Paliso Venkatagiriraya

Composer : Shri Pranesha dasaru

By Smt.Shubhalakshmi Rao

ಪಾಲಿಸೊ ವೆಂಕಟಗಿರಿ ರಾಯ ಲಕ್ಷ್ಮೀ |
ಲೋಲ ನೀಲಾಂಬುದ ಸಮ ಕಾಯಾ | ಪ |

ಮಾ ಕಮಲಾಸನ ವಾಸವ, ಸುರ
ನೀಕ ಕರಾಧ್ಯ ಕೇಶವ |
ಲೋಕೇಶ ಎನ್ನಲ್ಲಿ ವಾಸವ ಮಾಡಿ
ನೂಕು ತುಚ್ಛತರ ಕ್ಲೇಶವ | ೧ |

ಹಿಂದಿನ ಜನುಮಗಳೆಣಿಕಿಲ್ಲ ದಯಾ
ಸಿಂಧು ಸಾಧನವೀಗಿನಿತಿಲ್ಲಾ |
ಮುಂದಿನ ಗತಿಯೇನೋ ತಿಳಿದಿಲ್ಲ ಇದ
ರಿಂದಲಂಜುವೆ ಜಾಂಬವತೀ ನಲ್ಲ | ೨ |

ಬಾಲಕನಾದೆ ಕೆಲವು ದಿನ ಪ್ರಾಯ |
ಕಾಲವೊದಗಲು ಪರಾಂಗನಾ |
ಮೇಲೆ ಅಭಕ್ಷಣೆಯಲಿ ಮನವಿಟ್ಟೆ ಹೇ |
ಳಲೊಂದೆರಡೇ ಯನ್ನವಗುಣ | ೩ |

ಉದಯ ಸ್ನಾನವು ಸಂಧ್ಯಾವಂದನೆ ಅರ್ಘ್ಯ |
ವಿಧಿ ಗುರು ಹಿರಿಯರ ವಂದನೆ |
ಮೊದಲಾಗಿ ಪಿತರಾರಾಧನೆ ಬಿಟ್ಟೆ |
ಮದದಿಂದ ಹೀನನೆಂಬುವ ನಾನೇ | ೪ |

ಅನ್ಯರ ಮನೆ ದ್ವಾರ ಕಾಯ್ವೆನೋ ಸ್ವಾಮಿ |
ನಿನ್ನ ಸ್ಮರಣೆಯ ಕ್ಷಣ ಮಾಡೆನೋ |
ಅನ್ನಕ್ಕೆ ಬಹುದೂರ ಪೋಪೆನೋ, ಸಾರೆ |
ಪುಣ್ಯಕ್ಷೇತ್ರಗಳಿರೆ ನೋಡೆನೋ | ೫ |

ಧನಹೀನನಾದ ಕಾರಣದಿಂದ ಸತಿ |
ಮನೆ ಹೊಂದಿಸಳೋ ಪರಮಾನಂದ |
ತನುಜರಶನ ವಸನಗಳಿಂದ, ಕಾಡು |
ಅಣು ಮಾತ್ರ ಸುಖವಿಲ್ಲ ಇದರಿಂದ | ೬ |

ಏಸು ಹೇಳಲಿ ಮಾತ ಲಾಲಿಸೋ ಶ್ರೀ ಪ್ರಾ |
ಣೇಶವಿಠ್ಠಲ ನೀನೇ ತಾರಿಸೋ |
ಆ ಸತ್ಕರ್ಮದಿ ಮನ ಪ್ರೇರಿಸೋ ನಿನ್ನ |
ದಾಸವರ್ಗದೊಳೆನ್ನ ಸೇರಿಸೋ | ೭ |


pAliso veMkaTagiri rAya lakShmI |
lOla nIlAMbuda sama kAyA | pa |

mA kamalAsana vAsava, sura
nIka karAdhya kESava |
lOkESa ennalli vAsava mADi
nUku tucCatara klESava | 1 |

hiMdina janumagaLeNikilla dayA
siMdhu sAdhanavIginitillA |
muMdina gatiyEnO tiLidilla ida
riMdalaMjuve jAMbavatI nalla | 2 |

bAlakanAde kelavu dina prAya |
kAlavodagalu parAMganA |
mEle aBakShaNeyali manaviTTe hE |
LaloMderaDE yannavaguNa | 3 |

udaya snAnavu saMdhyAvaMdane arGya |
vidhi guru hiriyara vaMdane |
modalAgi pitarArAdhane biTTe |
madadiMda hInaneMbuva nAnE | 4 |

anyara mane dvAra kAyvenO svAmi |
ninna smaraNeya kShaNa mADenO |
annakke bahudUra pOpenO, sAre |
puNyakShEtragaLire nODenO | 5 |

dhanahInanAda kAraNadiMda sati |
mane hoMdisaLO paramAnaMda |
tanujaraSana vasanagaLiMda, kADu |
aNu mAtra suKavilla idariMda | 6 |

Esu hELali mAta lAlisO SrI prA |
NESaviThThala nInE tArisO |
A satkarmadi mana prErisO ninna |
dAsavargadoLenna sErisO | 7 |

Leave a Reply

You might also like

error: Content is protected !!