Gayatri Saama – Dirgha kriti

Composer : Shri Varadagopala vittala

By Smt.Shubhalakshmi Rao

ಮೋದಗಾಯತ್ರಿ ಸಾಮವಂ ಪೇಳ್ವದಕೆ |
ಬಾದರಾಯಣಗೆರಗಿ ಭವ್ಯ ದೇವಿಗೆ ನಮಿಸಿ |
ಮೋದತೀರ್ಥರ ಪರಮಪಾದ ಹೃದಯದೊಳಿಡುವೆ |
ಮೋದ ಕೊಡಲೆಮ್ಮ ಮನಕೆ || ಪ ||

ಆದಿತ್ಯನಲ್ಲಿದ್ದ ಆರು ರೂಪಗಳೊಳಗೆ |
ಆದಿತನ್ನಾಮ ಶ್ರೀರೂಪ ಹಯ ಶೀರ್ಷಾಖ್ಯ |
ಭೇದವಿಲ್ಲದೆ ಅನನ್ಯಾಪೇಕ್ಷಪೂರ್ಣತ್ವ |
ವಾದ ಮತ್ಸ್ಯಾದಿಗಳನೂ |
ಆದರದಿ ಸರ್ವಭೂತಗಳೊಳಗೆ ನಿಲಸಿಪ್ಪ |
ಮಾಧವನ ದ್ವಿತೀಯ ರೂಪವು ತೃತೀಯ ರೂಪವನು |
ಶೋಧಿಸೆಲೊ ವಾಕ್ಯದಲ್ಲಿ ಗಾಯತ್ರಿ ಶ್ರೀರೂಪ |
ಮೋದಿ ಶ್ರೀ ಹಯಶೀರ್ಷನೂ || ೧ ||

ವಾರಿಜನಾಭವಾಜ್ಞಾಮ ಭಗವದ್ರೂಪ |
ಸಾರಯಾತರ ಮೇಲೆ ಸಿದ್ಧವೇನೆ |
ತೋರಿಸುವೆ ನಾರಾಯಣನೆ ಸರ್ವ ಪ್ರಾಣಿ ಜಾತಕೆ ಮುಖ್ಯ |
ಕಾರಣೆಂಬದರಿಂದಲಿ ಕಾರುಣಿಕ |
ಹರಿಯ ಕಮನೀಯ ಮೂರುತಿ ವಿವರಾ |
ಶ್ರೀರೂಪ ವಂದು ಸರ್ವಂತರ್ಯಾಮಿ ಝಷಾದಿ |
ಸಾರುತಿದೆ ವಾಕ್ಯದಲ್ಲಿ ಹಯಶೀರ್ಷ ಭಗವಂತ |
ಸ್ತ್ರೀರೂಪವೆಂದು ತಿಳಿಯೊ || ೨ ||

ಪೃಥಿವಿ ಸಂಸ್ಥಿತನಾಗಿ ತನ್ನಾಮದಿಂದ ಸು |
ಪೃಥು ವಿಕ್ರಮನು ಮಹಾ ಸ್ತ್ರೀರೂಪ ಭಗವಂತ |
ಪೃಥಿವಿ ನಾಮವನು ಸರ್ವಾಶ್ರಯತ್ವದಲಿಂದ |
ಪೃಥ್ವೆಂದು ಕರಸಿಕೊಂಡಾ |
ವಿತತವಾದಂಥ ನಾಲ್ಕನೆ ರೂಪ ಪೇಳಿ ಸ |
ನುತಿಪೆ ಜೀವ ಸ್ಥಿತನ ಸರ್ವೆಂದ್ರಿಯಾಶ್ರಯನ |
ಸತತ ಸುಖಮಯನ ರೂಪವು ಐದನೇನೆಂದು |
ಮತಿವಂತ ಜನರು ಕೇಳಿ || ೩ ||

