Composer : Shri Varadendra vittala [ Shishyaru of Shri Gurujagannatha dasaru]
ರಾಘವೇಂದ್ರರೇ ನಿಮ್ಮ ಪಾದವ |
ಬಾಗಿ ಭಜಿಸುವೆ ತೋರುವದೈ |
ನಾಗಶಯನ ತುತಿಸಿ ಸುಖಿಪ |
ಭಾಗವತರೊಳಾಡಿಸೈ || ಪ ||
ಶ್ರೀ ಸುಧೀಂದ್ರ ಕರಜರೆನಿಪ |
ಶ್ರೀ ಸಮೀರಮತ ಚಂದ್ರಮಾ |
ಶೇಷಶಯನನ ಪೂಜಿಸುವ | ನಿ |
ರ್ದೋಷ ಗುರು ಕುಲ ಸುರದ್ರುಮಾ || ೧ ||
ಮಂಗಳಾಂಗರೇ ನಿಮ್ಮ ದರ್ಶನ |
ಕಂಗಳಿಗೆ ಇತ್ತು ಬೇಗನೆ |
ಹಿಂಗಿಸೈ ಭವ ತಾಪ ಗುರುವರ |
ತುಂಗಾ ತೀರ ನಿವಾಸನೆ || ೨ ||
ಪರಮತೋಕ್ತಿಯ ಖಂಡಿಸುತ |
ಪರಿಮಳಾಖ್ಯ ಗ್ರಂಥವಾ |
ವಿರಚಿಸಿ ಧರಾ ಸುರರಿಗೆಲ್ಲ |
ಹರುಷ ನೀಡಿದಿ ಮುನಿವರ || ೩ ||
ನಿನ್ನ ಪಾದೋದಕವ ಕೊಳ್ಳಲು |
ಬನ್ನ ಬಡಿಪವೇ ದುರಿತವು |
ಜನ್ಮ ಜನ್ಮಾಂತರದ ಪಾತಕ |
ಮುನ್ನ ಪೋಗ್ವದು ಸತ್ಯವು || ೪ ||
ಅಂಧ ಕುಷ್ಠ ವ್ಯಾಧಿಗ್ರಸ್ತರು |
ಚಂದದಿಂದಲಿ ಪ್ರತಿ ದಿನಾ |
ವೃಂದಾವನವ ನಂಬಿ ಯಜಿಸಿ |
ಬಂದ ಬಂಧ ವಿನಾಶನಾ || ೫ ||
ಮಾಸ ಶ್ರಾವಣ ವದ್ಯ ದ್ವಿತೀಯದಿ |
ಸಾಸಿರಾರು ಭೂ ದಿವಿಜರು |
ಸೋಸಿನಿಂದಲಿ ಪಾಡಿ ಪೀಡಿಪ |
ಕ್ಲೇಶ ಪಾಶ ಕೀಳ್ವರೋ || ೬ ||
ಗುರುವೇ ನಿಮ್ಮಯ ಸ್ತೋತ್ರ ರತ್ನವ |
ಸರುವ ಕಾಲದಿ ಪಠಿಸಲು |
ಕರುಣದಿಂದಲಿ ಪೊರೆವನವರ |
ಸಿರಿ ವರದೇಂದ್ರ ವಿಠಲನು || ೭ ||
rAGavEMdrarE nimma pAdava |
bAgi Bajisuve tOruvadai |
nAgaSayana tutisi suKipa |
BAgavataroLADisai || pa ||
SrI sudhIMdra karajarenipa |
SrI samIramata caMdramA |
SEShaSayanana pUjisuva | ni |
rdOSha guru kula suradrumA || 1 ||
maMgaLAMgarE nimma darSana |
kaMgaLige ittu bEgane |
hiMgisai Bava tApa guruvara |
tuMgA tIra nivAsane || 2 ||
paramatOktiya KaMDisuta |
parimaLAKya graMthavA |
viracisi dharA surarigella |
haruSha nIDidi munivara || 3 ||
ninna pAdOdakava koLLalu |
banna baDipavE duritavu |
janma janmAMtarada pAtaka |
munna pOgvadu satyavu || 4 ||
aMdha kuShTha vyAdhigrastaru |
caMdadiMdali prati dinA |
vRuMdAvanava naMbi yajisi |
baMda baMdha vinASanA || 5 ||
mAsa SrAvaNa vadya dvitIyadi |
sAsirAru BU divijaru |
sOsiniMdali pADi pIDipa |
klESa pASa kILvarO || 6 ||
guruvE nimmaya stOtra ratnava |
saruva kAladi paThisalu |
karuNadiMdali porevanavara |
siri varadEMdra viThalanu || 7 ||

Leave a Reply
You must be logged in to post a comment.