Nee dayaparano

Composer: Shri Purandara dasaru

Smt. Sridevi Tamraparni

ನೀ ದಯಾಪರನೊ ನಿನ್ನವರ ಸಾಧನವೊ || ಪ ||
ಮುದ್ದು ಹಯವದನ ಸುಖಸದನ ಪೇಳಿದನ || ಅ ಪ||

ಮದಕರಿಯು ಸರಸಿಯೊಳು ಮಕರಿ ಬಾಧೆಗೆ ಸಿಲುಕಿ |
ಪದುಮೇಶ ಪದುಮಾಕ್ಷ ಪದುಮನಾಭ ||
ಪದುಮಸಂಭವ ಜನಕ ಪಾಹಿಪಾಹಿ ಎನಲು |
ಒದಗಿ ಪಾಲಿಸಿದೆ ತವ ದಯವೋ ಸಾಧನವೊ || ೧ ||

ಅಂತ್ಯಜಳ ಸಹವಾಸದಿ ವಿಪ್ರವರನೊಬ್ಬ |
ಸಂತೋಷದಿಂದ ಬಹುಕಾಲ ಕಳೆದು ||
ಪ್ರಾಂತಕಾಲಕೆ ತನ್ನ ಮಗನ ಕರೆಯಲು ಕಾಯ್ದೆ |
ಕಂತುಜನಕ ನಿನ್ನ ದಯವೋ ಸಾಧನವೊ || ೨ ||

ಅವರವರ ಯೋಗ್ಯತೆಗಳರಿತು ಪ್ರೇರಕನಾಗಿ |
ಅವರಿಂದ ನುಡಿಸಿ ಅವರ ನುಡಿಗಳಿಗೆ ಹಿಗ್ಗಿ ||
ಅವರಿಗೊಲಿವೆ ನಮ್ಮ ಪುರಂದರವಿಠ್ಠಲ |
ಅವನೀಶ ನಿನ್ನ ದಯವೊ ಸಾಧನವೊ || ೩ ||


nI dayAparano ninnavara sAdhanavo || pa ||
muddu hayavadana suKasadana pELidana || a pa||

madakariyu sarasiyoLu makari bAdhege siluki |
padumESa padumAkSha padumanABa ||
padumasaMBava janaka pAhipAhi enalu |
odagi pAliside tava dayavO sAdhanavo || 1 ||

aMtyajaLa sahavAsadi vipravaranobba |
saMtOShadiMda bahukAla kaLedu ||
prAMtakAlake tanna magana kareyalu kAyde |
kaMtujanaka ninna dayavO sAdhanavo || 2 ||

avaravara yOgyategaLaritu prErakanAgi |
avariMda nuDisi avara nuDigaLige higgi ||
avarigolive namma puraMdaraviThThala |
avanISa ninna dayavo sAdhanavo || 3 ||

Leave a Reply

Your email address will not be published. Required fields are marked *

You might also like

error: Content is protected !!