ಆರನೇ ರೂಪ ಜೀವನ ಹೃದಯದಲ್ಲಿ ಪರ |
ಮಾರದ್ಯನಾಮ ಸ್ವರೂಪ ಹೃದಯದೊಳಿಹನ |
ಭಾರಿ ಭಾರಿಗೆ ನೆನದು ಆರುವಿಧ ಗಾಯಿತ್ರಿ
ಸಾರುತಿದೆ ಋಕ್ಕಿನಲಿ ||
ಮೇರೆ ಇಲ್ಲದೆ ಮಹಿಮೆ ಪೇಳಿ ಗಾಯಿತ್ರಿ ಮನೋ |
ಹಾರ ನಾಲ್ಕನೆ ರೂಪವನು ಪೇಳ್ವೆ ಪ್ರಥಮದಲಿ |
ಶಾರೀರವಾಂತ ಬಹಿವ್ಯಾಪ್ತವಾದುದು ರೂಪ |
ಚಾರುಮತಿಯಿಂದಾ ಕೇಳಿ || ೪ ||

ಯರಡನೆರೂಪ ಜೀವನ ಹೊರಗೆ ಜಡಹೃದಯ |
ಬೆರದಿಪ್ಪ ಆಕಾಶ ನಾಮವಾದಂಥಾದು |
ಪರಮ ಮೂರನೆ ರೂಪ ಜೀವ ವ್ಯಾಪಿಸಿಕೊಂಡು |
ಇರುತಿಪ್ಪ ಈ ವಿಧದಲಿ |
ಹರಿಯ ನಾಲ್ಕನೆ ರೂಪ ಜೀವನ ಹೃದಯದಲ್ಲಿ |
ಮಿರಿಮಿರಿ ಮಿಂಚುವದು ಆಕಾಶ ನಾಮದಲೀ |
ಪರಿಪೂರ್ಣ ಗುಣದೇಶ ಕಾಲ ವ್ಯಾಪ್ತನು ಎಂದು ,
ಅರಿಯೋ ಈ ವಿಧದಿಂದಲೀ || ೫ ||

ಪರಮೇಷ್ಠಿ ಮುಖ್ಯಾಧಿಕಾರಿ ಈ ವಿದ್ಯಕ್ಕೆ |
ಪರಮಜ್ಞಾನಿಯು ತಿಳಿಯೆ ಪರಮಪೂರ್ಣ ಶ್ರೇಯಸ್ಸು |
ತರುವಾಯ ಗಾಯತ್ರಿ ನಾಮ ಹೃದಯಸ್ಥಿತನ |
ಪರಮ ದ್ವಾರಗಳೈದಕೆ , |
ಪರಮವಿಕ್ರಮ ದ್ವಾರ ಪಾಲಕರುಪಾಸನಿಯ |
ಪರಮ ಭಕುತಿಂದ ಪೇಳುವೆ ಪ್ರಥಮ ದ್ವಾರದಲಿ |
ಸ್ಥಿರವಾದ ಪ್ರಾಚಿ ಭಾಗದ ಛಿದ್ರದಭಿಮಾನಿ |
ಪರತರನು ಪ್ರಾಣನಾಮಾ || ೬ ||

ಜಡ ವಾಯುಗಭಿಮಾನಿ ಖಡು ಚಕ್ಷುಮಾನಿಬಲು |
ತಡಿಯದಾದಿತ್ಯ ತೇಜನ್ನಾದ್ಯ ಮಾನಿಗಳಿ |
ಗಡಿಗಡಿಗೆ ನೆನದುಪಾಸನೆ ಮಾಡೆ ಅನ್ನ ಬಲು |
ಪಡದು ತೇಜಸ್ವಿ ಯಾಹಾ |
ದೃಢವಾದ ದಕ್ಷಿಣ ದ್ವಿತೀಯ ದ್ವಾರಕೆ ವ್ಯಾನ |
ಜಡ ವಾಯುಗಭಿಮಾನಿ ಶೋತ್ರ ಕಾಂತಿಯಶಸ್ವಿ |
ಗುಡುರಾಜಮಾನಿ ಎಂತೆಂದು ಪಾಸನೆಮಾಡೆ |
ಪಡೆವ ಕಾಂತಿ ಯಶಸ್ಸನೂ || ೭ ||

