Kolhapura nilaye

Composer: Shri Vijaya dasaru

By Smt.Shubhalakshmi Rao

ಕೊಲ್ಹಾಪುರ ನಿಲಯೇ ಸರಸಿಜಾಲಯೆ ಹರಿ
ವಲ್ಲಭೆ ಬಲು ಸುಲಭೆ ||ಪ||

ಮೂಕಾಸುರನ ಕೊಂದು ಮೂಕಾಂಬಿಕೆನಿಸಿದೆ
ಲೋಕ ಜನನಿ ಕಾಮಿನಿ ಸಾಕಾರ ಗುಣವಂತೆ
ಶ್ರೀ ಕಮಲೆ ಎಲ್ಲಿನಾ ಕಾಣೆ ನಿನಗೆ ಸಮಾ ||೧||

ಕೋಲ ಮುನಿಗೊಲಿದಮಲ ಮೃಗನಾಭಿ
ಫಾಲೆ ಸಜ್ಜನರ ಪಾಲೆ ಬಾಲೆ ಜಾತರಹಿತೆ
ಲೀಲೆ ನಾನಾ ಪುಷ್ಪಮಾಲೆ ಕಮಲಹಸ್ತೆ ||೨||

ಶಿವದುರ್ಗೆ ನೀನೆಂದು ಶ್ರವಣ ಮಾಡಲು ಮನುಜ
ರವರವ ನರಕದಲ್ಲಿ ಬವಣೆ ಪಟ್ಟ ಮೇಲೆ
ಸವಿಯದಂತೆ ತಮಸು ನಿವಹದೊಳಗೆ ಇಪ್ಪನು ||೩||

ಕಾಮತೀರ್ಥ ಬಳಿಯ ಪ್ರೇಮದಿಂದಲಿ ನಿಂದೆ
ಸೀಮೆಯೊಳಗೆ ನಿನ್ನಯ ನಾಮ ಕೊಂಡಾಡಲು
ತಾಮಸಗಳ ಕಳೆದು ನಿಷ್ಕಾಮ ಫಲ ಪಾಲಿಪೆ ||೪||

ಧರೆಯೊಳು ಷೋಡಶ ಗಿರಿಯ ಪ್ರಾದೇಶ ಮಂ
ದಿರ ರಚಿಸಿಕೊಂಡು ಇಪ್ಪೆ ವರವ ಕೊಡುವೆ ನಿತ್ಯ
ಸಿರಿ ವಿಜಯವಿಠ್ಠಲನ್ನ ಪರಮ ಪ್ರೀತಿ ಅರ್ಧಾಂಗಿ ||೫||


kolhApura nilayE sarasijAlaye hari
vallaBe balu sulaBe ||pa||

mUkAsurana koMdu mUkAMbikeniside
lOka janani kAmini sAkAra guNavaMte
SrI kamale ellinA kANe ninage samA ||1||

kOla munigolidamala mRuganABi
PAle sajjanara pAle bAle jAtarahite
lIle nAnA puShpamAle kamalahaste ||2||

Sivadurge nIneMdu SravaNa mADalu manuja
ravarava narakadalli bavaNe paTTa mEle
saviyadaMte tamasu nivahadoLage ippanu ||3||

kAmatIrtha baLiya prEmadiMdali niMde
sImeyoLage ninnaya nAma koMDADalu
tAmasagaLa kaLedu niShkAma Pala pAlipe ||4||

dhareyoLu ShODaSa giriya prAdESa maM
dira racisikoMDu ippe varava koDuve nitya
siri vijayaviThThalanna parama prIti ardhAMgi ||5||

Leave a Reply

Your email address will not be published. Required fields are marked *

You might also like

error: Content is protected !!