Composer: Shri Vyasarajaru
ನಂಬಿಕೆಟ್ಟವರಿಲ್ಲವೊ ರಂಗಯ್ಯನ
ನಂಬದೆ ಕೆಟ್ಟರೆ ಕೆಡಲಿ ||ಪ||
ಅಂಬುಜನಾಭನ ಅಖಿಳ ಲೋಕೇಶನ
ಕಂಬುಕಂಧರ ಕೃಷ್ಣ
ಕರುಣಾಸಾಗರನ ||ಅ.ಪ||
ತರಳ ಪ್ರಹ್ಲಾದ ಸಾಕ್ಷಿ
ಸರಸಿಯೊಳಿದ್ದ ಕರಿರಾಜನೊಬ್ಬ ಸಾಕ್ಷಿ
ಮರಣಕಾಲದಿ ಅಜಾಮಿಳ ಮಗನನು ಕರೆಯೆ
ಗರುಡನೇರಿ ಬಂದ ಗರುವರಹಿತನ ||೧||
ದೊರೆಯೂರು ಏರಬಂದ ಪುತ್ರನನ್ನು
ಕೊರಳ್-ಹಿಡಿದ್ಹೊರಡಿಸಲು ,
ಅರಣ್ಯದೊಳಗವನಿದ್ದ ಸ್ಥಳದಲ್ಲಿ
ಭರದಿಂದೋಡಿ ಬಂದ ಭಕ್ತವತ್ಸಲನ್ನ ||೨||
ತರುಣಿ ದ್ರೌಪದಿ ಸೀರೆಯ ದುಶ್ಯಾಸನ
ಸರಸರ ಸೆಳೆಯುತ್ತಿರೆ,
ಕರುಣಿ ತನ್ನೊಡತಿಯೊಡನೆ ಆಡುವುದ ಬಿಟ್ಟು
ತ್ವರದಿ ಅಕ್ಷಯವಿತ್ತ ಸಿರಿಕೃಷ್ಣ ರಾಯನ ||೩||
naMbikeTTavarillavo raMgayyana
naMbade keTTare keDali ||pa||
aMbujanABana aKiLa lOkESana
kaMbukaMdhara kRuShNa
karuNAsAgarana ||a.pa||
taraLa prahlAda sAkShi
sarasiyoLidda karirAjanobba sAkShi
maraNakAladi ajAmiLa magananu kareye
garuDanEri baMda garuvarahitana ||1||
doreyUru ErabaMda putranannu
koraL-hiDid~horaDisalu ,
araNyadoLagavanidda sthaLadalli
BaradiMdODi baMda Baktavatsalanna ||2||
taruNi draupadi sIreya duSyAsana
sarasara seLeyuttire,
karuNi tannoDatiyoDane ADuvuda biTTu
tvaradi akShayavitta sirikRuShNa rAyana ||3||
Leave a Reply