-
Rudra veerabhadra
Composer : Shri Vijayadasaru ರುದ್ರಾ ವೀರಭದ್ರ ಅದ್ರಿನಂದನೆ ರಮಣಾ [ಪ]ರೌದ್ರ ಮೂರುತಿ ದಯಾಸಮುದ್ರ ಎನ್ನನು ಕಾಣೊ [ಅ.ಪ.] ಮುಪ್ಪುರವ ಗೆದ್ದ ಮುಕ್ಕಣ್ಣ ಮನ್ಮಥ ವೈರಿಸರ್ಪಭೂಷಣ ಮೃತ್ಯು ನಿವಾರಣಕಪ್ಪುಗೊರಳ ಕೃತ್ತಿವಾಸ ವ್ಯೋಮಕೇಶಒಪ್ಪಿಕೊಳ್ಳಬೇಕು ಒಲಿದು ಈ ವಾಕು [೧] ಸದ್ಯೋಜಾತ ಭೂತನಾಥ ಭಕುತರದಾತಖದ್ಯೋತ ಲಾವಣ್ಯ ಸುರಜ್ಯೇಷ್ಠನಮಧ್ಯವಾಸನ ಛೇದ ಶ್ರೀ ವಿಷ್ಣುವಿನ ಪಾದಹೃದ್ಯದೊಳಗಿಟ್ಟ ಜಟಾ ಜೂಟ ಬಲು ಧಿಟ್ಟ [೨] ಮನೋನಿಯಾಮಕ ಗುರುವೆ ದೈನ್ಯದಿಂದಲಿ ಕರೆವೆಜನಿಸಿ ಕಾಡುವ ರೋಗ ಕಳೆಯೊ ಬೇಗಅನುಪಮ ವಿಜಯವಿಠ್ಠಲನ ನಾಮಾಮೃತವಎನಗುಣಿಸುವುದೋ ಸಾಂಬ ಮರುತ ಪ್ರತಿಬಿಂಬ [೩]…
-
Dhyanavanu madi triveni
Composer : Shri Vijayadasaru ಧ್ಯಾನವನು ಮಾಡಿ ತ್ರಿವೇಣಿ ಕ್ಷೇತ್ರವ ಬಿಡದೆ |ಜ್ಞಾನ ಭಕ್ತಿ ವೈರಾಗ್ಯ ನಾನಾ ಸತ್ಕರ್ಮ ನಿ |ದಾನದಿಂ ಸಿದ್ಧಿಪುದು ಮಾನಸದಲಿ ಸಿರಿ |ಪ್ರಾಣೇಶ ಕುಣಿಯುವನಯ್ಯಾ ಅಯ್ಯ ಅಯ್ಯಾ ||ಪ|| ಹರಿವೀರ ದ್ರುಪದನುದ್ಧರಿಸಿವಾಗಲು ತನ್ನ |ಶರೀರದಿಂದಲಿ ಅಷ್ಟ ಕ್ಷೇತ್ರಗಳ ಪುಟ್ಟಿಸಿ |ವರದೇಶ ವೈಕುಂಠದಲ್ಲಿಟ್ಟನು ಸಪ್ತ |ಪಿರಿಸಹಿತ ತೀರ್ಥರಾಜಾ ||ಮೆರೆವದಿದೆ ಪುಂ ಕ್ಷೇತ್ರ ಉಳಿದವೇಳು ಸ್ತ್ರೀ |ಇರುತಿಪ್ಪವಲ್ಲಿ ಮಿಗಿಲಾದುದಕೆ ಅತಿಶಯವೊ |ಧರಣಿಯೊಳಗಿದಿ ಕಾಲಾಂತರಕೆ ಹರಿತಂದ ವಟ |ತರು ಸಹವಾಗಿ ಅಯ್ಯಾ ಅಯ್ಯಾ ಅಯ್ಯಾ (೧) ತರಣಿಸುತೆ…
