Enidu Bayala Pasha

Composer : Shri Helavanakatte giriyamma

By Smt.Shubhalakshmi Rao

ಏನಿದು ಬಯಲ ಪಾಶ ನೋಡಿದರಿಲ್ಲ
ಏನು ಹುರುಡು ಗಾಣೆನೊ |
ನಾನಾಜನ್ಮದಿ ಬಂದು ಹೊಂದಲಾರೆನು ನಿನ್ನ
ಧ್ಯಾನವ ಕೊಡೊ ಅಭಿಮಾನದೊಡೆಯ ರಂಗ [ಪ]

ನೀರ ಬೊಬ್ಬುಳಿಯಂದದಿ ದೇಹವ ನೆಚ್ಚಿ
ದೂರ ಹೊತ್ತೆನು ಹರಿಯೆ
ಯಾರು ಎನಗೆ ಸರಿಯಿಲ್ಲೆಂಬಹಂ-
ಕಾರ ಪ್ರಪಂಚದ ಬಂಧನದೊಳು ಸಿಲುಕಿ ನೊಂದೆನೊ,
ಹರಿ ನಿಮ್ಮ ನಾಮವ ನೆನೆಯದೆ ಎಂದೆಂದಿಗೆನಗಿತ್ತು
ಸದ್ಗತಿ ತೋರೊ [೧]

ಬಡವರಾಧಾರಿ ಕೇಳೊ ಸಂಸಾರದ
ಮಡುವಿನೊಳಗೆ ಧುಮುಕಿ,
ಕಡೆ ಹಾಯಿಸೊ ಕೈಪಿಡಿದು ಕೃಪೆಯೊಳೆನ್ನ
ದಡವ ಸೇರಿಸೊ ಜಗದೊಡೆಯ ಶ್ರಿರಂಗಯ್ಯ [೨]

ಸುತ್ತೆಲ್ಲ ಬಂಧು ಬಳಗ ನವಮಾಸದಿ
ಹೊತ್ತು ಪಡೆದ ಜನನಿ,
ಪುತ್ರ ಸಹೋದರರ ಘಳಿಗ್ಯಗಲಲಾರದೆ
ಮತ್ತೆ ಯಮನವರೊಯ್ವಾಗ ಯಾರು ಸಂಗಡ ಇಲ್ಲ [೩]

ಆಸೆಯೆಂಬುದು ಬಿಡದು ಈ ಭುವನದೊಳ್
ಲೇಸುಗಾಣೆನು ಹರಿಯೆ,
ಭಾಷೆಯ ಕೊಡು ಮುಂದೆ ಜನುಮ ಬಾರದ ಹಾಗೆ,
ಈಶ ಸನ್ನುತ ಹೆಳವನಕಟ್ಟೆ ರಂಗಯ್ಯ [೪]


Enidu bayala pASa nODidarilla
Enu huruDu gANeno |
nAnAjanmadi baMdu hoMdalArenu ninna
dhyAnava koDo aBimAnadoDeya raMga [pa]

nIra bobbuLiyaMdadi dEhava necci
dUra hottenu hariye
yAru enage sariyilleMbahaM-
kAra prapaMcada baMdhanadoLu siluki noMdeno,
hari nimma nAmava neneyade eMdeMdigenagittu
sadgati tOro [1]

baDavarAdhAri kELo saMsArada
maDuvinoLage dhumuki,
kaDe hAyiso kaipiDidu kRupeyoLenna
daDava sEriso jagadoDeya SriraMgayya [2]

suttella baMdhu baLaga navamAsadi
hottu paDeda janani,
putra sahOdarara GaLigyagalalArade
matte yamanavaroyvAga yAru saMgaDa illa [3]

AseyeMbudu biDadu I BuvanadoL
lEsugANenu hariye,
BASheya koDu muMde januma bArada hAge,
ISa sannuta heLavanakaTTe raMgayya [4]

Leave a Reply

You might also like

error: Content is protected !!