Composer : Indiresha ankita
ಸೂರ್ಯ ನಾಮಕನಾಗಿ ಸಂತತ ಶೇರಿ
ರವಿ ಮಂಡಲದಿ ಶ್ರೀಹರಿ ಮೂರು
ಕರ್ಮಕೆ ಮೂಲನೀತನು ಭೂರಿ ವಂದಿಸುವೆ
ಚೈತ್ರ ಮುಖ ಮಾಸದಲಿ ದ್ವಾದಶದಾತ್ಮ
ರೂಪಗಳಿಂದ ಗಗನ ದಿವ್ಯಾಪ್ತನಾಗುತ
ಸರ್ವ ಜೀವರ ವಾರ್ತಿ ನುಡಿಸುವನು [೧]
ಸೂರ್ಯ ಹರಿಹವಿಭೂತಿ ರೂಪವ ಯಾರು
ಸಂಧಿಗಳಲ್ಲಿ ಘಟಿಪರು ಘೋರ
ಪಾತಕವಳಿದು ಅವರನು ಶೌರಿ ರಕ್ಷಿಪನು
ಹತ್ತು ಆರು ಸಹಸ್ರ ಋಷಿಗಳಿಗೆತ್ತುವೆನು
ಕರಗಳಾ ನಮಣ ಸತ್ಕೃತಿ ಪೂರ್ಣ
ಮಾಡುತ ಇಂದಿರೇಶನ ಜ್ಞಪ್ತಿ ಕೊಡಲೆಂದು [೨]
sUrya nAmakanAgi saMtata SEri
ravi maMDaladi SrIhari mUru
karmake mUlanItanu BUri vaMdisuve
caitra muKa mAsadali dvAdaSadAtma
rUpagaLiMda gagana divyAptanAguta
sarva jIvara vArti nuDisuvanu [1]
sUrya harihaviBUti rUpava yAru
saMdhigaLalli GaTiparu GOra
pAtakavaLidu avaranu Sauri rakShipanu
hattu Aru sahasra RuShigaLigettuvenu
karagaLA namaNa satkRuti pUrNa
mADuta iMdirESana j~japti koDaleMdu [2]

Leave a Reply
You must be logged in to post a comment.