Vishwaada Guruve krishnarya

Composer : Shri Jayesha vittala [on Shri Ibharamapura Appavaru]

By Smt.Shubhalakshmi Rao

ಶ್ರೀ ಇಭರಾಮಪುರ ಕೃಷ್ಣಾರ್ಯರು:

ಶ್ರೀರಾಮ ಚರಣದ್ವಂದ ವಾರ್ಧಿ ಚಂದ್ರೋದಯೋಪಮ: |
ಶ್ರೀಕೃಷ್ಣ ಪೂಜಾನಿರತ: ಕೃಷ್ಣೋ ಮಾಮ್ ಸರ್ವದಾವತು ||

ವಿಶ್ವಾದ ಗುರುವೆ ಕೃಷ್ಣಾರ್ಯ ನಮ್ಮಪ್ಪ
ಶ್ರೀ ವಿಶ್ವಾದ ಗುರುವೆ ಕೃಷ್ಣಾರ್ಯ || ಪ ||

ಸತ್ಯಸಂಕಲ್ಪನ ಚಿತ್ತವೃತ್ತಿ ಬಲ್ಲ ಸರ್ವಜ್ಞನೆ
ಚಿತ್ತ ದೇಹದಲ್ಲಿ ನಿಂತು ಸ್ವಾಸ್ಥ್ಯ ನೀಡು ಭಾರ ಕರ್ತ || ೧ ||

ಕಲ್ಯಾಣಾತ್ಮಕ ಕೃಷ್ಣನ ಮಂತ್ರಿ ಚೆಲ್ಲು ಕರುಣ ನಮ್ಮ ಮ್ಯಾಲೆ |
ವಲ್ಲೆವಯ್ಯಾ ಅನ್ಯರಸಂಗ ಎಲ್ಲಾ ಬಲ್ಲ ಗುರುವೇ ನಮೋ || ೨ ||

ನೀಚ ಭಾವಕ್ಕಳುಕಿಸದೆ ಬಾಚಿ ಯಮ್ಮ ರಕ್ಷಿಪೋದು |
ಗೋಚರವಲ್ಲದ ಮಂಗಳ ಮಹಿಮ ಯೋಚಿಸದವಗುಣ ಸಲಹೋ ಕರುಣಿ || ೩ ||

ಹರಿಯೇ ಸರ್ವೋತ್ತಮನೆಂದು ನಿರುತ ನಿಸ್ಸಂದೇಹದಿಂದರಿತ |
ಅಮಿತಬೋಧ ಎನ್ನ ತ್ವರಿತ ಹರಿಯಲ್ಲಿ ಬಿಟ್ಟು ಸಲಹೋ || ೪ ||

ಆರ್ಯರಲ್ಲಿ ನಿಂತು ಎನ್ನ ತ್ವರಿಯ ಅಭಿಮಾನಿಸಿದ ಗುರುವೆ |
ಧೈರ್ಯ ನೀನೆಯಾಗಿ ಎನಗೆ ಜಯೇಶ ವಿಠಲನ ಮೂರುತಿಯ ತೋರೋ || ೫ ||


shrI ibharAmapura kRuShNAryaru:

shrIrAma charaNadvaMda vArdhi chaMdrOdayOpama: |
shrIkRuShNa pUjAnirata: kRuShNO mAm sarvadAvatu ||

vishvAda guruve kRuShNArya nammappa
shrI vishvAda guruve kRuShNArya || pa ||

satyasaMkalpana chittavRutti balla sarvaj~jane
chitta dEhadalli niMtu svAsthya nIDu bhAra karta || 1 ||

kalyANAtmaka kRuShNana maMtri chellu karuNa namma myAle |
vallevayyA anyarasaMga ellA balla guruvE namO || 2 ||

nIcha bhAvakkaLukisade bAchi yamma rakShipOdu |
gOcharavallada maMgaLa mahima yOchisadavaguNa salahO karuNi || 3 ||

hariyE sarvOttamaneMdu niruta nissaMdEhadiMdarita |
amitabOdha enna tvarita hariyalli biTTu salahO || 4 ||

Aryaralli niMtu enna tvariya abhimAnisida guruve |
dhairya nIneyAgi enage jayEsha viThalana mUrutiya tOrO || 5 ||

Leave a Reply

You might also like

error: Content is protected !!