Composer : Shri Shyamasundara dasaru
ಎಂತು ನೀ ವಶವಾದಿಯೇ ಭಾರತೀದೇವಿ |
ಎಂತು ನೀ ಮರುಳಾದಿಯೇ ||ಪ||
ಎಂಟು ನೀ ವಶವಾದಿ | ಕಂತುಹರನ ತಾಯಿ |
ದಂತಿಗಮನೆ ದಮಯಂತಿ ಕಾಂತ ಸುತೆ ||ಅ.ಪ ||
ಧರೆಯೊಳು ಪುಟ್ಟುತಲಿ ಆಕಾಶಕೆ |
ಭರದಿಂದ ಜಿಗಿಯುತಲಿ | ಸರಿಸಿಜ ಸಖನಾದ |
ತರಣಿಯ ಫಲವೆಂದು | ಅರಿತು ಭಕ್ಷಿಸಲ್-ಹೋದ |
ತರುಚರ ರೂಪಿಗೆ || ೧ ||
ಪುಂಡರೀಕಾಕ್ಷ ಕೇಳಿ ದ್ವಾಪರದಿ |
ಪ್ರಚಂಡಗೆ ಒಲಿಯುತಲಿ | ಭಂಡ ಬಕನ ಶಿರ – |
ದಿಂಡುಗೆಡಹಿ ಅವನ | ಭಂಡಿ ಓದನವನ್ನು |
ಉಂಡ ಪುಂಡಗೆ ಮಾತೆ || ೨ ||
ಶ್ರೀ ಶ್ಯಾಮಸುಂದರನೇ ತ್ರೈಲೋಕಕ್ಕೆ |
ಈಶನೆಂಬುದು ತಾನು | ಲೇಸಾಗಿ ಪೇಳಲು |
ಲೇಶವಾದರು ನಿನ್ನ | ಆಶೆ ಇಲ್ಲದೆ |
ಸಂನ್ಯಾಸಿ ಆದವನಿಗೆ || ೩||
eMtu nI vaSavAdiyE BAratIdEvi |
eMtu nI maruLAdiyE ||pa||
eMTu nI vaSavAdi | kaMtuharana tAyi |
daMtigamane damayaMti kAMta sute ||a.pa ||
dhareyoLu puTTutali AkASake |
BaradiMda jigiyutali | sarisija saKanAda |
taraNiya PalaveMdu | aritu BakShisal-hOda |
tarucara rUpige || 1 ||
puMDarIkAkSha kELi dvAparadi |
pracaMDage oliyutali | BaMDa bakana Sira – |
diMDugeDahi avana | BaMDi Odanavannu |
uMDa puMDage mAte || 2 ||
SrI SyAmasuMdaranE trailOkakke |
ISaneMbudu tAnu | lEsAgi pELalu |
lESavAdaru ninna | ASe illade |
saMnyAsi Adavanige || 3||
Leave a Reply
You must be logged in to post a comment.