Composer: Shri Purandara dasaru
ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ
ಮತಿ ಪ್ರೇರಿಸುವಳು ಪಾರ್ವತಿ ದೇವೀ ||ಪ||
ಮುಕುತಿ ಪಥಕೆ ಮಾನವೀವ ಮಹಾರುದ್ರ ದೇವರು,
ಹರಿ ಭಕುತಿ ದಾಯಕಳು ಭಾರತಿ ದೇವಿ,
ಯುಕುತಿ ಶಾಸ್ತ್ರಗಳಲ್ಲಿ ವನಜ ಸಂಭವನರಸಿ
ಸತ್ಕರ್ಮಗಳ ನಡೆಸಿ ಸುಜ್ಞಾನ ಮತಿ ಇತ್ತು,
ಗತಿ ಪಾಲಿಸುವ ನಮ್ಮ ಪವಮಾನನು,
ಚಿತ್ತದಲ್ಲಿ ಆನಂದ ಸುಖವನೀವಳು ರಮಾ,
ಭಕುತ ಜನರೊಡೆಯ ನಮ್ಮ ಪುರಂದರ ವಿಠಲನು,
ಸತತ ಇವರಲಿ ನಿಂತು ಈ ಕೃತಿಯ ನಡೆಸುವನು ||
satata gaNanAtha siddhiyanIva kAryadali
mati prErisuvaLu pArvati dEvI ||pa||
mukuti pathake mAnavIva mahArudra dEvaru,
hari Bakuti dAyakaLu BArati dEvi,
yukuti SAstragaLalli vanaja saMBavanarasi
satkarmagaLa naDesi suj~jAna mati ittu,
gati pAlisuva namma pavamAnanu,
cittadalli AnaMda suKavanIvaLu ramA,
bhakuta janaroDeya namma puraMdara viThalanu,
satata ivarali niMtu I kRutiya naDesuvanu ||
Leave a Reply