ಪಶ್ಚಿಮ ದ್ವಾರಾಭಿಮಾನಿ ಅನಳಪಾನ ಅಚ್ಚ
ವಾಗೇಂದ್ರಿಯದಭಿಮಾನಿಯನು ತಿಳಿಯೆ |
ಚಚ್ಚರದಿ ಬ್ರಹ್ಮ ವರ್ಚಸ್ವಿಯಾಗುವ ಕೇಳಿ |
ಉಚ್ಚ ಉತ್ತರ ದ್ವಾರಕೆ |
ನಿಚ್ಚ ಪರ್ಜನ್ಯ ನಾಮಕ ಇಂದ್ರ ಕೀರ್ತಿಮನ |
ಹೆಚ್ಚಾದ ದೃಷ್ಠಿ ಸಮಾನಾಭಿದನು |
ಸ್ವಚಿತ್ತದಿಂದುಪಾಸನೆ ಮಾಡು ಐಶ್ವರ್ಯ |
ಬೆಚ್ಚಿ ಕೀರ್ತಿಯಲಿ ಮೆರೆವ || ೮ ||

ಹರಿ ಊರ್ಧ್ವದ್ವಾರ ಪವಮಾನಾಖ್ಯ ಮಾರುತನು |
ನಿರುತ ಜಡವಾಯುಗಭಿಮಾನಿಯೆನಿಸುವನು ಸು |
ಸ್ಥಿರವಾದ ಆಕಾಶಮಾನಿ ಪ್ರಧಾನ |
ಮಾರುತನು ಓಜಸ್ವಿಯುತನು |
ಸ್ಮರಿಸಿ ಈ ತೆರ ಮಹಾತ್ಮನೆಂದುಪಾಸನೆ ಮಾಡೆ |
ಪರಮ ತೇಜಸ್ವಿ ಮಹಾತ್ಮನಾಗುವನು |
ಈವರ ಪಂಚ ದ್ವಾರಾಭಿಮಾನಿಗಳೇ |
ಸ್ವರ್ಗದ್ವಾರಪರೆಂದು ತಿಳಿಯಬೇಕೊ || ೯ ||

ಈ ರೀತಿಯಿಂದ ತಿಳಿದವನ ಕುಲದಲಿ ಮಹಾ |
ವೀರನಾದಂಥ ಜ್ಞಾನಿಯು ಪುಟ್ಟುವನು ಬಿಡದೆ |
ಸಾರುತಿದೆ ಶ್ರುತಿಯವನ ಸಂತತಿ ಸುಸಂತತಿ |
ಪರಂಪರಾಗುತಿದಕೊ |
ಶ್ರೀ ರಮಾರಮಣ ತ್ರಿಧಾಮ ಜೋತಿರ್ಮಯನ |
ಆರಾಧಿಸೆಲೊ ದಿವಸ್ಮಿತ ದಿವಃ ಪರದಲ್ಲಿ |
ಮೇರೆಯಿಲ್ಲದೆ ಸುಖ ಭರಿತನ ಹೃದ್ಗುಹದೊಳಗೆ |
ಸೇರಿಪ್ಪ ಜ್ಯೋತಿರ್ಮಯನಾ || ೧೦ ||

ಇದಕನುಭವ ದೇಹ ಸ್ಪರಿಶ ಮಾಡಿದರೆ |
ಸಮ್ಮುದದಿಂದ ಊಷ್ಣ ತೋರುವದು ಮಾರುತಮಾಳ |
ಸದಮಲಾನಂದ ಜ್ಯೋತಿರ್ನಾಮಕನ ಸ್ತುತಿಯು |
ನಿದರುಶನ ಶ್ರೋತ್ತ್ರದೊಳಗೆ |
ಹೊದರ ಬಿಡದಂಗುಲಿಯನಿಡೆ ಕೇಳಿಸುತಲಿದೆ |
ಅದುಭೂತ ಜ್ಯೋತಿರ್ನಾಮಕ ಹೃದಯದಲ್ಲಿಹನಾ |
ಹದನದಲಿ ತಿಳಿಯೆ ಮುಕ್ತಿಯಲಿ ದಿವ್ಯ ಸುಕೀರ್ತಿ |
ವದಗಿ ಸುಖಭರಿತನಾಹಾ || ೧೧ ||

