Composer : Shri Purandara dasaru

By Smt.Shubhalakshmi Rao

ಬಾ ಗುಮ್ಮ ಬಂದಂಜಿಸು ಗುಮ್ಮ ||
ನಮ್ಮ ಸಿರಿ ರಮಣನ ಕಿರಿಚರಣದುಂಗುಟ ಕಚ್ಚು ||ಅ||

ತಿಳಿ ನೀರಲಿ ಮೈಯ ತೊಳೆದು ರಂಗಯ್ಯಗೆ
ಪುನುಗು ಜವ್ವಾಜಿ ಕಸ್ತೂರಿ ಲೇಪಿಸಿದೆ
ತೊಳೆದ ಮೈಯ ಮೇಲೆ ಧೂಳು ಚೆಲ್ಲಿಕೊಂಡು
ಹಳೆಯ ಗೋಡೆಯ ಹೊಂಪುಳಿಯ ಬಿಡಿಸುತಾನೆ |೧|

ನೊರೆ ಹಾಲು ಸಕ್ಕರೆ ಲಡ್ಡಿಗೆ ಮಂಡಿಗೆ
ಉಣಲೊಲ್ಲದೆ ಬಟ್ಟಲೊಳು ಬಿಟ್ಟನು ತಾನೆ
ತಿರುಗ್-ಹೋಗಿ ಯಜ್ಞ ಶಾಲೆಯೊಳುಂಡು ಬರುತಾನೆ
ದಿನಕೆ ನೂರು ಜಗಳವ ಕೊಂಡು ಬರುತಾನೆ |೨|

ಹಾವಿನ ಬಣ್ಣದ ಗುಮ್ಮ ಈ ಮನೆಯ
ಮಾಳಿಗೆ ಚಿಂತೆಯಲಿರು ಕಂಡ್ಯ
ವಾರಿಜನಾಭ ಶ್ರೀ ಪುರಂದರವಿಠಲನ
ಯಾವಾಗಲಾದರು ಹೊಡಿ ಬಾ ಗುಮ್ಮ |೩|


bA gumma baMdaMjisu gumma ||
namma siri ramaNana kiricaraNaduMguTa kaccu ||a||

tiLi nIrali maiya toLedu raMgayyage
punugu javvAji kastUri lEpiside
toLeda maiya mEle dhULu cellikoMDu
haLeya gODeya hoMpuLiya biDisutAne |1|

nore hAlu sakkare laDDige maMDige
uNalollade baTTaloLu biTTanu tAne
tirug-hOgi yaj~ja SAleyoLuMDu barutAne
dinake nUru jagaLava koMDu barutAne |2|

hAvina baNNada gumma I maneya
mALige ciMteyaliru kaMDya
vArijanABa SrI puraMdaraviThalana
yAvAgalAdaru hoDi bA gumma |3|

Leave a Reply

Your email address will not be published. Required fields are marked *

You might also like

error: Content is protected !!