Composer : Shri Gurugopala vittala
Expln by Shri Kesava Rao Tadipatri
” ರಥದಿಂದ ರಥಕೆ ಬಾರೋ ಹರಿಯೇ ” ,
ದೇಹಾಖ್ಯರಥ – ಅಧ್ಯಾತ್ಮ ಪ್ರಮೇಯ ,
ಶ್ರೀ ವೆಂಕಟೇಶದೇವರ ಸ್ತೋತ್ರ ,
ಶ್ರೀ ಗುರುಗೋಪಾಲವಿಠಲದಾಸರ ರಚನೆ.
ರಥದಿಂದ ರಥಕೆ ಬಾರೋ ಹರಿಯೇ |
ಸುರರಿಗೆ ಸಿಂಧು |
ಮಥಿಸಿ ಪೀಯೂಷವನಿತ್ತ ಧೊರಿಯೆ |
ಶಂಖ ಗದಾಬ್ಜ |
ರಥಾಂಗಧಾರಿ ದುರಿತ ಗಜಕೇಸರಿಯೇ |
ಲೋಕ ಮೋಹಕ |
ಮನ್ಮಥನಯ್ಯ ನಿನಗಾರು ಸರಿಯೆ|
ಸೌಭಾಗ್ಯದ ಸಿರಿಯೇ || ಪ ||
ಪೃಥುವಿಕ್ರಮ ದಶರಥ ನೃಪಸುತ ಜಯ |
ದ್ರಥರಿಪು ಸಖ ಹರಿ ಪ್ರಥಮಾಂಗನಯ್ಯ || ಅ.ಪ||
ಆರು ಮೂರು ದ್ವಾರದ ಪುರದಲ್ಲಿ |
ನಾಡಿ ವನದೊಳಗೆ |
ವಾರಿಜಾತ್ಮಕ ಚಿತ್ರಬೀದಿಯಲಿ |
ಮಂಡಿತ ಕಲ್ಪ |
ಭೂರುಹ ನೆಳಲಿನ ತಂಪಿನಲಿ |
ನವರತ್ನ ಖಚಿತ |
ನೂರು ಸ್ತಂಭದ ತೇರಿಪ್ಪುದಲ್ಲಿ |
ಚಾಮೀಕರ ಪಲ್ಲವ ||
ತೋರಣ ಮೌಕ್ತಿಕ ಹಾರ ಚಂಪಕ ಮಂ – |
ದಾರ ಕುಸುಮ ಹಾರ ವಾರದಿಂದೊಪ್ಪಲು |
ಧೀರ ಶೇಷಮಯ ವೀರಪೀಠದಿ ನಿನ್ನ |
ನಾರೇರಿಂದೊಪ್ಪುವ ಮೂರುತಿ ಮುದದಿ || ೧ ||
ಛತ್ರ ಚಾಮರ ಧ್ವಜ ಹಾವಿಗೆಯು |
ಕಾಳಂಜಿ ದರ್ಪಣ |
ವೇತ್ರಾದಿ ಉಪಸ್ಕರ ಬಹುಪರಿಯು |
ಧರಿಸಿದ ಬ್ರಹ್ಮ |
ಸೂತ್ರ ತ್ರಿನೇತ್ರಾಹಿ ಖಗಪತಿಯು |
ಸ್ಮರಸುರಪ ತಮ್ಮ ತಮ್ಮಯ್ಯ |
ಪತ್ನೇರಿಂದೊಪ್ಪುತ ಸೇವಿಪ ಸಿರಿಯು |
ದಿಕ್ಪಾಲಕ ತತಿಯು ||
ಮಿತ್ರ ಉಡುಪ ವೀತಿ ಹೋತ್ರ ಮಂಡಲವಪ್ಪೆ |
ಅತ್ರಿ ಪ್ರಮುಖ ವಿಧಿ ಪುತ್ರ ಪೌತ್ರ ಬ್ರಹ್ಮ |
ಸೂತ್ರ ತ್ರಯೀಯಿಂದ ಸ್ತೋತ್ರ ಮಾಡುತಲಿರೆ |
ಚಿತ್ರ ವಿಚಿತ್ರ ಚರಿತ್ರ ಸುಗಾತ್ರ || ೨ ||
ಮೊರೆವ ಭೇರಿ ವೀಣೆ ಮೃದಂಗ |
ಕಂಸಾಳೆ ಶಂಖ |
ಬಿರಿದೀನ ಕಾಳೆ ವಾದ್ಯದ ಸಂಘ |
ಮತ್ತೇಭ ಪದಾತಿ |
ತುರಗ ಶ್ಯಂದನಾದಿ ಚತುರಂಗ |
ಸೇನ ಸೇನಾಧಿಪ |
ಪರಿಚ್ಯಾರ ಜನ ಸತ್ಸಭ ಸಪ್ತಾಂಗ |
ಊರ್ವಶಿ ಮೇನಕಿ ಅ -||
ಪ್ಸರರು ಕುಣಿಯೆ ತುಂಬುರು ನಾರದ ಪಾಡೆ |
ಸುರನದಿ ಮೊದಲಾದ ಸರಿತರಾರತಿಯನು |
ಧರಿಸಿ ಮಂಗಳ ಪಾಠಕರು ಜಯಜಯವೆನೆ |
ಪರಮ ಪುರುಷ ಮುರಹರ ಶಿರಿವರದನೆ || ೩ ||
ಸ್ಥಿತ್ವಾ ಗ್ರಾಹಕ ಗತ್ವಾ ಗ್ರಾಹಕವು |
ಹೃಷಿಕಾತ್ಮಕ ಹತ್ತು |
ಉತ್ತುಮ ಹಯದಿಂದ್ಯೊಜಿತ ರಥವು |
ತತ್ವೇಶರ ಬೆರದು |
ಚೈತ್ಯಾಸಾರಥಿ ತುರ್ಯಾತ್ಮಕ ಧ್ವಜವು |
ಮನವೆಂಬೊ ನಿಶಿತ |
ಸೂತ್ರ ತ್ರಿವಿಧ ಕರ್ಮಾತ್ಮಕ ಕಶವು |
ಯೋಗ್ಯತಿ ಧನುಶರ ಇಚ್ಛಾ ||
ಸತ್ಯಮಹಿಮ ಎನ್ನ ಚಿತ್ತವೃತ್ತಿಗಳೆಂಬ |
ಚಿತ್ರವೀಥಿಗಳಲ್ಲಿ ನಿತ್ಯ ಸಂಚರಿಸುತ್ತ |
ಮತ್ತದೈತ್ಯರ ಚಮು ತತ್ತರಿದವರ ಸು – |
ವಿತ್ತ ಶೆಳದು ನಿಜ ಭಕ್ತರಿಗೀವುತ || ೪ ||
ಅತಿಸೂಕ್ಷ್ಮ ವಿಸ್ತಾರ ಕಾಮರೂಪ |
ರಥದಲ್ಲಿ ಅಪರಿ – |ಮಿತ
ಬಹು ಪರಿಪರಿ ನಿನ್ನ ರೂಪ |
ರಮೆಯಿಂದ ಬೆರೆದು |
ಸತತ ರಮಿಸುವ ಸುಪ್ರತಾಪ |
ಎನಗೊಲಿದು ಮುದದಿ |
ಅತಿವೇಗ ವೋಡಿಸು ಸಂತಾಪ |
ಸುಜನಾಬ್ಜಕೆ ದಿನಪ ||
ಹಿತ ಗತಿಪ್ರದ ಗುರುಗೋಪಾಲವಿಠಲ |
ಕ್ಷಿತಿಯೊಳಗಹಿ ಪರ್ವತ ಮಂದಿರ ಶ್ರೀ |
ಪತಿಯೆ ಎನ್ನ ಅಘ ತತಿಗಳೆಣಿಸದಲೆ |
ಪತಿತಪಾವನ ಮಾರುತಿನುತ ವಿತತ || ೫ ||
” rathadiMda rathake bArO hariyE ” ,
dEhAKyaratha – adhyAtma pramEya ,
SrI veMkaTESadEvara stOtra ,
SrI gurugOpAlaviThaladAsara racane.
rathadiMda rathake bArO hariyE |
