Entu tutisali enna

Composer: Shri Gopala dasaru

ಎಂತು ತುತಿಸಲಿ ಎನ್ನ ದೇವನ
ಸಂತತ ನಮ್ಮ ಸಲಹೋನಾ
ಅಂತರಂಗದಿ ಹರಿಯ ತೋರಿಸಿ
ಸಂತೋಷದಿಂದ ನಲಿವ ಪವನನ ||ಪ||

ತಾನು ಮಾಡಿದ ಕರ್ಮಶೇಷವು
ತಾನು ತಿಳುಹಿದ ಜ್ಞಾನಶೇಷವು
ತಾನು ಮಾಡಿದ ಭಕುತಿಶೇಷವು
ನಾನಾ ಸಾಧನಶೇಷವೂ,
ತಾನು ಕರುಣಿಸಿ ಜೀವಯೋಗ್ಯತೆ
ಯೇನು ಅರಿತು ಕರ್ಮ ಮಾಡಿಸಿ
ತಾನು ಸಹಿತ ಧ್ಯಾನದಲಿ ಹರಿ
ಕಾಣಿಸೀ ತೋರ್ಪ ಕರುಣಿಯ ||೧||

ಇವನ ಪ್ರೇರಣೆ ಹರಿಯ ಪ್ರೇರಣೆ
ಇವನ ಸೇವಿಯು ಹರಿಯಸೇವೆಯು
ಇವನ ಕರುಣವೆ ಹರಿಯ ಕರುಣವು
ಇವನ ಬಲವೆ ಪ್ರಬಲವೂ,
ಇವನು ನಂಬಲು ಹರಿಯು ನಂಬಿದ
ಇವನು ಒಲಿಯಲು ಹರಿಯು ಒಲಿವ
ಪವನಾಖ್ಯನಾಗಿ ನಮ್ಮನು
ಪವನಗತಿ ಪೊಂದಿಸುವನು ||೨||

ಜ್ಞಾನ ಭಕುತಿ ವೈರಾಗ್ಯ ಖಣಿಯು
ದಾನವಾಂತಕ ಧರ್ಮಶೀಲಾ
ಪೂರ್ಣಬೋಧೆಯ ಪುಣ್ಯನಾಮಕ
ಪ್ರಾಣೋಪಾನ ಉದಾನರಿಗೆ,
ಪ್ರಾಣ ಮುಖ್ಯಪ್ರಾಣ ಇವ ನಮ್ಮ
ಪ್ರಾಣ ನಿಲ್ಲದು ಇವನು ಇಲ್ಲದಿರೆ
ಪ್ರಾಣಪತಿ ಗೋಪಾಲವಿಟ್ಠಲನ
ಕಾಣಿಸೀ ತೋರ್ಪ ಕರುಣೆಯ ||೩||


eMtu tutisali enna dEvana
saMtata namma salahOnA
aMtaraMgadi hariya tOrisi
saMtOShadiMda naliva pavanana ||pa||

tAnu mADida karmaSEShavu
tAnu tiLuhida j~jAnaSEShavu
tAnu mADida BakutiSEShavu
nAnA sAdhanaSEShavU,
tAnu karuNisi jIvayOgyate
yEnu aritu karma mADisi
tAnu sahita dhyAnadali hari
kANisI tOrpa karuNiya ||1||

ivana prEraNe hariya prEraNe
ivana sEviyu hariyasEveyu
ivana karuNave hariya karuNavu
ivana balave prabalavU,
ivanu naMbalu hariyu naMbida
ivanu oliyalu hariyu oliva
pavanAkhyanAgi nammanu
pavanagati poMdisuvanu ||2||

j~jAna Bakuti vairAgya KaNiyu
dAnavAMtaka dharmaSIlA
pUrNabOdheya puNyanAmaka
prANOpAna udAnarige,
prANa muKyaprANa iva namma
prANa nilladu ivanu illadire
prANapati gOpAlaviTThalana
kANisI tOrpa karuNeya ||3||

Leave a Reply

Your email address will not be published. Required fields are marked *

You might also like

error: Content is protected !!