Suryantargata hari

Composer : Shri Krishna Vittala

By Smt.Shubhalakshmi Rao

ಸೂರ್ಯಾಂತರ್ಗತ ಹರಿ ನಮೋ ನಮೋ
ವೀರ್ಯಾದಿಗಳದಾತ ನಮೋ ನಮೋ ಜಗಬಿಂಬ (ಪ)
ತೋಯಜಾಕ್ಷನ ವಿಷ್ಣು ನಮೋನಮೋ
ಜೀಯ ಪಾಲಿಸುದೇವ ನಮೋನಮೋ ಮಮಬಿಂಬ (ಅ.ಪ)

ಆನಂದ ಪರಿಪೂರ್ಣ ನಮೋನಮೋ
ಏನೆಂಬೆ ಪರಮೋಚ್ಚ ನಮೋನಮೋ
ಶ್ರೀನಾಥ ಸಿರಿಪೂರ್ಣ ನಮೋನಮೋ
ನೀನಾಯಕ ಸ್ವತಂತ್ರ ನಮೋನಮೋ ಜಗಜೂತಿ (೧)

ನಾಲ್ಕರು ನಿಜರೂಪಿ ನಮೋನಮೋ
ಕಾಲಾದಿಗಳ ನಾಳು ನಮೋನಮೋ
ಏಳೆರಡು ಜಗಪಾಲ ನಮೋನಮೋ
ಪಾಲಾಬ್ದಿಶಯನ ಏಕ ನಮೋ ನಮೋ ಕೇವಲನೆ (೨)

ಸರ್ವಾಂಗಬಹಿರ್ವ್ಯಾಪ್ತ ನಮೋನಮೋ
ಸರ್ವಾಶ್ರಯನೆಗೋಜ ನಮೋನಮೋ
ದೇವಾದಿದೇವ ವಿಭು ನಮೋನಮೋ
ಸರ್ವೇಂದ್ರಿಯಂಗಳ ಪ್ರೇರಿಸೈ ಋಜುಮಾರ್ಗದಲಿ (೩)

ಸರ್ವದೋಷವಿದೂರ ನಮೋ ನಮೋ
ಸರ್ವಸುಗುಣ ಪರಿಪೂರ್ಣ ನಮೋನಮೋ
ಜೀವ ಜಗದಿಂದ ಬಿನ್ನ ನಮೋ ನಮೋ
ಶ್ರೀ ವಿಧೀರ ಪರಿಪಾಲ ನಿಸ್ಸೀಮ (೪)

ಸೃಷ್ಟ್ಯಾದ್ಯಷ್ಠಕರ್ತ ನಮೋನಮೋ
ತುಷ್ಠಿ ಪುಷ್ಠಿಯ ನೀಡು ನಮೋನಮೋ
ಶ್ರೇಷ್ಟ ಶ್ರೀಕೃಷ್ಣ ವಿಠಲ ನಮೋನಮೋ
ದೃಷ್ಠಿ ಬೀರುತ ಬೇಗ ಕಾಣಿಸೈ
ತವರೂಪಮೋಕ್ಷದನೆ (೫)


sUryAMtargata hari namO namO
vIryAdigaLadAta namO namO jagabiMba (pa)
tOyajAkShana viShNu namOnamO
jIya pAlisudEva namOnamO mamabiMba (a.pa)

AnaMda paripUrNa namOnamO
EneMbe paramOcca namOnamO
SrInAtha siripUrNa namOnamO
nInAyaka svataMtra namOnamO jagajUti (1)

nAlkaru nijarUpi namOnamO
kAlAdigaLa nALu namOnamO
ELeraDu jagapAla namOnamO
pAlAbdiSayana Eka namO namO kEvalane (2)

sarvAMgabahirvyApta namOnamO
sarvASrayanegOja namOnamO
dEvAdidEva viBu namOnamO
sarvEMdriyaMgaLa prErisai RujumArgadali (3)

sarvadOShavidUra namO namO
sarvasuguNa paripUrNa namOnamO
jIva jagadiMda binna namO namO
SrI vidhIra paripAla nissIma (4)

sRuShTyAdyaShThakarta namOnamO
tuShThi puShThiya nIDu namOnamO
SrEShTa SrIkRuShNa viThala namOnamO
dRuShThi bIruta bEga kANisai
tavarUpamOkShadane (5)

Leave a Reply

You might also like

error: Content is protected !!