ಆ ವಿರಾಡೂಪನಾದಂಥ ಭಗವಂತನಿಗೆ |
ಆವಂತರಿಕ್ಷ ಉದರವೆ ತದಾಶ್ರಯವೆನ್ನಿ |
ಈ ವಿಧದಿ ಭೂ ಅವನ ಪಾದ ಮೂಲಾಶ್ರಯವು |
ಆವದಿಶ ತೋಳಾಶ್ರಯ |
ಶ್ರೀ ವಿರಾಟನ ಶಿರಃ ಸಂಮಂಧಿ ಸುಶಿರವನು |
ಆ ಉದೀಚಿ ಬಿಲ ದ್ವಿಲೋಕಾಶ್ರಯಿಸಿಯಿಹದು |
ಗೋವಿಂದ ಪರತರಾನಂದಚ್ಚರೂಪನ್ನ |
ಭಾವಿಸೆಲೊ ಸುಖನಿಧಿಯನೂ || ೧೨ ||

ಈತನೆ ಕೋಶ ವಸುವಾದಿಗಳಿಗಾಶ್ರಯನು |
ದಾತ ಪ್ರತ್ಯಕ್ಷ ಜಗದಾಶ್ರಯನು ಸಿದ್ಧವೆಲೊ |
ಖ್ಯಾತವಾದ ದಿಗಾಶ್ರಯಿಸಿದ ಬಾಹ್ಯಗಳ ಪೆಸರ |
ಜಾತ ಪಿಡಿದಾಯುಧಗಳು |
ಪ್ರೀತಿಯಿಂದಲಿ ಪ್ರಾಚಿದಿಕ್ಕಿನಾಶ್ರಯ ಬಾಹು |
ಪೂತುರೇ ಜುಹುಯೆಂದು ಹೆಸರು ಚಕ್ರವ ಧರಿಸಿ |
ದ್ಯೋತ ಸಹಮಾನ ದಕ್ಷಿಣ ದಿಗಾಶ್ರಯ ಬಾಹು |
ದೈತ್ಯಾರಿ ಶಂಖ ಪಾಣಿ || ೧೩ |

ರಾಙ್ಞನಾಮಕ ಪ್ರದೀಚಿ ತೋಳಿನಲಿ ಗದಾ |
ಸಂಜ್ಞ ಸಂಭೂತ ನಾಮಕ ಉದೀಚಿ ಪದ್ಮ |
ಯಜ್ಞ ಭೋಕ್ತನ ನಾಲ್ಕು ತೋಳುಗಳ ಹೆಸರು |
ಧರ್ಮ ಜ್ಞಾನವೈರಾಗ್ಯವೂ ,
ವಿಜ್ಞಾನ ನಿಧಿ ತೋಳು ಐಶ್ವರ್ಯವೆಂಬ ಈ |
ಸುಜ್ಞವಾ ಈ ರೂಪಗಳು ಪುತ್ರರೀ ಪರಿ ತಿಳಿಯೆ |
ಅಜ್ಞನಾಗಿ ಪುತ್ರ ರೋದನೆಂದಿಗು ಇಲ್ಲ |
ಪ್ರಜ್ಞಮತಿ ಮುಕ್ತನಾಹ || ೧೪ ||

ಇದಕೆ ನಾ ಸಾಕ್ಷಿಯೆಂದೊರೆದಳು ರಮಾದೇವಿ |
ಮುದದಿ ಅವಿನಷ್ಟ ಆನಂದೇಚ್ಛ ರೂಪ ಸಂ |
ಪದವುಳ್ಳ ಶ್ರೀಹರಿಯನಾ ಉಪಾಸನೆ ಮಾಡಿ |
ಸದಾ ಆತನನುರಾಗದೀ |
ಪದೋಪದಿಗೆ ಕೃಷ್ಣನ್ನ ಐದಿ ಇದ್ದೇನೆ |
ಇನ್ನಿದು ಕೇಳಿ ಪ್ರಾಣನಾಮಕ ವಾಸುದೇವನು |
ಅದರ ತರುವಾಯ ಭೂರ್ನಾಮ ಸಂಕರುಷಣನು |
ಇದು ಭುವಃ ಪ್ರದ್ಯುಮ್ನನು || ೧೫ ||

