Dhenipe ninna

Composer : Shri Gopala dasaru

By Smt.Shubhalakshmi Rao

ಸೂರ್ಯಾಂತರ್ಗತ ನಾರಾಯಣ ಸ್ತೋತ್ರ ||

ಧೇನಿಪೆ ಧೇನಿಪೆ ನಿನ್ನ |
ಭಾನು ಮಂಡಲವರ್ತಿ ಶ್ರೀ ನಾರಾಯಣ ||ಪ||

ಏಕ ರಥಾಂಗ ಹಯಸಪ್ತ ಅರ್ಧಾ
ಕಾಯದಾ ದೂತಾ | ಆಪ್ತ |
ಆಕಾಶ ಮಂಡಲಾದಿಪ್ತರಾದಾ |
ಏಕಏಕದಶ ಇನರಲ್ಲಿ ವ್ಯಾಪ್ತನೆ ||೧||

ಸರಸಿಜಾಸನ ಸಂನಿವಿಷ್ಟ | ಶಿರೀಧರ |
ಉರುವಾಮಾದಿಧಿಷ್ಟ
ಅರಿ ಅಬ್ಜಧರ ಸುತಲ್ಪ
ಮರುತಾಧಿಷ್ಟಾನದಿಂ ಮೆರೆವತಿ ಶ್ರೇಷ್ಟಾನೆ ||೨||

ಸಕಲ ಪ್ರಾಕ್ರುತಾಲಂಕಾರ ಧರ
ವಿಕಸಿತ ವದನ ಶೃಂಗಾರ
ಅಕಳಂಕ ಅಮಿತ ಸುಂದರಾ
ಸಕಲಾರಿಂದಲಿ ಶ್ರೇಷ್ಟ ಶೂರಾ |
ಮುಕುತಿ ದಾಯಕ ಮೂರು ಗುಣದಿಂದ ದೂರಾ ||೩||

ದೇಶ ಕಾಲಗುಣ ವ್ಯಾಪ್ತಕಾ |
ಈಶಾದ್ಯರಿಗತಿ ಗುಪ್ತಾ
ಶಾಶ್ವಿತ ಯೆನಗಿತ್ತು ಕ್ಲಿಪ್ತ ಕೊಡು
ದೋಷ ವರ್ಜಿತ ನಿರ್ಗುಣ ನಿತ್ಯತೃಪ್ತ ||೪||

ಅವ್ಯಾಹತ ಸುಖಸಾಂದ್ರ
ಭವ್ಯ ಚರಿತ ಉಪೇಂದ್ರ
ದೇವ ಗೊಪಾಲ ವಿಠ್ಠಲೇಂದ್ರ
ದಿವ್ಯ ಜ್ಞಾನವ ಕೊಡು ಇನ ಕುಲ ಚಂದ್ರ ||೫||


sUryAMtargata nArAyaNa stOtra ||

dhEnipe dhEnipe ninna |
bhAnu maMDalavarti shrI nArAyaNa ||pa||

Eka rathAMga hayasapta ardhA
kAyadA dUtA | Apta |
AkAsha maMDalAdiptarAdA |
EkaEkadasha inaralli vyAptane ||1||

sarasijAsana saMniviShTa | shirIdhara |
uruvAmAdidhiShTa
ari abjadhara sutalpa
marutAdhiShTAnadiM merevati shrEShTAne ||2||

sakala prAkrutAlaMkAra dhara
vikasita vadana shRuMgAra
akaLaMka amita suMdarA
sakalAriMdali shrEShTa shUrA |
mukuti dAyaka mUru guNadiMda dUrA ||3||

dEsha kAlaguNa vyAptakA |
IshAdyarigati guptA
shAshvita yenagittu klipta koDu
dOSha varjita nirguNa nityatRupta ||4||

avyAhata sukhasAMdra
bhavya charita upEMdra
dEva gopAla viThThalEMdra
divya j~jAnava koDu ina kula chaMdra ||5||

Leave a Reply

You might also like

error: Content is protected !!