Composer : Shri Jagannatha dasaru
ವಾದಿರಾಜ ಗುರು ನೀ ದಯ ಮಾಡದೆ |
ಈ ದುರಿತವ ನಿವಾರಿಪರಾರೋ ||ಪ||
ಕಲಿ ಭಾದೆಯು ತಾ ವೆಗ್ಗಳವಾಗಿದೆ |
ಇಳೆಯೊಳು ಯತಿಕುಲ ತಿಲಕ ಕೃಪಾಳೊ ||ಅ.ಪ||
ದೇಶಿಕಾರ್ಯ ವಾಗೀಶ ಕುವರ ತವ
ದಾಸ ಸಮೂಹವ ನೀ ಸಲಹೈಸದಾ ||೧||
ಜನ್ಮಾದಿ ವ್ಯಾಧ್ಯುನ್ಮಾದಭ್ರಮ |
ನಿಮ್ಮೊರೆ ಹೊಕ್ಕರಿಗಿನ್ ಮೊದಲುಂಟೆ ||೨||
ನೀ ಗತಿಯೆಂದನುರಾಗದಿ ನಂಬಿದ
ಭೋಗಿಪುರೀಶನ ರೋಗವ ಕಳೆದೆ ||೩||
ಯಲರುಣಿ ಭಯಕಂಜಿಲಿ ನಿಮ್ಮಾಸನ
ಕೆಳಗಿರೆ ಕಂಡದ-ನುಳುಹಿದೆ ಕರುಣಿ ||೪||
ಗರಮಿಶ್ರಿತ ನರಹರಿ ನೈವೇದ್ಯವ |
ಅರಿತು ಉಂಡು ಅದನರಗಿಸಿಕೊಂಡೆ ||೫||
ಹಯವದನನ ಪದದ್ವಯ ಭಕ್ತಾಗ್ರಣಿ |
ದಯದಿ ವಿಪ್ರನಿಗೆ ನಯನವನಿತ್ತೆ ||೬||
ಮೋದಮುನಿ ಮತ ಪಯೋದಧಿ ಪೂರ್ಣ |
ವಿದೋದಯ ಶರಣರ ಕಾದುಕೋ ದೊರೆಯೇ ||೭||
ಅರ್ಥಿಗಳಿಗೆ ಪರಮಾರ್ಥವ ತೋರಿಸಿ |
ತೀರ್ಥಪ್ರಬಂಧವ ಕೀರ್ತನೆಗೈದೆ ||೮||
ಯಮಿವರದೆ ತ್ರಿವಿಕ್ರಮ ರಥೋತ್ಸವ |
ಸಮಯವಿದೆಂದುತ್-ಕ್ರಮಣವ ತೋರಿದೆ ||೯||
ಬಂದು ಕರೆಯೆ ಶ್ರೀ ಪುರಂದರನಾಳ್ಗಳು |
ಹಿಂದಟ್ಟಿದೆ ಕರ್ಮೇಂದ್ರಿಗಳರಸನೆ ||೧೦||
ಭೂಮಿಪರುಪಟಳಕಾ ಮಹಿನಾಥನು |
ತಾ ಮೈ ಮರೆದಿರೆ ನೀ ಮುದವಿತ್ತೆ ||೧೧||
ನಿನ್ನೊಶನಾದ ಜಗನ್ನಾಥ ವಿಠಲನ
ಉನ್ನಹದಲ್ಲಿ ತೋರೆನ್ನ ಮನದಲಿ ||೧೨||
vAdirAja guru nI daya mADade |
I duritava nivAriparArO ||pa||
kali BAdeyu tA veggaLavAgide |
iLeyoLu yatikula tilaka kRupALo ||a.pa||
dESikArya vAgISa kuvara tava
dAsa samUhava nI salahaisadA ||1||
janmAdi vyAdhyunmAdaBrama |
nimmore hokkarigin modaluMTe ||2||
nI gatiyeMdanurAgadi naMbida
BOgipurISana rOgava kaLede ||3||
yalaruNi BayakaMjili nimmAsana
keLagire kaMDada-nuLuhide karuNi ||4||
garamiSrita narahari naivEdyava |
aritu uMDu adanaragisikoMDe ||5||
hayavadanana padadvaya BaktAgraNi |
dayadi vipranige nayanavanitte ||6||
mOdamuni mata payOdadhi pUrNa |
vidOdaya SaraNara kAdukO doreyE ||7||
arthigaLige paramArthava tOrisi |
tIrthaprabaMdhava kIrtanegaide ||8||
yamivarade trivikrama rathOtsava |
samayavideMdut-kramaNava tOride ||9||
baMdu kareye SrI puraMdaranALgaLu |
hiMdaTTide karmEMdrigaLarasane ||10||
BUmiparupaTaLakA mahinAthanu |
tA mai maredire nI mudavitte ||11||
ninnoSanAda jagannAtha viThalana
unnahadalli tOrenna manadali ||12||

Leave a Reply
You must be logged in to post a comment.