Composer : Shri Varadesha vittala
ಭಾಗ್ಯವೆ ಪಾಲಿಸೆನ್ನಗೆ ಶ್ರೀ ಭಾರ್ಗವಿ ಜನನಿ [ಪ]
ಭಾಗ್ಯವೆ ಪಾಲಿಸು ಭಾರ್ಗವಿ, ಕಮಲಜ
ಭಾರ್ಗಾದ್ಯನಿಮಿಷ ವರ್ಗ ಸೇವಿತೆ [ಅ.ಪ]
ಹರಿ ಸರ್ವೋತ್ತಮ ಗುರು ಸುಖ ತೀರ್ಥರು
ಹರ ಫಣಿ ವಿಪ ಶಕ್ರಾದಿಗಳು |
ತರತಮ ಭೇದ ಮೂರೆರಡು ಸತ್ಯ ವೆಂ-
ದರಿತು ಮನದಿ ಬಲು ಹರುಷ ಬಡುತಲಿಹ [೧]
ಕಾಮ ಕ್ರೋಧಗಳ ಗೆಲಿದು ಸತತ ನಿ-
ಷ್ಕಾಮ ಭಕ್ತಿಯಲಿ ಮನವುಬ್ಬಿ |
ರಾಮ ರಾಮ ಎಂದು ಪ್ರೇಮದಿ ಪಾಡುತ
ರೋಮಾಂಚಿತ ತನುವಿಲಿ ನರ್ತಿಪ ಸೌ [೨]
ದುರ್ಜನ ಸಂಗ ವಿವರ್ಜಿಸಿ ನಿರುತದಿ
ಸಜ್ಜನ ಸಂಗ ಸುಖವ ಬಯಸಿ |
ಅರ್ಜುನ ಸಖನ ಪದಾಬ್ಜ ಧ್ಯಾನದೊಳು
ಗರ್ಜಿಸುತಲಿ ನಿರ್ಲಜ್ಜನೆನಿಪ ಸೌ [೩]
ನಾನು ನನ್ನದೆಂಬೊ ಹೀನ ಮತಿಯ ಕಳೆ-
ದೇನು ಮಾಡುತಿಹ ಕರ್ಮಗಳ |
ಶ್ರೀನಿವಾಸನ ಪ್ರೇರಣೆ ಎಂದು ಸ-
ದಾನುರಾಗದಲಿ ಅರ್ಪಿಸುತಿಹ ಸೌ [೪]
ಸೂಸುವ ಭಕ್ತಿ ವಿರಕ್ತಿ ಜ್ಞಾನ ಧನ
ರಾಶಿಯ ಕೋಟ್ಟೀ ಭವ ಸುಖದ |
ಆಶೆ ಬಿಡಿಸಿ ವರದೇಶ ವಿಟ್ಠಲನ
ದಾಸರ ದಾಸರ ದಾಸ ನೆನಿಪ ಸೌ [೫]
BAgyave pAlisennage SrI BArgavi janani [pa]
BAgyave pAlisu BArgavi, kamalaja
BArgAdyanimiSha varga sEvite [a.pa]
hari sarvOttama guru suKa tIrtharu
hara PaNi vipa SakrAdigaLu |
taratama BEda mUreraDu satya veM-
daritu manadi balu haruSha baDutaliha [1]
kAma krOdhagaLa gelidu satata ni-
ShkAma Baktiyali manavubbi |
rAma rAma eMdu prEmadi pADuta
rOmAMcita tanuvili nartipa sau [2]
durjana saMga vivarjisi nirutadi
sajjana saMga suKava bayasi |
arjuna saKana padAbja dhyAnadoLu
garjisutali nirlajjanenipa sau [3]
nAnu nannadeMbo hIna matiya kaLe-
dEnu mADutiha karmagaLa |
SrInivAsana prEraNe eMdu sa-
dAnurAgadali arpisutiha sau [4]
sUsuva Bakti virakti j~jAna dhana
rASiya kOTTI Bava suKada |
ASe biDisi varadESa viTThalana
dAsara dAsara dAsa nenipa sau [5]
