-
Namah parvati patinuta
Composer : Shri Vyasarajaru ನಮಃ ಪಾರ್ವತಿ ಪತಿ ನುತ ಜನಪರ ನಮೊ ವಿರೂಪಾಕ್ಷ |ಪ್|ರಮಾ ರಮಣನಲಿ ಅಮಲ ಭಕುತಿ ಕೊಡು ನಮೊ ವಿಶಾಲಕ್ಷ |ಅಪ್| ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತ ರಕ್ಷಫಾಲನೆತ್ರ ಕಪಾಲ ರುಂಡ ಮಣಿ ಮಾಲಾಧೃತ ವಕ್ಷ ||ಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷಶ್ರೀ ಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ (೧) ವಾಸವನುತ ಹರಿದಾಸ ಈಶ ಕೈಲಾಸವಾಸ ದೇವದಾಶರಥಿಯ ಔಪಾಸಕ ಸುಜನರ ಪೋಶಿಪ ಪ್ರಭಾವ |ಭಾಷಿಸುತಿಹುದು ಅಶೇಶ ಜೀವರಿಗೆ ಈಶ ನೆಂಬ ಭಾವಶ್ರೀಶನಲ್ಲಿ ಕೀಲಿಸು…
-
Nandivahana ninage
Composer : Shri Kurudi Raghavendrachar – Lakumeesha ankita ನಂದಿವಾಹನ ನಿನಗೆ ವಂದಿಸುವೆ ನಿರುತ |ಶ್ರೀ ಮಂತ್ರ ಮಂದಿರದಿ ಮೆರೆವಂಥ ಗೌರೀ ನಾಥ || ಪ || ಅಜಿನ ವಸನನು ನೀನು ಅಜನಿಗೆ ಸುತನಯ್ಯ |ವಿಜಯ ಸಖನಿಗೆ ಸೂನು ಮೊಮ್ಮಗನು ನೀನು |ವಿಜಯನಿಗೆ ಶರವಿತ್ತೆ ವಿಜಯವೇ ಕರುಣಿಸೈ |ವಿಜಯವಿಠ್ಠಲನಲ್ಲಿ ಭಜಿಪ ಮನ ಕೊಡು ಎಂದೂ || ೧ || ತುಂಗ ವಿಕ್ರಮ ನೀನು ಗಂಗೆಯನು ಜಟದಿಟ್ಟೆ |ಮಂಗೇಶ ಛಾತ್ರನೀ ಭಸ್ಮಾಂಗದವನೇ |ಮಂಗಳಪ್ರದ ನಿರುತ ತಿಂಗಳ ಶೇಖರನೆ…
-
Linga en antaranga
Composer : Shri Vijayadasaru ಲಿಂಗ ಎನ್ನಂತರಂಗ || ಪ ||ಮಂಗಳಾಂಗ ಸರ್ವೋತ್ತುಂಗ ರಾಮ ||ಅ. ಪ.|| ಮಂದಾಕಿನೀಧರಗೆ ಗಂಗಾಂಬು ಮಜ್ಜನವೆಚಂದ್ರಮೌಳಿಗೆ ಗಂಧ ಕುಸುಮದರ್ಪಣೆಯೆಇಂದು ರವಿನೇತ್ರನಿಗೆ ಕರ್ಪೂರದಾರತಿಯೆಕಂದರ್ಪಜಿತಗೆ ಮಿಗಿಲಾಪೇಕ್ಷೆಯೆ ||೧|| ಘನವಿದ್ಯಾತುರನಿಗೆ ಮಂತ್ರಕಲಾಪವೆಧನಪತಿಯ ಸಖಗೆ ಕೈಕಾಣಿಕೆಯೆಮನೆರಜತ ಪರ್ವತಗೆ ಫಣಿಯ ಆಭರಣವೆಮನೋನಿಯಾಮಕಗೆ ಎನ್ನ ಬಿನ್ನಪವೆ || ೨ || ವೈರಾಗ್ಯನಿಧಿಗೆ ಈ ವಿಷಯ ಪದಾರ್ಥವೆಗಿರಿಯೊಡತಿಯ ಪತಿಗೆ ಈ ಸ್ತೋತ್ರವೆವೀರರಾಘವ ವಿಜಯವಿಠ್ಠಲನ ನಿಜಹಸ್ತವಾರಿಜದಳದಿಂದ ನಿಲ್ಲಿಸಿದ ಶಿವ ಮಹಾ || ೩ || liMga ennaMtaraMga || pa ||maMgaLAMga sarvOttuMga…