ಸತತ ಸ್ವರ್ನಾಮಕನಿರುದ್ಧ ಮೂರುತಿಯನ್ನು |
ವೀತಗೆ ನಾ ಉಪಾಸನಿಯು ಮಾಡುವೆನು |
ಹಿತದಿಂದ ಪ್ರಾಣನಾಮಕ ವಾಸುದೇವ |
ನಿಶ್ಚಿತ ಝಷಾದಿ ಸ್ವರೂಪನೊ |
ಮತಿಯೊಳಗೆ ತಿಳಿಯೊ ಭೂರ್ನಾಮ ಸಂಕ |
ರುಷಣನೆ ಊರ್ಧ್ವಂತರಿಕ್ಷ ದ್ವಿನಾಮ ತತ್ತಲೇಶ |
ಗತ ಭುವರ್ನಾಮ ಪ್ರದ್ಯುಮ್ಮಾಗ್ನಿ ವಾಯುವಾ |
ದಿತ್ಯರಲಿ ತನ್ನಾಮಕಾ || ೧೬ ||

ಸ್ವರ್ನಾಮಕನಿರುದ್ಧ ಋಗ್ಗ್ಯೆಜುಸ್ಸಾಮದಲಿ |
ತನ್ನಾಮಕನ ಹೀಗೆ ನಾ ಉಪಾಸನೆ ಮಾಳ್ಪೆ |
ಇನ್ನು ಸರ್ವಾಧಿಕಾರಿಗಳುಪಾಸಿಸಿರೆಂದು |
ಚನ್ನೆಲಕುಮಿಯು ಸಾರಿಸಿಹಳೋ |
ಅನ್ಯಾಯ ಮಾರ್ಗವನು ಜರಿದು ಯಲೆ ಮನವೆ ನೀ |
ಸ್ತನ್ಯಪಾನವು ವಲ್ಲೆನೆಂಬ ಮತಿಯಿತ್ತೆ ತ್ರಯಿ |
ಗುಣ್ಯವರ್ಜಿತ ಹರಿಯಮೂರ್ತಿ ಚಲುವಿಕಿಯು ಅನಿ |
ಅನ್ನ ದ್ವಾರದಿ ಧೇನಿಸೊ || ೧೭ ||

ಈ ಮಹಾಗಾಯತ್ರಿ ಸಾಮವಂಪೇಳ್ವರಿಗೆ |
ಆ ಮಹಾಭಗವಂತ ಅಮಿತ ಸೌಖ್ಯಗಳಿತ್ತು |
ಸೋಮಾರ್ಕದಂತೆ ಪೊಳೆವುತ ಜಗತ್ರಯದಲ್ಲಿ |
ಸೂಮಹಾತ್ಮೆ ಯಿಂದಲೀ ,
ಕಾಮಾಚಾರಿಗಳಾಗಿ ಕಮನೀಯ ಭೋಗಗಳು |
ನೇಮದಿಂದಲಿ ನಿರಂತರ ನಿರುಪಮಾ ಸುಖದಿ |
ಶ್ರೀಮಂತ ವರದಗೋಪಾಲವಿಠ್ಠಲ ತನ್ನ |
ಧಾಮದೊಳಗಿಟ್ಟು ಪೊರೆವಾ || ೧೮ ||


mOdagAyatri sAmavaM pELvadake |
bAdarAyaNageragi Bavya dEvige namisi |
mOdatIrthara paramapAda hRudayadoLiDuve |
mOda koDalemma manake || pa ||

