Suladi

  • Krishnavatara suladi – Ava pariyinda

    Composer : Shri Vijayadasaru ಶ್ರೀಕೃಷ್ಣಾವತಾರ ಸ್ತೋತ್ರ ಸುಳಾದಿ ರಾಗ: ಆನಂದಭೈರವಿ ಧ್ರುವತಾಳ ಆವ ಪರಿಯಿಂದ ನಿನ್ನರ್ಚಿಸುವೆ ನಿಗಮಮಣಿದೇವ ಮಹೋತ್ತಮ ಮಹಾ ಮಹಿಮಾಜೀವೋತ್ತಮರು ಪೂರ್ವದಲ್ಲಿ ಜಪತಪ ವ್ರತಪಾವಕಾಹುತಿಯಿಂದಲಾರಾಧಿಸೇಭಾವದಲಿ ಕಾಣರು ಬಹುಕಾಲ ತೊಳಲೆ ರಾ –ಜೀವ ವದನನೆಂದು ಅನಂತಾನಂತ ವೇ –ದಾವಳಿಗಳು ಕೂಗಿ ಪೇಳುತಿವಕೋಹ್ಯಾವರಿಕೆ ಸಂಸಾರ ಡಾವಣಿಯ ನಡುವೆ ಕೊರ –ಳಾವಲಿಗೆ ಸಿಗಬಿದ್ದು ಮಿಡುಕುತಿಪ್ಪಜೀವಾಧಮನು ನಿನ್ನ ಮೆಚ್ಚಿಸಲಾಪೆನೆ ವಸು –ದೇವನಂದನ ದ್ವಿಜಾಪತಿ ಶ್ಯಂದನಾಪೂವಿಲ್ಲನಯ್ಯಾ ಅದೃಶ ವಿಜಯವಿಟ್ಠಲಸೇವಿ ಆಗುವದೆಂತೊ ಮತಿ ವಿಭ್ರಮನಿಗೆ || ೧ || ಮಟ್ಟತಾಳ ಅರ್ಚಿಸುವೆನೆನೆ ನಿನ್ನ…

  • Krishnavatara suladi – Tara tara

    Composer : Shri Vijayadasaru ಶ್ರೀಕೃಷ್ಣಾವತಾರ ಸುಳಾದಿರಾಗ: ಕೇದಾರಗೌಳ ಝಂಪೆತಾಳ ತರ ತರ ತರ ತರ ತರ ತರ ತರನೆ ನಿನ್ನ ನಡುಗಿಸಿಕರ ಕರ ಕರ ಕರ ಕರ ಕರ ಕರದು ನಿನ್ನ ನಿಲಿಸಿಸರ ಸರ ಸರ ಸರ ಸರ ಸರ ಸರನೆ ನಿನ್ನ ವಲಿಸಿವರ ವರ ವರ ವರ ವರ ವರ ವರಗಳನು ಪಡಿಯದಲೆ ಬಿಡುವನೆಸಿರಿಯೊಡಿಯ ಸರರೊಡಿಯ ಎನ್ನೊಡಿಯಾ ಜಗದೊಡಿಯಮರಿಯದಲೆ ನೋಡು ತಡಿಯದಿರು ಮುಂದೆ ಎನಗೊಂದೆ ಪೇಳು –ತ್ತರವ ಇಂದೆ ಇರು ಕೊಡದೆ ಬಿಡುವೆನೆ ಜಗದ…

  • Krishna balamahima suladi – Petta savitri

    Composer : Shri Vijayadasaru ಶ್ರೀವಿಜಯದಾಸಾರ್ಯ ವಿರಚಿತಶ್ರೀಕೃಷ್ಣ ಬಾಲಮಹಿಮಾ ಸುಳಾದಿರಾಗ: ಕಾಂಬೋಧಿ ಧ್ರುವತಾಳ ಪೆತ್ತ ಸಾವಿತ್ರಿ ತನ್ನ ತನುಜಂಗೆ ಪ್ರೀತಿಯಿಂದಎತ್ತಲು ಪೋಗಗೊಡದೆ ಹಸಿದಾನೆಂದುಉತ್ತಮಾನ್ನವ ಮಾಡಿ ಕುಳ್ಳಿರಿಸಿಕೊಂಡು ಬಿಡದೆತುತ್ತುಗಳನ್ನು ಮಾಡಿ ಉಣಿಸುತ ತಾನುಹತ್ತಾದು ಎಂದು ತಲೆದೂಗಿ ಎದ್ದು ಪೋಗಲುಮತ್ತೆ ಕರತಂದು ನ್ಯಾವರಿಸೀಅತಿಶಯವಾಗಿ ರಂಬಿಸಿ ನಾಲ್ಕೂ ಕಡೆಸುತ್ತಲು ತೋರಿ ತೋರಿ ಒಂದೊಂದು ತುತ್ತಾ –ತುತ್ತನೆ ಮಾಡಿ ಒಲ್ಲೆನೆಂದರೆ ಅವನನೆತ್ತಿಯ ಪಿಡಿದು ಚಂಡಿಕೆ ನೆವದಿಂದಇತ್ತ ಪೇಳಾಲದೆ ಕವಳಾ ಬಾಯಿಗೆ ನ –ಗುತ್ತ ಮೋಹದಲ್ಲಿ ಬೇಸರದೆಚಿತ್ತಜನಯ್ಯಾ ನೀನೆ ಆವಾವ ಕಲ್ಪಕ್ಕೆಹೆತ್ತ ತಾಯಿಯಂತೆ ಇಪ್ಪ…

error: Content is protected !!