Composer : Shri Raghuvarya Tirtharu [Palimaru Matha]
ರುಗ್ಮಭೂಷಣ ಪಾಲಿಸೆನ್ನನು ತಿಗ್ಮಕಿರಣ ಶತಪ್ರಭಾ
ರುಗ್ಮಿಣೀ ಪವನಾರ್ಚಸತ್ಪದ ಯುಗ್ಮ ಉಡುಪಿನ ಕೃಷ್ಣನೇ (೧)
ದ್ವಾರಕಾಪುರದಲ್ಲಿ ದೇವಕಿ ಸರಸ ಬಾಲಕ ಲೀಲೆಯಾ
ತೋರು ಎನುತಲಿ ದಧಿಯ ಮಥಿಸಲು ಕರುಣಿ ಬಾಲ್ಯವ ತೋರಿದೆ (೨)
ತೊಡೆಯನೇರಿ ಸ್ತನ್ಯಪಾನವ ಮಾಡಿ ಮೋದವ ತಾಯಿಗೆ
ಕೊಡುತ ಕಡೆಗೋಲ್ ನೇಣು ಸಹಿತಲಿ ಪ್ರೌಢ ನೀನಪಹರಿಸಿದೆ (೩)
ಮೊಸರು ಭಾಂಡವನೊಡೆದು ಬೆಣ್ಣೆಯ ನಸುನಗುತಲೀ ಭಕ್ಷಿಸೀ
ಶೇಷಶಯನನೆ ನೀನು ಕುಣಿಯೆ ಸಂ- ತೋಷಪಟ್ಟಳು ದೇವಕಿ (೪)
ದೂರದಿಂದಲೆ ಕಂಡು ರುಕ್ಮಿಣಿ ಹರುಷದಲಿ ಶಿಶುರೂಪವ
ತರುಣ ರೂಪವ ನೀನು ಪುನರಪಿ ತೋರೆಲೊ ಸತಿ ನುಡಿದಳು (೫)
ವಿತತ ವೈಭವ ಈ ಪರೀಯಲಿ ಪ್ರತಿಮೆಯನ್ನೇ ಮಾಡಿಸಿ
ಸತತ ಪೂಜೆಯ ಮಾಳ್ಪರೆ ಅತಿ ಪ್ರೀತಿಯಿಂದಲಿ ಕೊಡೆನಗೆ (೬)
ರಮಣಿ ಈ ಪರಿ ಪೇಳೆ ವಿಶ್ವ-ಕರ್ಮನಿಂದಾ ಮಾಡಿಸಿ
ಕಮಲನಾಭನು ಇದ್ದು ಅದರಲಿ ವಿಮಲ ಪೂಜೆಯ ಕೊಂಡನು (೭)
ವೀರ ನಿನ್ನವತಾರ ಕಾರ್ಯವು ಪರಿ ಸಮಾಪ್ತವು ಆಗಲು
ಸುರಪನಂದನ ತತ್ಪ್ರತಿಮೆಯು ಶರಧಿ ತೀರದಲಿತ್ತನು (೮)
ನಾವೆಯಲ್ಲಿ ಗೋಪಿಚಂದನ ಸುವೃತಾರ್ಚೆಯು ಬರುತಿರೆ
ನಾವೆಯೊಡೆಯಲು ಮಧ್ವಮುನಿಪನು ಭಾವದಿಂದಲೆ ತಂದರು (೯)
ಅಮರರೊಡೆಯ ಶ್ರೀ ಮರುತಪತಿ ತತ್ ಪ್ರತಿಷ್ಠೆಯ ವಿರಚಿಸಿ
ಕುಮುದ ಬಂಧು ಕ್ಷೇತ್ರದಲ್ಲಿ ಅಮಿತ ಪೂಜೆಯ ಮಾಡಿದ (೧೦)
ನನ್ನ ಹಿರಿಯರ ಪುಣ್ಯ ಫಲಿಸಲು ನಿನ್ನ ಪೂಜೆಯ ಮಾಡುತ
ಧನ್ಯನಾದೆನು ಮುಕ್ತಿ ಕರಗತ ಎನ್ನಗಾಯಿತು ಕೃಷ್ಣನೇ (೧೧)
ಮಧ್ವಪೂಜಿತ ರಕ್ಷಿಸೆನ್ನನು ಸಾಧ್ವಸೋಝ್ಝಿತ ಸದ್ಗುಣ
ಸಾಧ್ವಲಂಕೃತ ವೇಷ ಮುಕ್ತಿ ಪ-ದಾಬ್ಜನೇ ರಘುತಿಲಕನೇ (೧೨)
rugmaBUShaNa pAlisennanu tigmakiraNa SatapraBA
rugmiNI pavanArcasatpada yugma uDupina kRuShNanE (1)
dvArakApuradalli dEvaki sarasa bAlaka lIleyA
tOru enutali dadhiya mathisalu karuNi bAlyava tOride (2)
toDeyanEri stanyapAnava mADi mOdava tAyige
koDuta kaDegOl nENu sahitali prauDha nInapahariside (3)
mosaru BAMDavanoDedu beNNeya nasunagutalI BakShisI
SEShaSayanane nInu kuNiye saM- tOShapaTTaLu dEvaki (4)
dUradiMdale kaMDu rukmiNi haruShadali SiSurUpava
taruNa rUpava nInu punarapi tOrelo sati nuDidaLu (5)
vitata vaiBava I parIyali pratimeyannE mADisi
satata pUjeya mALpare ati prItiyiMdali koDenage (6)
ramaNi I pari pELe viSva-karmaniMdA mADisi
kamalanABanu iddu adarali vimala pUjeya koMDanu (7)
vIra ninnavatAra kAryavu pari samAptavu Agalu
surapanaMdana tatpratimeyu Saradhi tIradalittanu (8)
nAveyalli gOpicaMdana suvRutArceyu barutire
nAveyoDeyalu madhvamunipanu BAvadiMdale taMdaru (9)
amararoDeya SrI marutapati tat pratiShTheya viracisi
kumuda baMdhu kShEtradalli amita pUjeya mADida (10)
nanna hiriyara puNya Palisalu ninna pUjeya mADuta
dhanyanAdenu mukti karagata ennagAyitu kRuShNanE (11)
madhvapUjita rakShisennanu sAdhvasOJJita sadguNa
sAdhvalaMkRuta vESha mukti pa-dAbjanE raGutilakanE (12)
Leave a Reply