Adityanallidda Aru rUpagaLoLage |
AditannAma SrIrUpa haya SIrShAKya |
BEdavillade ananyApEkShapUrNatva |
vAda matsyAdigaLanU |
Adaradi sarvaBUtagaLoLage nilasippa |
mAdhavana dvitIya rUpavu tRutIya rUpavanu |
SOdhiselo vAkyadalli gAyatri SrIrUpa |
mOdi SrI hayaSIrShanU || 1 ||

vArijanABavAj~jAma BagavadrUpa |
sArayAtara mEle siddhavEne |
tOrisuve nArAyaNane sarva prANi jAtake muKya |
kAraNeMbadariMdali kAruNika |
hariya kamanIya mUruti vivarA |
SrIrUpa vaMdu sarvaMtaryAmi JaShAdi |
sArutide vAkyadalli hayaSIrSha BagavaMta |
strIrUpaveMdu tiLiyo || 2 ||

pRuthivi saMsthitanAgi tannAmadiMda su |
pRuthu vikramanu mahA strIrUpa BagavaMta |
pRuthivi nAmavanu sarvASrayatvadaliMda |
pRuthveMdu karasikoMDA |
vitatavAdaMtha nAlkane rUpa pELi sa |
nutipe jIva sthitana sarveMdriyASrayana |
satata suKamayana rUpavu aidanEneMdu |
mativaMta janaru kELi || 3 ||

AranE rUpa jIvana hRudayadalli para |
mAradyanAma svarUpa hRudayadoLihana |
BAri BArige nenadu Aruvidha gAyitri
sArutide Rukkinali ||
mEre illade mahime pELi gAyitri manO |
hAra nAlkane rUpavanu pELve prathamadali |
SArIravAMta bahivyAptavAdudu rUpa |
cArumatiyiMdA kELi || 4 ||

yaraDanerUpa jIvana horage jaDahRudaya |
beradippa AkASa nAmavAdaMthAdu |
parama mUrane rUpa jIva vyApisikoMDu |
irutippa I vidhadali |
hariya nAlkane rUpa jIvana hRudayadalli |
mirimiri miMcuvadu AkASa nAmadalI |
paripUrNa guNadESa kAla vyAptanu eMdu ,
ariyO I vidhadiMdalI || 5 ||

paramEShThi muKyAdhikAri I vidyakke |
paramaj~jAniyu tiLiye paramapUrNa SrEyassu |
taruvAya gAyatri nAma hRudayasthitana |
parama dvAragaLaidake , |
paramavikrama dvAra pAlakarupAsaniya |
parama BakutiMda pELuve prathama dvAradali |
sthiravAda prAci BAgada CidradaBimAni |
parataranu prANanAmA || 6 ||

jaDa vAyugaBimAni KaDu cakShumAnibalu |
taDiyadAditya tEjannAdya mAnigaLi |
gaDigaDige nenadupAsane mADe anna balu |
paDadu tEjasvi yAhA |
dRuDhavAda dakShiNa dvitIya dvArake vyAna |
jaDa vAyugaBimAni SOtra kAMtiyaSasvi |
guDurAjamAni eMteMdu pAsanemADe |
paDeva kAMti yaSassanU || 7 ||

paScima dvArABimAni anaLapAna acca
vAgEMdriyadaBimAniyanu tiLiye |
caccaradi brahma varcasviyAguva kELi |
ucca uttara dvArake |
nicca parjanya nAmaka iMdra kIrtimana |
heccAda dRuShThi samAnABidanu |
svacittadiMdupAsane mADu aiSvarya |
becci kIrtiyali mereva || 8 ||

hari UrdhvadvAra pavamAnAKya mArutanu |
niruta jaDavAyugaBimAniyenisuvanu su |
sthiravAda AkASamAni pradhAna |
mArutanu Ojasviyutanu |
smarisi I tera mahAtmaneMdupAsane mADe |
parama tEjasvi mahAtmanAguvanu |
Ivara paMca dvArABimAnigaLE |
svargadvArapareMdu tiLiyabEko || 9 ||

