Composer : Shri Gurujagannatha dasaru
ರಾಘವೇಂದ್ರ ಗುರುರಾಯಾ
ನೀ ವೇಗದಿ ಪಿಡಿ ಎನ್ನ ಕೈಯ್ಯಾ [ಪ]
ಆಗಾಮಿ ಸಂಚಿತ ಭೊಗಗಳುಳ್ಳ ಭವ-
ಸಾಗರದಲ್ಲಿ ಬಿದ್ದೆ ವೇಗದಿ ನೀ ಬಂದು [ಅ.ಪ]
ಭಾವ ದ್ರವ್ಯ ಕ್ರಿಯಾದ್ವೈತ ಇದರ
ಅನುಭಾವವ ತಿಳಿಯದೆ ನಿರುತ
ಸೇವಿಪ ಸಂತತ ಈವಿಧ ನರರನು
ದೇವರೆಂದನುದಿನ ಭಾವಿಸಿದೆನ್ನನು [೧]
ಅಶನ ವಸನಕಾಗಿ ನಾ ಪರವಶದಲಿ ಶಿರಬಾಗಿ,
ಅಸಮ ನಿನ್ನಯ ಪಾದ ಬಿಸಜ ಭಜಿಸದೆ ನಾ,
ವಸುಮತಿಯೊಳು ಬಲು ಹಸನಗೆಟ್ಟೆನ್ನನು [೨]
ಶಿರಿವರ ಗುರುಜಗನ್ನಾಥ-ವಿಠಲನ ಪರಿಸರವರನಾಥ,
ಸರಿಯೆನಿಸಿದ ನಿನ್ನ ಪರಿಚರರೊಳು ಎನ್ನ
ಮರೆಯದೆ ದಯದಲಿ ಪೊರೆವೊದು ಎನ್ನನು [೩]
rAGavEMdra gururAyA
nI vEgadi piDi enna kaiyyA [pa]
AgAmi saMcita BogagaLuLLa Bava-
sAgaradalli bidde vEgadi nI baMdu [a.pa]
BAva dravya kriyAdvaita idara
anuBAvava tiLiyade niruta
sEvipa saMtata Ividha nararanu
dEvareMdanudina BAvisidennanu [1]
aSana vasanakAgi nA paravaSadali SirabAgi,
asama ninnaya pAda bisaja Bajisade nA,
vasumatiyoLu balu hasanageTTennanu [2]
Sirivara gurujagannAtha-viThalana parisaravaranAtha,
sariyenisida ninna paricararoLu enna
mareyade dayadali porevodu ennanu [3]

Leave a Reply
You must be logged in to post a comment.