Smarisai satatavu

Composer : Shri Vidyaprasanna Tirtharu

By Smt.Shubhalakshmi Rao

ಸ್ಮರಿಸೈ ಸತತವು ಸಂಸ್ಮರಿಸೈ ಸತತವು [ಪ]

ಯತಿಗುಣ ಭೂಷಣ ವ್ಯಾಸ ಯತೀಂದ್ರರ [ಅ.ಪ]

ಗುರು ಬ್ರಹ್ಮಣ್ಯರ ಕರಕಮಲದಿ ಪುಟ್ಟಿ
ಪರಮ ಕೀರುತಿಯಿಂದ ಮೆರೆದ ಯತೀಂದ್ರರ (೧)

ಸುಖಬೋಧ ಸದಾಗಮ ಸಾರವ ನಿಜ
ಮುಖದಿಂ ಭೂಸುರರೊಳಗರುಹಿದವರ (೨)

ಚಂದ್ರಿಕಾ ನ್ಯಾಯಾಮೃತ ತರ್ಕತಾಂಡವ
ಚಂದದಿ ರಚಿಸಿ ಆನಂದಗೊಂಡವರ (೩)

ವರ ಕರ್ಣಾಟಕ ಸಿಂಹಾಸನದಲಿ
ಮರಕತ ಮಣಿಯಭೀಷೇಕ ಪಡೆದವರ (೪)

ಉನ್ನತ ಗುಣ ಸುಖ ಚಿನ್ಮಯ ರೂಪ, ಪ್ರ
ಸನ್ನ ಶ್ರೀರಾಮನ ಭಕುತವರೇಣ್ಯರ (೫)


smarisai satatavu saMsmarisai satatavu [pa]

yatiguNa BUShaNa vyAsa yatIMdrara [a.pa]

guru brahmaNyara karakamaladi puTTi
parama kIrutiyiMda mereda yatIMdrara (1)

suKabOdha sadAgama sArava nija
muKadiM BUsuraroLagaruhidavara (2)

caMdrikA nyAyAmRuta tarkatAMDava
caMdadi racisi AnaMdagoMDavara (3)

vara karNATaka siMhAsanadali
marakata maNiyaBIShEka paDedavara (4)

unnata guNa suKa cinmaya rUpa, pra
sanna SrIrAmana BakutavarENyara (5)

Leave a Reply

You might also like

error: Content is protected !!