Jayavade – mundige

Composer: Shri Purandara dasaru

Expln by Shri Kesava Rao Tadipatri

ಜಯವದೆ ಜಯವದೆ ಈ ಮನೆತನಕೆ
ಭಯವಿಲ್ಲ ಎಂದೆಂದಿಗು ನಿಜವು
ಬಿಡು ಬಿಡು ಬಿಡು ಬಿಡು ಮನ ಸಂಶಯವ [ಪ]

ಶುಕನೆಂಬ ಹಕ್ಕಿ ಹೆಳುತದಪ್ಪ |
ಜಗವೆಂಬಾ ಗಿಡ ಹುಟ್ಟೈತಣ್ಣ
ಹಕ್ಕಿಗಳೆರಡು ಕೂಡೈದಾವೆ |
ಹಣ್ಣುಗಳೆರಡು ಐದಾವಪ್ಪ |

ಮೂರು ಮೂರು ಗುಣ ಕೇಳಣ್ಣ |
ಹಣ್ಣಿಣೊಳಗೆ ನಾಲ್ಕು ರಸವಪ್ಪ |
ಐದು ದೊಡ್ಡ ಹರೆ ಕಾಣ್ಣಪ್ಪ |
ಆರು ಬಗೆಯ ಸ್ವರೂಪ ಕೇಳು |

ಏಳು ಬಗೆಯ ತೊಗಟುಣಣ್ಣ |
ಸಣ್ಣ ಗರಿಗಳೂ ಎಣ್ಟೈದಾವೆ |
ಅಕ್ಷವು ಅದಕೆ ಒಂಬತ್ತೈತೆ |
ಎಲೆಗಳು ಹತ್ತು ಐದಾವಪ್ಪ |

ಒಂದೇ ಹಕ್ಕಿ ಹಣ್ತಿಂತೈತೆ |
ಮತ್ತೊಂದ್ ಹಕ್ಕಿ ನೋಡುತದಪ್ಪ |
ಹಣ್ ತಿಂದ್ ಹಕ್ಕಿ ಬಡವಾಗೈತೆ |
ತಿನ್ನದ ಹಕ್ಕಿ ಬಳಿತೈತಣ್ಣ

ಒಂದೇ ಕುಲವೆಂದ್ ತಿಳಿಯಲು ಬೇಡ |
ತಿಳಿದರೆ ನಿಮಗೆ ಕೇಡಾದೀತು |
ದಾಸತತ್ತ್ವದ ಆದಿ ಕಾಣಣ್ಣ |
ಹಳೇ ವಸ್ತ್ರವ ಬಿಸಾಡಣ್ಣ |
ಹೊಸ ವಸ್ತ್ರ ನಿಮಗೆ ದೇವರು ಕೊಟ್ಟಾನು |

ಹಕ್ಕಿಯ ಅರಸ ಹೇಲಿದ ಮಾತು |
ಉತ್ತಮ ಮಾರ್ಗವ ಹಿಡಿಯೊ ತಮ್ಮ |
ಮಾರ್ಗವ ಕಟ್ಟಿ ಸುಲಿಯುತ್ತಾರೆ |
ಮಾರನೆಂಬುವ ಕಳ್ಳೈದಾನೆ |

ಪುರಂದರನಾದರೆ ಬಿಡುವವನಲ್ಲ |
ಗುರುವಿನ ಸಂಗತಿ ಹಿಡಿಯೊ ಅಣ್ಣ
ಕಿವಿಯೂ ಮೂಗು ನಾಲಿಗೆಯಪ್ಪ |
ಒಂದೊಂದು ನಿನ್ನ ಕೊಂದಾವಣ್ಣ |

ಕುರಂಗ ಮಾತಂಗ ಪತಂಗ ಕೇಳು |
ಬ್ರುಂಘ ಮೀನವು ಹತವಾಯಿತಣ್ಣ
ಜ್ಞಾನ ಭಕ್ತಿಗಳೆಂಬ ಎರಡು |
ಮಾರ್ಗಗಳು ಬರುವ ತನಕ ಎರಡೂ
ಮನೆಯೊಳಗಿರ ಬೇಕಣ್ಣ |

ದಾನದ ಕೈಯ್ಯ ತೋರಿಸಬೇಕು |
ಅದರಿಂದ ನದಿಯ ದಾಟುತಿಯಪ್ಪ |
ನಿನ್ ಯೊಗ್ಯತೆ ತಿಳಿದ ಮೇಲೆ
ಪುರಂದರ ವಿಠ್ಠಲ ಸ್ಥಳ ಕೊಟ್ಟಾನು |


jayavade jayavade ee manetanake
bhayavilla eMdeMdigu nijavu
biDu biDu biDu biDu mana saMshayava [pa]

shukaneMba hakki heLutadappa |
jagaveMbaa giDa huTTaitaNNa
hakkigaLeraDu kooDaidaave |
haNNugaLeraDu aidaavappa |

mooru mooru guNa kELaNNa |
haNNiNoLage naalku rasavappa |
aidu doDDa hare kANNappa |
Aru bageya swaroopa kELu |

ELu bageya togaTuNaNNa |
saNNa garigaLU eNTaidAve |
akShavu adake oMbattaite |
elegaLu hattu aidAvappa |

oMdE hakki haNtiMtaite |
mattoMd hakki nODutadappa |
haN tiMd hakki baDavAgaite |
tinnada hakki baLitaitaNNa

oMdE kulaveMd tiLiyalu bEDa |
tiLidare nimage kEDAdItu |
dAsatattvada Adi kANaNNa |
haLE vastrava bisADaNNa |
hosa vastra nimage dEvaru koTTAnu |

hakkiya arasa hElida mAtu |
uttama mArgava hiDiyo tamma |
mArgava kaTTi suliyuttAre |
mAraneMbuva kaLLaidAne |

puraMdaranAdare biDuvavanalla |
guruvina saMgati hiDiyo aNNa
kiviyU mUgu nAligeyappa |
oMdoMdu ninna koMdAvaNNa |

kuraMga mAtaMga pataMga kELu |
bruMgha mInavu hatavAyitaNNa
j~jAna bhaktigaLeMba eraDu |
mArgagaLu baruva tanaka eraDU
maneyoLagira bEkaNNa |

dAnada kaiyya tOrisabEku |
adariMda nadiya dATutiyappa |
nin yogyate tiLida mEle
puraMdara viThThala sthaLa koTTAnu |

Leave a Reply

Your email address will not be published. Required fields are marked *

You might also like

error: Content is protected !!