Composer : Shri Jayesha vittala
ದೇವ ಬಾ ದೇವ ಬಾ ದೇವ ಗೋಪೀನಾಥ || ಪ ||
ದೇವ ಬಾರೋ ದೇವ ಬಾರೋ ಗೋವ ಕಾವ ತಾತ || ಅ.ಪ ||
ಸುಂದರ ಮೂರುತಿ ಆನಂದ ಬೇಗ ಬಾರೋ |
ಚಂದಿರ ಮುಖನೇ ಮೃಗೇಂದ್ರ ಬೇಗ ಬಾರೋ || ೧ ||
ಸಿಂದೂರವರದ ಸುರವಂದ್ಯ ಬೇಗ ಬಾರೋ |
ಇಂದಿರೆ ಅರಸ ಗೋಪೀಕಂದ ಬೇಗ ಬಾರೋ || ೨ ||
ಆಪ್ತನೂ ಗುಪ್ತ ನಿರ್ಲಿಪ್ತ ಬೇಗ ಬಾರೋ |
ದೀಪ್ತ ಆಸುಪ್ತ ಮಹಗುಪ್ತ ಬೇಗ ಬಾರೋ || ೩ ||
ವಂದ್ಯ ನೀ ಎಂದೆ ಎನ್ನ ಮುಂದೆ ಬೇಗ ಬಾರೋ |
ಹಿಂದೆ ಭೋ ನೊಂದೆ ಕೇಳೆಂದೆ ಬೇಗ ಬಾರೋ || ೪ ||
ನಲ್ಲ ಜಯೇಶವಿಠ್ಠಲ್ಲ ಬೇಗ ಬಾರೋ |
ಪಲ್ಲವಾ ಬೆಳೆಸೂತಿಲ್ಲಿ ಬೇಗ ಬಾರೋ || ೫ ||
dEva bA dEva bA dEva gOpInAtha || pa ||
dEva bArO dEva bArO gOva kAva tAta || a.pa ||
suMdara mUruti AnaMda bEga bArO |
caMdira muKanE mRugEMdra bEga bArO || 1 ||
siMdUravarada suravaMdya bEga bArO |
iMdire arasa gOpIkaMda bEga bArO || 2 ||
AptanU gupta nirlipta bEga bArO |
dIpta Asupta mahagupta bEga bArO || 3 ||
vaMdya nI eMde enna muMde bEga bArO |
hiMde BO noMde kELeMde bEga bArO || 4 ||
nalla jayESaviThThalla bEga bArO |
pallavA beLesUtilli bEga bArO || 5 ||
Leave a Reply
You must be logged in to post a comment.