I rItiyiMda tiLidavana kuladali mahA |
vIranAdaMtha j~jAniyu puTTuvanu biDade |
sArutide Srutiyavana saMtati susaMtati |
paraMparAgutidako |
SrI ramAramaNa tridhAma jOtirmayana |
ArAdhiselo divasmita divaH paradalli |
mEreyillade suKa Baritana hRudguhadoLage |
sErippa jyOtirmayanA || 10 ||

idakanuBava dEha spariSa mADidare |
sammudadiMda UShNa tOruvadu mArutamALa |
sadamalAnaMda jyOtirnAmakana stutiyu |
nidaruSana SrOttradoLage |
hodara biDadaMguliyaniDe kELisutalide |
aduBUta jyOtirnAmaka hRudayadallihanA |
hadanadali tiLiye muktiyali divya sukIrti |
vadagi suKaBaritanAhA || 11 ||

A virADUpanAdaMtha BagavaMtanige |
AvaMtarikSha udarave tadASrayavenni |
I vidhadi BU avana pAda mUlASrayavu |
AvadiSa tOLASraya |
SrI virATana SiraH saMmaMdhi suSiravanu |
A udIci bila dvilOkASrayisiyihadu |
gOviMda paratarAnaMdaccarUpanna |
BAviselo suKanidhiyanU || 12 ||

Itane kOSa vasuvAdigaLigASrayanu |
dAta pratyakSha jagadASrayanu siddhavelo |
KyAtavAda digASrayisida bAhyagaLa pesara |
jAta piDidAyudhagaLu |
prItiyiMdali prAcidikkinASraya bAhu |
pUturE juhuyeMdu hesaru cakrava dharisi |
dyOta sahamAna dakShiNa digASraya bAhu |
daityAri SaMKa pANi || 13 |

rA~g~janAmaka pradIci tOLinali gadA |
saMj~ja saMBUta nAmaka udIci padma |
yaj~ja BOktana nAlku tOLugaLa hesaru |
dharma j~jAnavairAgyavU ,
vij~jAna nidhi tOLu aiSvaryaveMba I |
suj~javA I rUpagaLu putrarI pari tiLiye |
aj~janAgi putra rOdaneMdigu illa |
praj~jamati muktanAha || 14 ||

idake nA sAkShiyeMdoredaLu ramAdEvi |
mudadi avinaShTa AnaMdEcCa rUpa saM |
padavuLLa SrIhariyanA upAsane mADi |
sadA AtananurAgadI |
padOpadige kRuShNanna aidi iddEne |
innidu kELi prANanAmaka vAsudEvanu |
adara taruvAya BUrnAma saMkaruShaNanu |
idu BuvaH pradyumnanu || 15 ||

satata svarnAmakaniruddha mUrutiyannu |
vItage nA upAsaniyu mADuvenu |
hitadiMda prANanAmaka vAsudEva |
niSchita JaShAdi svarUpano |
matiyoLage tiLiyo BUrnAma saMka |
ruShaNane UrdhvaMtarikSha dvinAma tattalESa |
gata BuvarnAma pradyummAgni vAyuvA |
dityarali tannAmakA || 16 ||

svarnAmakaniruddha RuggyejussAmadali |
tannAmakana hIge nA upAsane mALpe |
innu sarvAdhikArigaLupAsisireMdu |
cannelakumiyu sArisihaLO |
anyAya mArgavanu jaridu yale manave nI |
stanyapAnavu valleneMba matiyitte trayi |
guNyavarjita hariyamUrti caluvikiyu ani |
anna dvAradi dhEniso || 17 ||

I mahAgAyatri sAmavaMpELvarige |
A mahABagavaMta amita sauKyagaLittu |
sOmArkadaMte poLevuta jagatrayadalli |
sUmahAtme yiMdalI ,
kAmAcArigaLAgi kamanIya BOgagaLu |
nEmadiMdali niraMtara nirupamA suKadi |
SrImaMta varadagOpAlaviThThala tanna |
dhAmadoLagiTTu porevA || 18 ||

Leave a Reply

You might also like

error: Content is protected !!