Bhoo varaha palisenna

Composer : Shri Vishwendra Teertharu

By Smt.Shubhalakshmi Rao

ಭೂವರಾಹ ಪಾಲಿಸೆನ್ನ ಶ್ಯಾಮಲಾಂಗ ಕಾಮ ತಾತ
ಪಾವಮಾನ ಕರಗಳಿಂದ ಸೇವ್ಯಮಾನ ಚಾರು ಚರಣ [ಪ]

ಧರೆಯನ್ನೆತ್ತಿ ತೊಡೆಯೊಳಿಟ್ಟು
ಕರಗಳಿಂದಲಪ್ಪಿಕೊಂಬ
ಕರುಣದಿಂದ ಸುರರಿಗಭಯ
ವಿತ್ತ ದಿವ್ಯ ಕೋಲಮೂರ್ತಿ [೧]

ಎರಡನೆಯ ಹಿರಣ್ಯಾಕ್ಷ
ದೈತ್ಯನನ್ನು ಮಥಿಸಿದಂಥ
ಧರಣಿಯಲ್ಲಿ ನರಕನನ್ನು
ಜನಿಸಿದಂಥ ಮಂಗಲಾಂಗ [೨]

ದೇಶದೊಳ್ ಶ್ರೀಮುಷ್ಣವೆನಿಪ
ಕ್ಷೇತ್ರದೊಳಗೆ ನೆಲಸಿದಂಥ
ಶೇಷ ಶಿರದೊಳ್ ಚರಣವಿತ್ತ
ರಾಜನಾದ ಹಯಮುಖಾತ್ಮ [೩]


BUvarAha pAlisenna SyAmalAMga kAma tAta
pAvamAna karagaLiMda sEvyamAna cAru caraNa [pa]

dhareyannetti toDeyoLiTTu
karagaLiMdalappikoMba
karuNadiMda surarigaBaya
vitta divya kOlamUrti [1]

eraDaneya hiraNyAkSha
daityanannu mathisidaMtha
dharaNiyalli narakanannu
janisidaMtha maMgalAMga [2]

dESadoL SrImuShNavenipa
kShEtradoLage nelasidaMtha
SESha SiradoL caraNavitta
rAjanAda hayamuKAtma [3]

Leave a Reply

You might also like

error: Content is protected !!