Composer : Shri Huligi Hanumantacharya [Vimalananda vittala]
ವಾದಿರಾಜಾಚಾರ್ಯರ ಸುಂದರವಾದ ಪಾದಾ
ನಂಬಿದೆ ನಿಶ್ಚಯ [ಪ]
ಧರೆಯೊಳು ಜಂಬುಖಂಡಿಪುರದಿ | ಭೂಸುರ,
ಶ್ರೀನಿವಾಸರೆಂಬ ಶರಧಿಯಲಿ ಜನಿಸಿದೆ ಅರವಿಂದ ಪೋಲುವ
ಕರುಣವಾರಿಧಿ ಶಿರಿತುರಗಾನನ ಪ್ರಿಯ ||೧||
ಹರಿಗುರುವರದಾ ಜ್ಞಾನದಿ ಪರಿಶೋಧಿಸಿ, ವರಭಾಗವತ
ಶಾಸ್ತ್ರವ ಹರಿಗುರುಗಳ ಮಹಿಮೆ ಧಾರುಣಿಯಲಿ ಬೀರಿದ
ಪರಮಪಾವನ ಶುಭಚರಿತದ ಗುರುವರ ||೨||
ವಟಪತ್ರತಲ್ಪ ಕೃಪಾ ಕಟಾಕ್ಷದಿ, ಹಟವಾದಿಗಳ
ಖಂಡಿಸಿ | ನಿಟಿಲನೇತ್ರನ ಪ್ರಿಯ ಬಟುವಿಮಲಾನಂದ
ವಿಠಲನ ತೋರುವ ದಟಿದಲೋಭದಿ ಮೆರೆವ ||೩||
vAdirAjAcAryara suMdaravAda pAdA
naMbide niScaya [pa]
dhareyoLu jaMbuKaMDipuradi | BUsura,
SrInivAsareMba Saradhiyali janiside araviMda pOluva
karuNavAridhi SirituragAnana priya ||1||
hariguruvaradA j~jAnadi pariSOdhisi, varaBAgavata
SAstrava harigurugaLa mahime dhAruNiyali bIrida
paramapAvana SuBacaritada guruvara ||2||
vaTapatratalpa kRupA kaTAkShadi, haTavAdigaLa
KaMDisi | niTilanEtrana priya baTuvimalAnaMda
viThalana tOruva daTidalOBadi mereva ||3||

Leave a Reply
You must be logged in to post a comment.