surarige siMdhu |
mathisi pIyUShavanitta dhoriye |
SaMKa gadAbja |
rathAMgadhAri durita gajakEsariyE |
lOka mOhaka |
manmathanayya ninagAru sariye|
sauBAgyada siriyE || pa ||
pRuthuvikrama daSaratha nRupasuta jaya |
dratharipu saKa hari prathamAMganayya || a.pa||
Aru mUru dvArada puradalli |
nADi vanadoLage |
vArijAtmaka citrabIdiyali |
maMDita kalpa |
BUruha neLalina taMpinali |
navaratna Kacita |
nUru staMBada tErippudalli |
cAmIkara pallava ||
tOraNa mauktika hAra caMpaka maM – |
dAra kusuma hAra vAradiMdoppalu |
dhIra SEShamaya vIrapIThadi ninna |
nArEriMdoppuva mUruti mudadi || 1 ||
Catra cAmara dhvaja hAvigeyu |
kALaMji darpaNa |
vEtrAdi upaskara bahupariyu |
dharisida brahma |
sUtra trinEtrAhi Kagapatiyu |
smarasurapa tamma tammayya |
patnEriMdopputa sEvipa siriyu |
dikpAlaka tatiyu ||
mitra uDupa vIti hOtra maMDalavappe |
atri pramuKa vidhi putra pautra brahma |
sUtra trayIyiMda stOtra mADutalire |
citra vicitra caritra sugAtra || 2 ||
moreva BEri vINe mRudaMga |
kaMsALe SaMKa |
biridIna kALe vAdyada saMGa |
mattEBa padAti |
turaga SyaMdanAdi caturaMga |
sEna sEnAdhipa |
paricyAra jana satsaBa saptAMga |
UrvaSi mEnaki a -||
psararu kuNiye tuMburu nArada pADe |
suranadi modalAda saritarAratiyanu |
dharisi maMgaLa pAThakaru jayajayavene |
parama puruSha murahara Sirivaradane || 3 ||
sthitvA grAhaka gatvA grAhakavu |
hRuShikAtmaka hattu |
uttuma hayadiMdyojita rathavu |
tatvESara beradu |
caityAsArathi turyAtmaka dhvajavu |
manaveMbo niSita |
sUtra trividha karmAtmaka kaSavu |
yOgyati dhanuSara icCA ||
satyamahima enna cittavRuttigaLeMba |
citravIthigaLalli nitya saMcarisutta |
mattadaityara camu tattaridavara su – |
vitta SeLadu nija BaktarigIvuta || 4 ||
atisUkShma vistAra kAmarUpa |
rathadalli apari – |mita
bahu paripari ninna rUpa |
rameyiMda beredu |
satata ramisuva supratApa |
enagolidu mudadi |
ativEga vODisu saMtApa |
sujanAbjake dinapa ||
hita gatiprada gurugOpAlaviThala |
kShitiyoLagahi parvata maMdira SrI |
patiye enna aGa tatigaLeNisadale |
patitapAvana mArutinuta vitata || 5 ||

Leave a Reply
You must be logged in to post a comment.