Innadaru hariya neneyo

Composer : Shri Purandara dasaru

By Smt.Shubhalakshmi Rao

ಇನ್ನಾದರೂ ಹರಿಯ ನೆನೆಯೊ ನೀ ಮನುಜಾ |
ಮುನ್ನಾದ ದುಃಖಗಳು ನಿಜವಾಗಿ ತೊಲಗುವುವು (ಪ.)

ಊರೂರ ನದಿಗಳಲಿ ಬಾರಿ ಬಾರಿಗೆ ಮುಳುಗಿ |
ತೀರದಲಿ ಕುಳಿತು ನೀ ಪಣೆಗೆ ನಿತ್ಯ ||
ನೀರಿನಲಿ ಮಟ್ಟಿಯನು ಕಲಸಿ ಬರೆಯುತ ಮೂಗು – |
ಬೇರನ್ನು ಪಿಡಿದು ಮುಸುಕಿಕ್ಕಲೇನುಂಟು (೧)

ನೂರಾರು ಕರ್ಮಂಗಳನ್ನು ಡಂಭಕೆ ಮಾಡಿ |
ಆರಾರಿಗೋ ಹಣದ ದಾನಕೊಟ್ಟು |
ದಾರಿದ್ರ್ಯವನು ಪಡೆದು ತಿರಿದಿಂಬುವುದಕೀಗ |
ದಾರಿಯಾಯಿತೆ ಹೊರತು ಬೇರೆ ಫಲವುಂಟೇ? (೨)

ಕಾಡು ದೈವಗಳನ್ನು ಚಿನ್ನ – ಬೆಳ್ಳಿಗಳಿಂದೆ |
ಮಾಡಿಕೊಂಡವರ ಪೂಜೆಯನೆ ಮಾಡಿ |
ಕಾಡು ಕಳ್ಳರು ಬಂದು ಅವುಗಳನು ಕೊಂಡೊಯ್ಯೆ |
ಮಾಡಿಕೊಂಡಿರ್ದುದಕೆ ಬಾಯ ಬಡಕೊಳ್ಳುವೆ (೩)

ಮಗನ ಮದುವೆಯು ಎಂದು ಸಾಲವನು ಮಾಡಿ ನೀ |
ಸುಗುಣಿಯೆನ್ನಿಸಿಕೊಳಲು ವ್ಯಯ ಮಾಡಿದೆ ||
ಹಗರಣವ ಪಡಿಸಿದರೆ ಸಾಲಗಾರರು ಬಂದು |
ಬಗೆಬಗೆಯೊಳವರ ಕಾಲ್ಗೆರಗಿ ಬಿದ್ದಿರುವೆ (೪)

ಕೆಟ್ಟುವೀ ಕೆಲಸಗಳ ಮಾಡಿದರೆ ಫಲವೇನು ? |
ತಟ್ಟನೇ ಶ್ರೀಹರಿಯ ಪದವ ನಂಬಿ ||
ದಿಟ್ಟ ಪುರಂದರವಿಠಲನೆ ಎಂದರೆ |
ಸುಟ್ಟು ಹೋಗುವುವಯ್ಯ ನಿನ್ನ ಕಷ್ಟಗಳು (೫)


innAdarU hariya neneyo nI manujA |
munnAda duHKagaLu nijavAgi tolaguvuvu (pa.)

UrUra nadigaLali bAri bArige muLugi |
tIradali kuLitu nI paNege nitya ||
nIrinali maTTiyanu kalasi bareyuta mUgu – |
bErannu piDidu musukikkalEnuMTu (1)

nUrAru karmaMgaLannu DaMBake mADi |
ArArigO haNada dAnakoTTu |
dAridryavanu paDedu tiridiMbuvudakIga |
dAriyAyite horatu bEre PalavuMTE? (2)

kADu daivagaLannu cinna – beLLigaLiMde |
mADikoMDavara pUjeyane mADi |
kADu kaLLaru baMdu avugaLanu koMDoyye |
mADikoMDirdudake bAya baDakoLLuve (3)

magana maduveyu eMdu sAlavanu mADi nI |
suguNiyennisikoLalu vyaya mADide ||
hagaraNava paDisidare sAlagAraru baMdu |
bagebageyoLavara kAlgeragi biddiruve (4)

keTTuvI kelasagaLa mADidare PalavEnu ? |
taTTanE SrIhariya padava naMbi ||
diTTa puraMdaraviThalane eMdare |
suTTu hOguvuvayya ninna kaShTagaLu (5)

Leave a Reply

You might also like

error: Content is protected !!