Composer : Shri Shrida vittala
Shri Raghuttama Tirtha – 1548 – 1596
Manampoondi,Tirukoilur -TN
bhAvabodhakR^itaM seve
raghuttamamahAgurum |
yacChiShyashiShyashiShyAdyAH
TippaNyAcAryasaMj~nitAH |
Aradhane : Pousha Shukla Ekadashi
ನೋಡಿದೆ ಗುರುಗಳ ನೋಡಿದೆ ||ಪ||
ನೋಡಿದೆನು ಗುರುಗಳ ಪಾದಾಬ್ಜವ
ಪಾಡಿದೆನು ಸನ್ಮಹಿಮೆಗಳ ನಾ
ಬೇಡಿದೆನು ಮನದಣಿಯೆ ವರಗಳ
ಈಡು ಇಲ್ಲದೆ ಕೊಡುವ ಪ್ರಭುಗಳ ||ಅ.ಪ.||
ಪಂಚ ಕೃಷ್ಣಾರಣ್ಯ ಕ್ಷೇತ್ರ ಪಿನಾಕಿನಿ ತೀರದಲಿ ನಿಂತು
ಮಿಂಚುತಿಹ ಕಾಷಾಯದಂಡ ಕಮಂಡಲವ ಧರಿಸುತ್ತ ಧರೆಯೊಳು
ಪಂಚ ಬಾಣನ ಪಿತನ ಗುಣಗಳ ಅಂಚೆಯದಿ ಹೊಗಳುತ್ತ ಹರುಷದಿ
ಸಂಚಿತಾಗಾಮಿಗಳ ಕಳೆದು ಪ್ರಪಂಚದಲಿ ಮೆರೆವಂಥ ಗುರುಗಳ [೧]
ಅಲವಬೋಧರ ಭಾಷ್ಯ ಟೀಕಾ ಭಾವವನು ಸುಜನರಿಗೆ ಬೋಧಿಸಿ
ಕಲುಷ ಮತಗಿರಿ ಸಮುದಾಯಂಗಳ ಕುಲಿಶದಿಂದಲಿ ಖಂಡಿಸುತಲಿ
ಮೂಲರಾಮ ದಿಗ್ವಿಜಯ ರಾಮರ ಪಾದಕಮಲಕೆ ಭೃಂಗನೆನಿಸುತ
ಶೀಲಭಕ್ತಿ ವಿರಕ್ತಿ ಮತಿಗಳ ಪಾಲಿಸುವ ಯತಿಮೌಳಿ ರತುನವ [೨]
ಕಾಮಧೇನು ಸುಕಲ್ಪತರು ಚಿಂತಾಮಣಿಯವೋಲ್ ಕಾಮಿತಾರ್ಥವ
ಪ್ರೇಮದಲಿ ಬೀರುತ್ತ ಅಧ್ಯಾತ್ಮದಿ ತಾಪತ್ರಯವ ಕಳೆಯುವ
ಸ್ವಾಮಿ ಶ್ರೀಹರಿ ಶ್ರೀದವಿಠಲನ ದಾಸರಗ್ರಣಿಯೆನಿಸಿ ಮೆರೆಯುವ
ನೇಮದಿಂದಲಿ ಶ್ರೀ ರಘೂತ್ತಮ ಮೌನಿವರ್ಯರ ಕರುಣ ಬಯಸುತ [೩]
nODide gurugaLa nODide ||pa||
nODidenu gurugaLa pAdAbjava
pADidenu sanmahimegaLa nA
bEDidenu manadaNiye varagaLa
IDu illade koDuva praBugaLa ||a.pa.||
paMca kRuShNAraNya kShEtra pinAkini tIradali niMtu
miMcutiha kAShAyadaMDa kamaMDalava dharisutta dhareyoLu
paMca bANana pitana guNagaLa aMceyadi hogaLutta haruShadi
saMcitAgAmigaLa kaLedu prapaMcadali merevaMtha gurugaLa [1]
alavabOdhara BAShya TIkA BAvavanu sujanarige bOdhisi
kaluSha matagiri samudAyaMgaLa kuliSadiMdali KaMDisutali
mUlarAma digvijaya rAmara pAdakamalake BRuMganenisuta
SIlaBakti virakti matigaLa pAlisuva yatimauLi ratunava [2]
kAmadhEnu sukalpataru ciMtAmaNiyavOl kAmitArthava
prEmadali bIrutta adhyAtmadi tApatrayava kaLeyuva
svAmi SrIhari SrIdaviThalana dAsaragraNiyenisi mereyuva
nEmadiMdali SrI raGUttama maunivaryara karuNa bayasuta [3]
Leave a Reply