

ಹಂಬಲಿಸುತಲಿರೋ ಹರಿ ಲೋಕಾನಂದವೆಂಬೋ
ಪೀಯೂಷ ಪಾನ |ಅ.ಪ|

ದುರುಳ ಜನರ ಸಂಗವೆಂಬೋದೆ ಎಂದಿಗೂ
ನೊಣ ಬೆರೆಸಿದ ಊಟ |
ಪರಮ ಭಾಗವತರ ಪದಸಂಗವೆಂಬೋದು
ಮಸ್ತಕಮಣಿ ಮುಕುಟ |
ಮರೆ ಮೋಸಗೊಳಿಸುವ ಸತಿಸುತರೆಂಬೋರೆ
ಕೇವಲ ಯಮ ಕಾಟ |
ಪರತತ್ವನಾದ ಶ್ರೀ ಹರಿಯನೇ ತಿಳಿಯೋದೆ
ವೈಕುಂಠಕೆ ಓಟ |೧|

ಅಲ್ಪ ಆಯುಷ್ಯವೆ ಈ ಶರೀರವು
ಗಾಳಿಗಿಕ್ಕಿದ ದೀಪ |
ಅಲ್ಪ ಸಂತೋಷಿಯಾಗು ಅದು ನಿನಗೆ
ನೋಡೋ, ಹಾಲು ಸಕ್ಕರೆ ತುಪ್ಪ |
ಬಲುಪಂಥ ಮಾಡದಿರು ಜನುಮ
ಜನುಮಗಳಲಿ ಬಿಡದೀ ಸಂತಾಪ |
ಸ್ವಲ್ಪ ಕಾಲಾದರೂ ಮಧ್ವ ಮತವ
ಪೊಂದು ಭವವೇ ನಿರ್ಲೇಪ |೨|

ಭಾವ ವಿರಕುತೀಯ ಧರಿಸದಿದ್ದರೆ
ನೋಡು, ಆಗುವುದು ಖೇದ |
ಸಾವಿರಕ್ಕೊಂದೇ ಮಾತು ಹರಿದಾಸನೆನಿಸೋದೆ
ಪರಿಪರಿಯಲಿ ಸ್ವಾದ |
ದೇವಕೀಸುತ ನಮ್ಮ ವಿಜಯ
ವಿಠಲನಂಘ್ರಿ ತೀರಥಪ್ರಸಾದ |
ಸೇವಿಸದ ನರ ನಿತ್ಯ ನರಕ ವಾಸಿ
ಎನ್ನುತಲಿದೆ ವೇದ |೩|


naMbi neccadirelO naralOka sthiraveMbO
aMbali paramAnna |pa|

haMbalisutalirO hari lOkAnaMdaveMbO
pIyUSha pAna |a.pa|

duruLa janara saMgaveMbOde eMdigU
noNa beresida UTa |
parama BAgavatara padasaMgaveMbOdu
mastakamaNi mukuTa |
mare mOsagoLisuva satisutareMbOre
kEvala yama kATa |
paratatvanAda SrI hariyanE tiLiyOde
vaikuMThake OTa |1|

alpa AyuShyave I SarIravu
gALigikkida dIpa |
alpa saMtOShiyAgu adu ninage
nODO, hAlu sakkare tuppa |
balupaMtha mADadiru januma
janumagaLali biDadI saMtApa |
svalpa kAlAdarU madhva matava
poMdu BavavE nirlEpa |2|

BAva virakutIya dharisadiddare
nODu, Aguvudu KEda |
sAvirakkoMdE mAtu haridAsanenisOde
paripariyali svAda |
dEvakIsuta namma vijaya
viThalanaMGri tIrathaprasAda |
sEvisada nara nitya naraka vAsi
ennutalide vEda |3|

You might also like

error: Content is protected !!