Composer: Shri Gurupranesha dasaru
ಮಹದೇವಾ ಮಹದೇವಾ |
ಕಾಯೋ ಮಹದೇವ ಎನ್ನನೀ |
ನೋಯಗೊಡದೆ ತ್ವರ | ಪಾವನ ಮಾಡಿ (ಪ)
ಅಸಮ ರಕ್ಕಸಗೆ | ವಶವಾಗೆವನನು |
ಬಿಸಜಾಕ್ಷಗೆ ಒಪ್ಪಿಸಿ | ಕೊಲಿಸಿದನೇ (೧)
ನಂಜುಂಡರಗಿಸಿ | ದಂಜನೆ ಕುವರ ಪ್ರ |
ಭಂಜನ ಸುತನಾನಂಜುವೆನೀಗಾ (೨)
ಸೂಸುವ ಭವಶರ | ದೀಸದೆ ಗುರು ಪ್ರಾ |
ಣೇಶ ವಿಠ್ಠಲನ | ದಾಸ ಮುಣುಗುವೆ (೩)
mahadEvA mahadEvA |
kAyO mahadEva ennanI |
nOyagoDade tvara | pAvana mADi (pa)
asama rakkasage | vaSavAgevananu |
bisajAkShage oppisi | kolisidanE (1)
naMjuMDaragisi | daMjane kuvara pra |
BaMjana sutanAnaMjuvenIgA (2)
sUsuva BavaSara | dIsade guru prA |
NESa viThThalana | dAsa muNuguve (3)
Leave a Reply