Composer: Shri Krishna Vittala
ಗುರುಗಳ ನೋಡಿರಿ ನೀವು
ಗುರುಗಳ ನೋಡಿರಿ ರಾಘವೇಂದ್ರ [ಪ]
ಗುರುಗಳ ನೋಡಿ ಚರಣದಿ ಬಾಗಿ
ಕರೆಕರೆ ನೀಗಿ ವರಸುಖ ಪಡೆಯಿರಿ [ಅ.ಪ]
ಕಾಮಿತ ಫಲಗಳ ಇತ್ತು ಇತ್ತು
ತಾಮಸ ಗುಣಗಳ ಕೆತ್ತಿ ಕೆತ್ತಿ
ರಾಮನ ಭಕ್ತಿಯ ಬಿತ್ತಿ ಬಿತ್ತಿ
ಪ್ರೇಮದಿ ಶಿಷ್ಯರ ಸಲಹುವ ನಮ್ಮ [೧]
ಅಂತೆ ಕಂತೇ ಸಂತೆ ಮಾತು
ಸಂತರ ಬೆಲ್ಲ ಇವರಲಿಲ್ಲ
ಎಂಥಾ ಭಕ್ತಿ ಅಂಥಾ ಫಲವು
ಕುಂತೀ ಭೀಮನ ಪಂಥಾ ಪಿಡಿದು [೨]
ಇಲ್ಲ ಎಂಬಗೆ ಎಲ್ಲಾ ಇಲ್ಲಾ
ನಲ್ಲ ಎಂಬಗೆ ಎಲ್ಲಾ ಉಂಟು
ಕ್ಷುಲ್ಲ ಸಂಶಯ ಹಲ್ಲು ಮುರಿದು
ಪುಲ್ಲ ನಾಭನ ಬಲ್ಲವರೊಡನೆ [೩]
ಕಲಿಯೆಂದೇಕೆ ಅಳುವಿರಿ ನೀವು
ಒಲಿಯಲು ಗುರುವು ಸುಳಿಯುವ ಹರಿಯು
ತುಳಿಯುತ ಕಲಿಯ ಬೆಳಸಿರಿ ಭಕ್ತಿ
ಸುಲಭವು ಕೇಳಿ ಕಳೆಯದೆ ಕಾಲ [೪]
ಕೃಷ್ಣ ವಿಠಲನ ಇಷ್ಟ ಗುರುಗಳು
ತೃಷ್ಠರಾದೆಡೆ ಇಷ್ಟ ಕರಗತವು
ಭ್ರಷ್ಟರಾಗದೆ ಶಿಷ್ಠರ ಸೇರುತ
ಪುಷ್ಠಿಯ ಗೈಸುತ ಸುಷ್ಠು ಜ್ಞಾನವ [೫]
gurugaLa nODiri nIvu
gurugaLa nODiri rAGavEMdra [pa]
gurugaLa nODi caraNadi bAgi
karekare nIgi varasuKa paDeyiri [a.pa]
kAmita PalagaLa ittu ittu
tAmasa guNagaLa ketti ketti
rAmana Baktiya bitti bitti
prEmadi SiShyara salahuva namma [1]
aMte kaMtE saMte mAtu
saMtara bella ivaralilla
eMthA Bakti aMthA Palavu
kuMtI BImana paMthA piDidu [2]
illa eMbage ellA illA
nalla eMbage ellA uMTu
kShulla saMSaya hallu muridu
pulla nABana ballavaroDane [3]
kaliyeMdEke aLuviri nIvu
oliyalu guruvu suLiyuva hariyu
tuLiyuta kaliya beLasiri Bakti
sulaBavu kELi kaLeyade kAla [4]
kRuShNa viThalana iShTa gurugaLu
tRuShTharAdeDe iShTa karagatavu
BraShTarAgade SiShThara sEruta
puShThiya gaisuta suShThu j~jAnava [5]
Leave a Reply