Explanation by Shri Kesava Rao Tadipatri
ರಾಗ: bouLi
ಧೃವ ತಾಳ:
ಏನಾದರೇನು ನಿನ್ನ ಧ್ಯಾನವ ಬಿಡುವೆನೆ |
ಏನಾದರಾಗಲಿ ಎನಗಿಂದೀಗ |
ಶ್ರೀನಿವಾಸನೆ ನಿನ್ನ ಧ್ಯಾನದಿಂದಲಿ ಕರೆದು |
ಆನೀಗ ನಿರುತಾರ್ಚನೆ ಮಾಡುವೆ |
ನಾ ನಾ ಕರ್ಮದ ಶ್ರೇಣಿ ಇಂದಲಿ |
ಸೋ |ಪಾನವಾಗುವ ಗತಿಗೆ ಅನಂತ ಜನುಮದಲ್ಲಿ |
ಕಾಣೆನೊ ಧ್ಯಾನ ಸಮಾನವಾದ ಭಕುತಿ |
ಈ ನಿರಂತರದಲ್ಲಿ ಜ್ಞಾನ ಶೂನ್ಯ |
ನಾನಾಗಿ ತಿಳಿಯದೆ ನೀನೆಂಬೋದು ಮರದು |
ಧ್ಯಾನ ಹೀನನಾಗಿ ಮಾನಾ ವಳಿದೆ |
ಕ್ಷೋಣಿಧರನೆ ನಮ್ಮ ವಿಜಯವಿಠ್ಠಲ ನಿನ್ನ |
ಧ್ಯಾನವರಿದ ಮೇಲೆ ಮಾಣುವದೆಂತೋ ||೧||
ಮಟ್ಟತಾಳ:
ಧ್ಯಾನವೆ ಗತಿಗೆ ಪ್ರಧಾನವೆನುತಲಿ |
ಜ್ಞಾನಿಗಳು ತಿಳಿದು ಆನಂದವಾಗುತ್ತ |
ಗಾನವ ಮಾಡುವರು ಆನಂದಗತಿಯಲ್ಲಿ |
ಧ್ಯಾನ ವಿನಾ ವನಜ ಸೂನುವಿಗಾದರೂ |
ಗೇಣವನೀ ಇಲ್ಲಾ ಈ ನುಡಿಯನು ಕೇಳಿ |
ನಾನು ನೆಚ್ಚಿದೆ ನಿನ್ನ |
ಶ್ರೀನಿವಾಸಮೂರ್ತಿ ವಿಜಯವಿಠ್ಠಲ |
ಎನಗೆ ಧ್ಯಾನವೆಗತಿ ನಿಧಾನದ ಪದವಿಗೆ ||೨||
ತ್ರಿವಿಡಿ ತಾಳ:
ಮನವೆ ನಿಲ್ಲದ ಧ್ಯಾನ ಗುಣವೇ ಇಲ್ಲದ ನಾರಿ |
ಹಣವೆ ಇಲ್ಲದ ನೃಪತಿ ಕ್ಷಣವೇ ತಿಳಿಯದ ಜ್ಞಾನಿ |
ಪ್ರಣವೆ ಇಲ್ಲದ ಮಂತ್ರ ಘನವೆ ಇಲ್ಲದ ದಾನಾ |
ಪ್ರಣತಿ ಇಲ್ಲದ ದೇಹ ಅನುವೆ ಇಲ್ಲದ ನಡತೆ |
ಜನವೆ ಇಲ್ಲದ ಸಭಾ ಲಕ್ಷಣವಿಲ್ಲದ ಗುರು |
ನೆನೆವೆ ಇಲ್ಲದ ಸಾಧನವೆ ಇಲ್ಲದ ಸಂಗತಿ |
ದಿನವಸ್ತಮಾನಾ ನೂರು ಮನುಕಲ್ಪವಿರಲು |
ರಂ|ಜನ ವಾಗುವದೇನಾಜನ ಜನಕಾ |
ತನು ಮನದಾಧೀಶ ವಿಜಯವಿಠ್ಠಲ |
ಕೃಪಾ|ವನಧಿ ನಿನ್ನನು ಧ್ಯಾನವನು
ಮಾಳ್ಪ ಮನವೀಯೋ ||೩||
ಅಟ್ಟತಾಳ:
ಪಾಪವೆಂಬೊರಾಶಿ ಆಪಾರವಾಗೆನ್ನ |
ಕೋಪವ ಪುಟ್ಟಿಸಿ ತಾಪದ ಬಲದಿಂದ |
ಲೇಪಿಸಿಕೊಂಡು ಪ್ರಳಾಪ ಬಡಿಸುತಿದೆ |
ನಾ ಪೋಗುವದತ್ತೆ ಶ್ರೀಪತಿ ಲಾಲಿಸು |
ಅಪಾರ ಕರ್ಮದಲೀ ಪೂಜೆಮಾಡಲು |
ಶ್ರೀಪದವೀಗಳ ಪ್ರಾಪುತವಾಗೋವೆ |
ಪ್ರಾಪುತ ಮಹನಾಮಾ ವಿಜಯವಿಠ್ಠಲ ನಿನ್ನ |
ಆಪಾದ ಮೌಳಿಯನ್ನೂ ಪತಿಕರಿಸುವೆ ||೪||
ಆದಿತಾಳ:
ಧ್ಯಾನವನ್ನು ಕೈಕೊಳ್ಳಲು ಜ್ಞಾನವನ್ನೆ ಪುಟ್ಟುವದು |
ಹೀಣ ಕರ್ಮವೆಂಬ ದುರಿತ ಕಾನನ ರಾಶಿಗೆ
ಕೃ|ಶಾನ ನಾಗಿ ಪೋಗಗಳೆದು ಮಾನಾಭಿಮಾನವೆನಿಸಿ |
ಧ್ಯಾನ ಧ್ಯಾನವನ್ನು ದಿನ ದಿನ ದಿನಗಧಿಕವಾಗಿ |
ಆನಂದಕ್ಕಾನಂದ ಏನೆಂದು ಪೇಳುವೆನೊ |
ಧ್ಯಾನವಿನಾ ಗತಿಗೆ ಸಾಧನವನ್ನು ಕಾಣೆನಯ್ಯಾ |
ನೀನೆ ನೀನೆ ಎಂದು ಧ್ಯಾನ್ದಲ್ಲಿ ನಂಬಿದೆನೊ |
ಧ್ಯಾನದೊಳಗೆ ಪೊಳೆವ ವಿಜಯವಿಠ್ಠಲರೇಯ |
ದಾನಿ ದಯದಿಂದ ಉತ್ತಮನ ಮಾಡು ಮನ್ನಿಸುತ್ತಾ ||೫||
ಜತೆ
ಸ್ಥೂಲ ಸೂಕ್ಷ್ಮ ಧ್ಯಾನವ ಭೇದ ವೆನಿಸೋದು |
ನೀಲವರ್ಣ ವಿಜಯವಿಠ್ಠಲ ಪ್ರಾಕೃತ ರಹಿತಾ ||೬||
