-
Namo namo Shri Bheema
Composer : Shri Pranesha dasaru ನಮೋ ನಮೋ ಶ್ರೀ ಭೀಮ | ನಮೋ ನಮೋ ಜಿತಕಾಮ |ಕಮಲಾಕ್ಷ ದಾಸ | ಪೊರೆಯಬ್ಜಾಪ್ತ ಭಾಸ [ಪ] ಘನಗಿರಿಯೊಳಗೆ ಕುಂತಿ ನಿನ್ನೆತ್ತಿಕೊಂಡಿರಲು |ಧ್ವನಿ ಮಾಡೆ ಹುಲಿ ತಾಯಿ ನಡುಗಿ ಬಿಸುಟೀ ||ತನುವು ನಿನ್ನದು ಸೋಂಕೆ ನಗವೊಡೆದು ಶತಶೃಂಗ- |ವೆನಿಸಿಕೊಂಡಿತೋ ದ್ವಾಪರದಿ ಬಲವಂತ (೧) ಲೋಕದೊಳು ಮನುಜರಾ ಶಿಶುಗಳಂದದಿ ಬೆಳೆದು |ಪಾಕಶಾಸನಿ ಯಮಜ ಯಮಳರ ಜನನೀ |ಯಾ ಕೂಡಿಕೊಂಡು ಇಭಪುರಿಗೈದಿ ಮೋದದಲಿ |ಸಾಕಿಕೊಂಡೆಯಂಬಿಕೆಯ ಮಗನಿಂದಾ (೨) ಚಿಕ್ಕವರೊಡನೆ ಚಂಡು ಬುಗುರಿ…
-
Adariso adariso agama
Composer: Shri Gopaladasaru ಆದರಿಸೋ ಆದರಿಸೊ ಆಗಮ ಪ್ರತಿ ಪಾದ್ಯ |ಮೋದತೀರಥ ಪೂರ್ಣಬೋಧಾಚಾರ್ಯ | ಪ | ಮುನಿ ಕುಲೋತ್ತಮಾ ಶಿರೋರತುನ ಕಾಂಚನ ವರ್ಣಘನಜ್ಞಾನ ಪರಿ ಪೂರ್ಣ ಶುಭಾ ಗುಣಣಾರ್ಣಾ |ಅನಿಮಿಷರ ಗುರುವೆ ಅನಮಿತ್ತಬಂಧು ದಯಾಸಿಂಧು |ಸನಕಾದಿ ವಂದ್ಯನೇ ಸರ್ವಜ್ಞರಾಯಾ || ೧ || ಶಕುತವ್ಯಕುತಾ ವ್ಯಾಪ್ತ ಭಕುತ ಜನಕೆ ಆಪ್ತಭಕುತಿ ನಿಧಿಯೆಂಬೊ ಬಹುಭಾಗ್ಯಭರಿತಾ |ಭಕುತಿರಹಿತ ನಾನಲ್ಲ ಭಕುತ ಕಾಮಧೇನು |ಶುಕುತ ಶೋಣಿತರಹಿತ ಸುಖತೀರ್ಥರಾಯಾ || ೨ || ನಂಬಿದವರಿಗೆ ಮಿತ್ರಾ ಡಂಬ ಜನರಿಗೆ ಶತ್ರುಹಂಬಲಿಸೋ ಜನಕೆ…
-
Yatiye enage neene gatiye
Composer: Shri Gopaladasaru ಯತಿಯೆ ಎನಗೆ ನೀನೆ ಗತಿಯೇ ಅಲ್ಲಾದನ್ನೆ ಅ |ಪ್ರತಿಯೆ ನಾ ಕಾಣೆ ಯಿನ್ನಿಕ್ಷಿತಿಯೊಳಾರಸಿ ನೋಡಾ |ಸತತ ಸನ್ಮಾರ್ಗದ ಪಥವನು ತೋರಿಸಿ |ಗತಿಯಾಗು ದಶಪ್ರಮತಿ ಮುನಿರಾಯ || ಪ || ಜೀವನಾಮಕ ಸರ್ವಜೀವಾರಾಧಾರ ಸಕಲ |ಜೀವೋತ್ತುಮನೆ ವುಪಜೀವ ಸತ್ವ ಜೀವರಾ |ಜೀವೇಶ ಐಕ್ಯವೆಂಬೊ ಜೀವಿಗಳಿಂದ ಜಗದಜೀವರೆಲ್ಲರು ಬಲು ನಿರ್ಜೀವಿಗಳಾಗಿ ಯಿನ್ನು |ಜೀವರಂದಾದಿ ವಿಪ್ರಜೀವನ ಮನಿಯಲ್ಲಿಜೀವಿತನಾಗಿ ಸಜ್ಜಿವಾರ ಗೋಸುಗಾ |ಜೀವ ಈಶಗೆ ಭೇದ ಜೀವಜೀವಕೆ ಭೇದ |ಈ ವಿಧ ಶಾಸ್ತ್ರವುಪಜೀವನ ಮಾಡಿಪ್ಪ || ೧ ||…
