Tondanu kanduda

Composer: Shri Vyasarajaru

By Smt.Shubhalakshmi Rao

ತೊಂಡನು ಕಂಡುದ ಬಿನ್ನೈಸುವೆನು
ಪಾಂಡವ ಪ್ರಿಯ ಎನ್ನ ತಪ್ಪು ಕಾಯಯ್ಯ [ಪ]

ಹರಿ ನಿನ್ನ ನಾಮ ಕಾಮಧೇನುವಿಗೆ
ದುರಿತದೊಟ್ಟಿಲು ಮೇವು ಭವಾಂಬುಧಿಯು
ಅರಸಿ ಕುಡಿವ ನೀರೆರೆವಡೆನ್ನಲ್ಲಿ
ಭರಿತವಾಗಿರೆ ಒಲಿದು ಎನ್ನೊಳ್ಯಾಕಿರಿಸೆ [೧]

ಮುನಿಗಳ ಮನದ ಮೊನೆಯಾದ ಕೊನೆಯಲ್ಲಿ
ಘನಭಕ್ತಿ ಪಾಶದಿ ಸಿಲುಕಲ್ಯಾಕೆ
ಎನ್ನ ಚಿತ್ತ ಚಂಚಲದುಯ್ಯಾಲೆಯಲಿ, ನಿನ್ನ
ಮನ ಬಂದಂತೆ ಓಲ್ಯಾಡಲಾಗದೆ [೨]

ಕರ್ಣರಂಧ್ರದಿ ಮನವನು ಪೊಕ್ಕು
ಪಾಪವ ನಿನ್ನವರಲಿ ತಳವರಸಲ್ಯಾಕೆ
ಎನ್ನೊಳ ಹೊರಗೆ ಪಾಪ ರಾಸಿಗಳಿವೆ, ನಿನ್ನ
ಮನ ಬಂದಂತೆ ಸೊರೆಗೊಳ್ಳೆಲೊ ಕೃಷ್ಣ [೩]


toMDanu kaMDuda binnaisuvenu
pAMDava priya enna tappu kAyayya [pa]

hari ninna nAma kAmadhEnuvige
duritadoTTilu mEvu BavAMbudhiyu
arasi kuDiva nIrerevaDennalli
BaritavAgire olidu ennoLyAkirise [1]

munigaLa manada moneyAda koneyalli
GanaBakti pASadi silukalyAke
enna citta caMcaladuyyAleyali, ninna
mana baMdaMte OlyADalAgade [2]

karNaraMdhradi manavanu pokku
pApava ninnavarali taLavarasalyAke
ennoLa horage pApa rAsigaLive, ninna
mana baMdaMte soregoLLelo kRuShNa [3]

Leave a Reply

Your email address will not be published. Required fields are marked *

You might also like

error: Content is protected !!