-
Raghavendra gururaya nee
Composer : Shri Gurujagannatha dasaru ರಾಘವೇಂದ್ರ ಗುರುರಾಯಾನೀ ವೇಗದಿ ಪಿಡಿ ಎನ್ನ ಕೈಯ್ಯಾ [ಪ]ಆಗಾಮಿ ಸಂಚಿತ ಭೊಗಗಳುಳ್ಳ ಭವ-ಸಾಗರದಲ್ಲಿ ಬಿದ್ದೆ ವೇಗದಿ ನೀ ಬಂದು [ಅ.ಪ] ಭಾವ ದ್ರವ್ಯ ಕ್ರಿಯಾದ್ವೈತ ಇದರಅನುಭಾವವ ತಿಳಿಯದೆ ನಿರುತಸೇವಿಪ ಸಂತತ ಈವಿಧ ನರರನುದೇವರೆಂದನುದಿನ ಭಾವಿಸಿದೆನ್ನನು [೧] ಅಶನ ವಸನಕಾಗಿ ನಾ ಪರವಶದಲಿ ಶಿರಬಾಗಿ,ಅಸಮ ನಿನ್ನಯ ಪಾದ ಬಿಸಜ ಭಜಿಸದೆ ನಾ,ವಸುಮತಿಯೊಳು ಬಲು ಹಸನಗೆಟ್ಟೆನ್ನನು [೨] ಶಿರಿವರ ಗುರುಜಗನ್ನಾಥ-ವಿಠಲನ ಪರಿಸರವರನಾಥ,ಸರಿಯೆನಿಸಿದ ನಿನ್ನ ಪರಿಚರರೊಳು ಎನ್ನಮರೆಯದೆ ದಯದಲಿ ಪೊರೆವೊದು ಎನ್ನನು [೩] rAGavEMdra…
