Composer : Shri Kanakadasaru
ನನ್ನವ್ವ ಕಲ್ಲ ಬಿಡೆ ಈ ಧೋತ್ರವ
ಚೆನ್ನಾಗಿ ಒಗೆಯಬೇಕು (ಪ)
ಮುನ್ನ ಮಾಡಿದ ಪಾಪ ಕರ್ಮ ಹೋಗುವ ಹಾಂಗೆ
ಚೆನ್ನಕೇಶವನ ಪ್ರಸಾದ ಒದಗಬೇಕು (ಅ)
ಉಟ್ಟ ಧೋತ್ರವು ಮಾಸಿತು – ಮನದೊಳಗಿದ್ದ
ದುಷ್ಟರೈವರುಗಳಿಂದ ,
ಕಷ್ಟ ದುರಿತಗಳು ಬಿಟ್ಟು ಹೋಗುವ ಹಾಂಗೆ
ಮುಟ್ಟಿ ಜಲದೊಳು ಗಟ್ಯಾಗಿ ಒಗೆಯಬೇಕು [೧]
ವೇದವನೋದಬೇಕು ಮನದೊಳಗಿದ್ದ
ಭೇದವ ಕಳೆಯಬೇಕು,
ಸಾಧರಣೆಯಿಂದ ತಿಳಿದು ನಿಶ್ಚಯವಾಗಿ
ಕ್ರೋಧ ಕರ್ಮಗಳೆಲ್ಲ ಬಿಟ್ಟು ಹೋಗುವ ಹಾಗೆ [೨]
ವೇಲಾಪುರದ ಚೆನ್ನ ಕೇಶವನ ಸೇವೆಗೆ
ಆಲಸ್ಯವನು ಮಾಡದೆ,
ಕೋಲ ಹಿಡಿದು ದ್ವಾರಪಾಲಕನಾಗುವೆ
ನೀಲ ಕುಂತಳೆ ಕಲ್ಲ ಬಿಟ್ಟು ಆ ಕಡೆ ಸಾರೆ [೩]
nannavva kalla biDe I dhOtrava
cennAgi ogeyabEku (pa)
munna mADida pApa karma hOguva hAMge
cennakESavana prasAda odagabEku (a)
uTTa dhOtravu mAsitu – manadoLagidda
duShTaraivarugaLiMda ,
kaShTa duritagaLu biTTu hOguva hAMge
muTTi jaladoLu gaTyAgi ogeyabEku [1]
vEdavanOdabEku manadoLagidda
BEdava kaLeyabEku,
sAdharaNeyiMda tiLidu niScayavAgi
krOdha karmagaLella biTTu hOguva hAge [2]
vElApurada cenna kESavana sEvege
Alasyavanu mADade,
kOla hiDidu dvArapAlakanAguve
nIla kuMtaLe kalla biTTu A kaDe sAre [3]

Leave a Reply
You must be logged in to post a comment.